ಮಂಜೇಶ್ವರ: ತಲಪ್ಪಾಡಿಯಲ್ಲಿ 100 ಹೆಲ್ಪ್ ಡೆಸ್ಕ್ ಗಳು ಇಂದಿನಿಂದ(ಮೇ4 ರಿಂದ) ಕಾರ್ಯಾಚರಿಸಲಿವೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ರಾಷ್ಟ್ರೀಯ ಹೆದ್ದಾರಿಗಳಾಗಿರುವ 66,47,48 ಗಳ ಮೂಲಕ ಕೇರಳೀಯ ಮೂಲದ ವ್ಯಕ್ತಿಗಳು ಊರಿಗೆ ಮರಳುವ ಸಾಧ್ಯತೆಗಳಿದ್ದು, ಅವರ ಆರೋಗ್ಯ ತಪಾಸಣೆ ಸಹಿತ ಸೌಲಭ್ಯಗಳಿಗಾಗಿ ಹೆಲ್ಪ್ ಡೆಸ್ಕ್ ಕಾರ್ಯಾಚರಿಸಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಈ ನಿಟ್ಟಿನಲ್ಲಿ ಜಿಲ್ಲೆಯ ಗಡಿಪ್ರದೇಶ ತಲಪ್ಪಾಡಿಗೆ ತಲಪುವ ಮಂದಿಯ ಮಾಹಿತಿ, ಆರೋಗ್ಯ ಸ್ಥಿತಿ ಇತ್ಯಾದಿ ತಪಾಸಣೆ ನಡೆಸುವ ನಿಟ್ಟಿನಲ್ಲಿ ವಿಸ್ತೃತ ಸೌಲಭ್ಯ ಏರ್ಪಡಿಸಲಾಗಿದೆ ಎಂದವರು ನುಡಿದರು. ಇಂದು ಬೆಳಗ್ಗೆ 8 ರಿಂದ ತಲಪ್ಪಾಡಿಯ ಚೆಕ್ ಪೆÇೀಸ್ಟ್ ನಲ್ಲಿ 100 ಹೆಲ್ಪ್ ಡೆಸ್ಕ್ ಗಳು ಕಾರ್ಯ ಪ್ರವೃ ತ್ತ ವಾಗಲಿವೆ. ಕೋವಿಡ್ 19 ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ನಡೆದ ವೀಡಿಯೋ ಕಾನ್ ಫೆರೆನ್ಸ್ ನಲ್ಲಿ ಜಿಲ್ಲಾಧಿಕಾರಿ ಈ ವಿಚಾರ ಪ್ರಕಟಿಸಿದರು.
ಜಮ್ಮು ಕಾಶ್ಮೀರ, ಪಂಜಾಬ್, ಹರಿಯಾಣ, ರಾಜಸ್ಥಾನ, ಮಧ್ಯ ಪ್ರದೇಶ, ಗುಜರಾತ್, ಉತ್ತರ ಪ್ರದೇಶ, ದಿಲ್ಲಿ, ಬಿಹಾರ ಸಹಿತ ಕಡೆಗಳಿಂದ ಸರಿಸುಮಾರು 4500 ಮಂದಿ ಸರಕಾರದ ವೆಬ್ ಸೈಟ್ ನಲ್ಲಿ ಈಗಾಗಲೇ ಈ ಬಗ್ಗೆ ತಮ್ಮ ಹೆಸರು ನೋಂದಣಿ ನಡೆಸಿದ್ದಾರೆ.
ವಿಸ್ಕøತ ಸೌಲಭ್ಯಗಳೊಂದಿಗೆ ಹೆಲ್ಪ್ ಡೆಸ್ಕ್ ಗಳು:
ಕರ್ನಾಟಕದ ಗಡಿಯಿಂದ ಜಿಲ್ಲೆಯ ಗಡಿಗೆ ತಲಪುವ ಪ್ರತಿ ವಾಹನಕ್ಕೆ ರಸ್ತೆ ಸಾರಿಗೆ ಅಧಿಕಾರಿ, ಪೆÇಲೀಸರು ಟೋಕನ್ ಒದಗಿಸಲಿದ್ದಾರೆ. ಒಂದರಿಂದ 100 ವರೆಗಿನ ನಂಬ್ರದ ಟೋಕನ್ ಈ ವೇಳೆ ನೀಡುವರು. ಈ ಟೋಕನ್ ನ ಪ್ರಕಾರ ಮಾತ್ರ ಹೆಲ್ಪ್ ಡೆಸ್ಕ್ ಗಳಿಗೆ ಕ್ಯಾಪ್ಟೆನ್/ ಡ್ರೈವರ್ ದಾಖಲೆಗಳ ಸಹಿತ ಪರಿಶೀಲನೆಗಾಗಿ ತೆರಳಬಹುದಾಗಿದೆ. ವಾಹನಗಳಿಂದ ಕೆಳಗಿಳಿಯಲು ಕ್ಯಾಪ್ಟನ್/ ಡ್ರೈವರ್ ಗೆ ಮಾತ್ರ ಅನುಮತಿ ಇರುವುದು. ನಾಲ್ಕು ಸೀಟುಗಳಿರುವ ವಾಹನಗಳಲ್ಲಿ ಮೂವರು, 7 ಸೀಟುಗಳಿರುವ ವಾಹನದಲ್ಲಿ 5 ಮಂದಿ ಮಾತ್ರ ಪ್ರಯಾಣನಡೆಸಬಹುದು. ಕ್ಯಾಪ್ಟನ್/ಡ್ರೈವರ್ ಹಾಜರುಪಡಿಸಿದ ದಾಖಲೆಗಳ ಹಿನ್ನೆಲೆಯಲ್ಲಿ ಜೆ.ಎಚ್.ಐ, ಆರ್.ಟಿ.ಒ., ಕಂದಾಯ ಸಿಬ್ಬಂದಿಯಿರುವ ತಂಡ ವಾಹನ ತಪಾಸಣೆ ನಡೆಸಿ ಪ್ರಯಾಣಿಕ ಸಂಖ್ಯೆ, ರೋಗ ಮಾಹಿತಿ, ಕೋವಿಡ್ ಸಂಹಿತೆ ಪಾಲನೆ, ಈಗಿನ ಸ್ಥಿತಿ ಇತ್ಯಾದಿಗಳ ಖಚಿತತೆ ನಡೆಸುವರು. ಯಾವುದೇ ರೀತಿಯ ರೋಗಲಕ್ಷಣಗಳು ಇದ್ದಲ್ಲಿ ತಕ್ಷಣ ವೈದ್ಯಾಧಿಕಾರಿ ತಪಾಸಣೆ ನಡೆಸುವ ನಿಟ್ಟಿನಲ್ಲಿ ತಪಾಸಣೆ ಕೇಂದ್ರಕ್ಕೆ ಅವರನ್ನು ಒಯ್ಯಲಾಗುವುದು. ತಪಾಸಣೆಯ ನಂತರ ಜಿಲ್ಲೆಯವರಾಗಿದ್ದರೆ ಅವರನ್ನು ಆಂಬುಲೆನ್ಸ್ ಮೂಲಕ ನಿಗಾ ಕೇಂದ್ರಕ್ಕೆ ತಲಪಿಸಲಾಗುವುದು. ಇತರ ಜಿಲ್ಲೆಯವರಾಗಿದ್ದರೆ ಅವರ ಊರಿಗೆ ಮರಳಿಸುವ ನಿಟ್ಟಿನಲ್ಲಿ ಅವರ ವೆಚ್ಚದಲ್ಲಿ ಆಯ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಸಿದ್ಧಪಡಿಸಲಾದ ಹೆಲ್ಪ್ ಡೆಸ್ಕ್ ಗಳಲ್ಲಿ ಪ್ರತ ಅರ್ಧ ತಾಸುಗಳಿಗೊಮ್ಮೆ ರೋಗಾಣುಮುಕ್ತ ಚಟುವಟಿಕೆ ನಡೆಸಲು ಅಗ್ನಿಶಾಮಕದಳ ಅಧಿಕಾರಿ ಹೊಣೆಯಲ್ಲಿರುವರು. ರೋಗ ಲಕ್ಷಣ ಹೊಂದಿರುವವರನ್ನು ಆಸ್ಪತ್ರೆಗಳಿಗೆ ತಲಪಿಸಲು ಜಿಲ್ಲೆಯಲ್ಲಿ ಲಭ್ಯವಿರುವ ಸರ್ಕಾರಿ, ಖಾಸಗಿ ವಲಯಗಳ ಆಂಬುಲೆನ್ಸ್ ಗಳ ಮಾಹಿತಿ ಪಟ್ಟಿ ಸಿದ್ಧಪಡಿಸಿ ತುರ್ತು ಸೇವೆಗೆ ಬಳಸುವವನ್ನು ಹೊರತುಪಡಿಸಿ, ಇತರ ಆಂಬುಲೆನ್ಸ್ ಗಳನ್ನು ಹೆಲ್ಪ್ ಡೆಸ್ಕ್ ಗಳ ಬಳಿ ಸಜ್ಜುಗೊಳಿಸಲಾಗುವುದು.
ತಲಪ್ಪಾಡಿಯಲ್ಲಿ ಸಜ್ಜುಗೊಳಿಸಲಾದ ಹೆಲ್ಪ್ ಡೆಸ್ಕ್ ಗಳಲ್ಲಿ ನೇಮಕಗೊಂಡಿರುವ ಸಿಬ್ಬಂದಿಯನ್ನು ಕರೆತರುವ ನಿಟ್ಟಿನಲ್ಲಿ ಕಾಞಂಗಾಡು, ಕಾಸರಗೋಡು ಪ್ರದೇಶಗಳಿಂದ ಮತ್ತು ಮರಳಿ ಒಯ್ಯಲು ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ನಡೆಸಲಿವೆ. 20 ಡೆಸ್ಕ್ ಗಳಿಗೆ ತಲಾ ಒಬ್ಬರಂತೆ 100 ಹೆಲ್ಪ್ ಡೆಸ್ಕ್ ಗಳಿಗೆ ಅಕ್ಷಯ ಕೇಂದ್ರಗಳಿಂದ ಮೂರು ಶಿಫ್ಟ್ ಗಳಂತೆ 15 ಪರಿಣತರನ್ನು ನೇಮಕಗೊಳಿಸಲಾಗುವುದು. ಕಾಸರಗೋಡು ವಲಯ ಕಂದಾಯಾಧಿಕಾರಿ ಅವರ ಸಮಕ್ಷದಲ್ಲಿ ಚಟುವಟಿಕೆಗಳನ್ನು ಏಕೀಕರಣಗೊಳಿಸುವ ನಿಟ್ಟಿನಲ್ಲಿ ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ತಾತ್ಕಾಲಿಕ ಹೊಣೆಯಲ್ಲಿರುವರು. ಹೆಸರು ನೋಂದಣಿ ನಡೆಸದೇ ಇರುವ ಮಂದಿ ಜಿಲ್ಲೆಯ ಗಡಿ ದಾಟಿ ಬರುವ ಸಾಧ್ಯತೆ ಇರುವುದರಿಂದ ಮೇ 4ರಿಂದ 4 ದಿನಗಳ ವರೆಗೆ ಗಡಿಪ್ರದೇಶದಲ್ಲಿ 24 ತಾಸೂ ಚಟುವಟಿಕೆ ನಡೆಸುವ ಸೌಲಭ್ಯಗಳಿರುವುದು.