HEALTH TIPS

ಸ್ವದೇಶಕ್ಕೆ ಮರಳಲು 12 ಗಂಟೆಗಳಲ್ಲಿ9,000 ಭಾರತೀಯರ ನೋಂದಣಿ!

      ದುಬೈ: ಕೊರೊನ ವೈರಸ್ ನಿಯಂತ್ರಣಕ್ಕಾಗಿ ವಿಧಿಸಲಾಗಿರುವ ಬೀಗಮುದ್ರೆಯ ಹಿನ್ನೆಲೆಯಲ್ಲಿ, 12ಗಂಟೆಯಲ್ಲಿ 9,000 ಭಾರತೀಯರ ನೋಂದಣಿ ಯುಎಇಯಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರು, ಸ್ವದೇಶಕ್ಕೆ ಮರಳಲು ಉತ್ಸುಕರಾಗಿದ್ದಾರೆ. ಭಾರತೀಯರ ವಾಪಸಾತಿಗಾಗಿ ಇಲ್ಲಿನ ಭಾರತೀಯ ದೂತಾವಾಸಗಳು ಇ-ರಿಜಿಸ್ಟ್ರೇಶನ್ ಆರಂಭಿಸಿದ್ದು, 12 ಗಂಟೆಗಳಲ್ಲಿ ಸುಮಾರು 9,000 ಭಾರತೀಯರು ತಮ್ಮ ಹೆಸರುಗಳನ್ನು ನೋಂದಾಯಿಸಿದ್ದಾರೆ.
       ಜನರು ತಮ್ಮ ಹೆಸರುಗಳನ್ನು ನೋಂದಾಯಿಸಲು ಭಾರೀ ಪ್ರಮಾಣದಲ್ಲಿ ಮುಗಿಬಿದ್ದ ಹಿನ್ನೆಲೆಯಲ್ಲಿ, ವೆಬ್‍ಸೈಟ್ ಹಲವು ಬಾರಿ ಸ್ಥಗಿತಗೊಂಡಿತು. ಹೆಸರುಗಳನ್ನು ನೋಂದಾಯಿಸಲು ಸಾಧ್ಯವಾಗುವವರೆಗೆ ಮುಂದಿನ ಕೆಲವು ದಿನಗಳಲ್ಲಿ ಪದೇ ಪದೇ ಪ್ರಯತ್ನಗಳನ್ನು ನಡೆಸುವಂತೆ ಅರ್ಜಿದಾರರಿಗೆ ತಿಳಿಸಲಾಗಿದೆ. ಸ್ವದೇಶಕ್ಕೆ ವಾಪಸಾತಿಗಾಗಿ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂಬುದಾಗಿ ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ದುಬೈಯಲ್ಲಿರುವ ಭಾರತೀಯ ಕೌನ್ಸುಲೇಟ್ ಕಚೇರಿ ಬುಧವಾರ ರಾತ್ರಿ ಘೋಷಿಸಿದವು. ಘೋಷಣೆಯ ಕೆಲವೇ ನಿಮಿಷಗಳಲ್ಲಿ ವೆಬ್‍ಸೈಟ್ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿತು. ಆಗ ನೋಂದಣಿ ಮಾಡುವುದಾಗಿ ಘೋಷಿಸಿದ್ದ ಟ್ವೀಟ್‍ಗಳನ್ನು ರಾಯ ಭಾರ ಕಚೇರಿಗಳು ಅಳಿಸಿಹಾಕಿದವು ಹಾಗೂ ಗಂಟೆಗಳ ಬಳಿಕ ಅದನ್ನು ಮರುಪೆÇೀಸ್ಟ್ ಮಾಡಿದವು.
     ತಾಂತ್ರಿಕ ದೋಷಗಳ ಹೊರತಾಗಿಯೂ ಸುಮಾರು 9,000 ಮಂದಿ ತಮ್ಮ ವಿವರಗಳನ್ನು ನೋಂದಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ದುಬೈಯಲ್ಲಿರುವ ಭಾರತೀಯ ಕೌನ್ಸುಲ್ ಜನರಲ್ ವಿಪುಲ್ ಹೇಳಿದರು.
        ಮೊದಲಿಗೆ ಆದ್ಯತೆ ಯಾರಿಗೆ ಗೊತ್ತಾ:
       ಆರಂಭದಲ್ಲಿ ನೋಂದಣಿ ಮಾಡಿದವರನ್ನು ಆರಂಭಿಕ ವಿಮಾನಗಳಲ್ಲಿ ಕಳುಹಿಸಬೇಕೆಂದೇನೂ ಇಲ್ಲ ಎಂದು ಕೌನ್ಸುಲ್ ಜನರಲ್ ಹೇಳಿದ್ದಾರೆ. ತುರ್ತಾಗಿ ಭಾರತಕ್ಕೆ ಹೋಗ ಬೇಕಾದ ಅಗತ್ಯವಿರುವವರನ್ನು ಆದ್ಯತೆಯ ಮೇಲೆ ಆರಂಭಿಕ ವಿಮಾನಗಳಲ್ಲಿ ಕಳುಹಿಸಲಾಗುವುದು ಎಂದರು. ಭಾರೀ ಕಷ್ಟದಲ್ಲಿರುವ ಕಾರ್ಮಿಕರು, ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವವರು, ಗರ್ಭಿಣಿಯರು, ಹಿರಿಯರು ಮತ್ತು ದುಬೈ ವಿಮಾನ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿ ರುವವರನ್ನು ಆದ್ಯತೆಯ ಮೇಲೆ ಭಾರತಕ್ಕೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries