ಕುಂಬಳೆ: ನಾಯ್ಕಾಪು ಸಮೀಪದ ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು.
ಕರೊನಾದಿಂದ ದೇಶವ್ಯಾಪಿ ಲಾಕ್ ಡೌನ್‍ನಿಂದ ಸಂಕಷ್ಟಕ್ಕೆ ಒಳಗಾದ ದರ್ಬಾರ್‍ಕಟ್ಟೆ,ಮುಂಡಪ್ಪಳ್ಳ, ಮುಳಿಯಡ್ಕ ಪರಿಸರದ 300 ಕುಟುಂಬಗಳಿಗೆ ಜಾತಿ ಮತ ಬೇಧವಿಲ್ಲದೆ ಕ್ಷೇತ್ರದ ತಂತ್ರಿವರ್ಯ ದೇಲಂಪಾಡಿ ಬಾಲಕೃಷ್ಣ ತಂತ್ರಿಯವರ ದಿವ್ಯ ಉಪಸ್ಥಿತಿಯಲ್ಲಿ ಸರ್ಕಾರದ ನಿಯಮದಂತೆ ಸಾಮಾಜಿಕ ಅಂತರ ಅನುಸರಿಸಿ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಮಂಡಳಿಯ ಮಂಜುನಾಥ ಆಳ್ವ ಮಡ್ವ, ಗೋಪಾಲಕೃಷ್ಣ ಶೆಟ್ಟಿ ಕುತ್ತಿಕ್ಕಾರ್, ಎಸ್.ಎನ್.ರಾವ್ ಮನ್ನಿಪ್ಪಾಡಿ, ಜಯಪ್ರಸಾದ್ ರೈ, ಕೇಶವ ದರ್ಬಾರ್ ಕಟ್ಟೆ, ರಾಘವ ಉಪಸ್ಥಿತರಿದ್ದರು.