ನವದೆಹಲಿ: ಈಶಾನ್ಯ ದೆಹಲಿ ಪ್ರದೇಶವೊಂದನ್ನು ಬಿಟ್ಟು, ದೇಶದೆಲ್ಲೆಡೆ 10ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ರದ್ದುಗೊಳಿಸಿ ಕೇಂದ್ರ ಗೃಹಸಚಿವಾಲಯ(ಎಂಎಚ್ ಆರ್ ಡಿ)ಆದೇಶವನ್ನು ಹೊರಡಿಸಿದೆ. ಈ ಆದೇಶ ಸಿಬಿಎಸ್ ಇಯ ಎಲ್ಲಾ ವಿದ್ಯಾಸಂಸ್ಥೆಗಳಿಗೆ ಅನ್ವಯವಾಗಲಿದೆ. ಆದರೆ, ಕೇರಳದ ಎಸ್ ಎಸ್ ಎಲ್ ಸಿ ಪರೀಕ್ಷೆಗೂ ಇದಕ್ಕೂ ಸಂಬಂಧವಿಲ್ಲ, ಕೇರಳ ರಾಜ್ಯ ಪಠ್ಯಕ್ರಮದಂತೆ ಈಗಾಗಲೇ ತಿಳಿಸಿರುವಂತೆ ಪರೀಕ್ಷೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಟ್ವಿಟ್ಟರಲ್ಲಿ ಈ ಬಗ್ಗೆ ಮೇ 5ರಂದು ತಿಳಿಸಿರುವ ಎಂ ಎಚ್ ಆರ್ ಡಿ ದೇಶದೆಲ್ಲೆಡೆ ಪರೀಕ್ಷೆ ರದ್ದುಪಡಿಸಲಾಗಿದೆ, ದೆಹಲಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಿದ್ಧತೆಗಾಗಿ 10 ದಿನಗಳ ಹೆಚ್ಚಿನ ಕಾಲಾವಕಾಶವನ್ನು ನೀಡಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜುಕೇಷನ್ (ಸಿಬಿಎಸ್ ಇ) ಕೂಡಾ ಈ ಮುಂಚೆ ನೀಡಿದ ಪ್ರಕಟಣೆಯಂತೆ ಕ್ಲಾಸ್ 12 ಪರೀಕ್ಷೆ ನಡೆಸುವ ಬಗ್ಗೆ ಮಾತ್ರ ಚಿಂತನೆ ನಡೆಸಲಾಗಿದೆ ಎಂದು ತಿಳಿಸಲಾಗಿತ್ತು. ವಿದೇಶದಲ್ಲಿರುವ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲು ನೋಂದಣಿಸಿದ್ದರು. ಈ ವಿದ್ಯಾರ್ಥಿಗಳಿಗೂ ಈ ಆದೇಶ ಅನ್ವಯವಾಗಲಿದೆ. ಕೊರೊನಾವೈರಸ್ ಸೋಂಕು ಹರಡದಂತೆ ಲಾಕ್ಡೌನ್ ಆರಂಭವಾಗುತ್ತಿದ್ದಂತೆ ಮಾರ್ಚ್ ತಿಂಗಳಿನಲ್ಲಿ ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಸಿ ಬಿ ಎಸ್ ಇ ಮುಂದೂಡಿತ್ತು.
ಜೆಇಇ ಪರೀಕ್ಷೆ: ಜೆಇಇ ಮುಖ್ಯ ಪರೀಕ್ಷೆ ಜುಲೈ 18 ರಿಂದ 23, ಮೆಡಿಕಲ್ ಪ್ರವೇಶಕ್ಕಾಗಿ ಇರುವ ನೀಟ್ ಪರೀಕ್ಷೆ ಜುಲೈ 26 ರಂದು ನಡೆಸಲಾಗುತ್ತದೆ.
Ministry of HRD ✔ @HRDMinistry Attention class X students! No examination to be held for class X students nationwide, except for students from North-East Delhi. An adequate time of 10 days will be given to all students for the preparation of exams.#EducationMinisterGoesLive 1,866 06:02 ಅಪರಾಹ್ನ - ಮೇ 5,2020 Twitter