ತಿರುವನಂತಪುರ: ಕೋವಿಡ್ -19 ಲಾಕ್ ಡೌನ್ ಕಾರಣದಿಂದಾಗಿ ಮುಚ್ಚಲ್ಪಟ್ಟ ಮದ್ಯದಂಗಡಿಗಳನ್ನು ಮತ್ತೆ ಪ್ರಾರಂಭಿಸಲು ನಿರ್ಧರಿಸಿದೆ. ಖಾಲಿ ಇರುವ ವಾಲ್ಟ್ ಅನ್ನು ತುಂಬಲು ಕೇರಳವು ಮದ್ಯದಿಂದ ಭಾರೀ ಸೆಸ್ ವಿಧಿಸಲು ಸಿದ್ಧವಾಗಿದೆ. ತೆರಿಗೆ ಅಥವಾ ಸೆಸ್ ಆಗಿ ಸರ್ಕಾರವು ಆಲ್ಕೋಹಾಲ್ ನಿಂದ ಹೆಚ್ಚುವರಿ ಆದಾಯವನ್ನು ಪಡೆಯಲು ಉದ್ದೇಶಿಸಿದೆ ಎಂದು ವರದಿಗಳು ಹೇಳುತ್ತವೆ. ಮೇ.13 ರಿಂದ ಮದ್ಯದಂಗಡಿಗಳು ತೆರೆಯಲಿವೆ ಎಂದು ಮುಖ್ಯಮಂತ್ರಿಗಳು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದು ಮಾರಾಟ ಬೆಲೆಯನ್ನು ಇನ್ನಷ್ಟೇ ನಿರ್ಧರಿಸಬೇಕಿದೆ.
ಆಲ್ಕೋಹಾಲ್ ಬೆಲೆಯಲ್ಲಿನ ಹೆಚ್ಚಳವು ಬೇಡಿಕೆಯನ್ನು ಕಡಿಮೆ ಮಾಡುವುದಿಲ್ಲ. ದೆಹಲಿ ಸರ್ಕಾರವು ಮದ್ಯದಂಗಡಿಗಳಲ್ಲಿ ಮಾರಾಟವಾಗುವ ವಿದೇಶಿ ಮದ್ಯಕ್ಕೆ ಶೇ 70 ರಷ್ಟು ಕರೋನಾ ಸೆಸ್ ವಿಧಿಸಲು ಪ್ರಾರಂಭಿಸಿದರೂ, ಮಳಿಗೆಗಳಲ್ಲಿ ಸರತಿ ಕಡಿಮೆಯಾಗಿಲ್ಲ. ದೆಹಲಿ ಜೊತೆಗೆ ರಾಜಸ್ಥಾನ ಮತ್ತು ಆಂಧ್ರಪ್ರದೇಶ ಮದ್ಯದ ಬೆಲೆಯನ್ನು ಹೆಚ್ಚಿಸಿವೆ. ಆಂಧ್ರಪ್ರದೇಶ ತೆರಿಗೆಯನ್ನು ಶೇಕಡ 50 ರಿಂದ 70 ಕ್ಕೆ ಮತ್ತು ರಾಜಸ್ಥಾನದಲ್ಲಿ ಶೇ 10 ಕ್ಕೆ ಹೆಚ್ಚಿಸಿದೆ. ಆದರೆ ರಾಜ್ಯವು ಎಷ್ಟು ತೆರಿಗೆಯನ್ನು ಹೆಚ್ಚಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ.
ಪ್ರಸ್ತುತ, ವಿವಿಧ ಮದ್ಯಗಳಿಗೆ ಶೇಕಡಾ 100 ರಿಂದ 210 ತೆರಿಗೆ ವಿಧಿಸಲಾಗುತ್ತದೆ. ಈ ಸನ್ನಿವೇಶದಲ್ಲಿ ಸರ್ಕಾರವು ಇನ್ನೂ ತೆರಿಗೆಗಳನ್ನು ಹೆಚ್ಚಿಸದಿರಬಹುದು. ಈ ಸಂದರ್ಭದಲ್ಲಿ ಅಲ್ಪಾವಧಿಗೆ ಸೆಸ್ ವಿಧಿಸುವ ಸಾಧ್ಯತೆ ಹೆಚ್ಚು. ಈ ಹಿಂದಿನ ಪ್ರವಾಹ ಕಾಲದಲ್ಲಿ ಮದ್ಯದ ಹೆಚ್ಚುವರಿ ಸೆಸ್ 300 ಕೋಟಿ ರೂ. ಏರಿಕೆಯಾಗಿತ್ತು.
ಲಾಕ್-ಡೌನ್ ರಿಯಾಯತಿಯ ಭಾಗವಾಗಿ ಕೇಂದ್ರ ಸರ್ಕಾರ ಮದ್ಯದಂಗಡಿಗಳನ್ನು ತೆರೆಯಲು ಅನುಮೋದನೆ ನೀಡಿದೆ. ಆದರೆ ಭಾರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಬೆವ್ಕೊ ಮತ್ತು ಗ್ರಾಹಕ ಮಳಿಗೆಗಳನ್ನು ತೆರೆಯಲು ರಾಜ್ಯ ಸರ್ಕಾರ ಆದೇಶಿಸಿಲ್ಲ. ಏತನ್ಮಧ್ಯೆ, ಮಹಾರಾಷ್ಟ್ರದ ಮದ್ಯದಂಗಡಿಗಳು ಪ್ರಾರಂಭವಾದ ಮೊದಲ ದಿನದಲ್ಲಿ 11 ಕೋಟಿ ರೂ. ಗಳಿಸಿದೆ. ಮದ್ಯದಂಗಡಿಗಳನ್ನು ತೆರೆದ ಎರಡನೇ ದಿನ, ದೆಹಲಿಯು ದೊಡ್ಡ ಸರತಿ ಸಾಲು ಕಂಡುಬಂತು. ಆದರೆ ಮೊದಲ ದಿನವೇ ವಿಪರೀತ ನಿಯಂತ್ರಣ ತಪ್ಪಿದೆ ಎಂದು ವರದಿಯಾಗಿದೆ. ಬಳಿಕ ವಿವಿಧ ಸ್ಥಳಗಳಲ್ಲಿ ಜನರು ಸಾಮಾಜಿಕ ದೂರವನ್ನು ಕಾಯ್ದುಕೊಳ್ಳಲು ವಿಫಲವಾದ ನಂತರ ಪೆÇಲೀಸರು ಅಂಗಡಿಗಳನ್ನು ಮುಚ್ಚಿದ್ದರು.