ನವದೆಹಲಿ: ಕೊರೋನಾ ಮಹಾಮಾರಿಯನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಇದೀಗ ಮೂರನೇ ಬಾರಿಗೆ ಲಾಕ್ ಡೌನ್ ಅನ್ನು ಘೋಷಿಸಿದ್ದು ಆರೆಂಜ್ ಮತ್ತು ಗ್ರೀನ್ ಜೋನ್ ಗಳಲ್ಲಿ ಕೆಲವೊಂದು ವಿನಾಯ್ತಿಗಳನ್ನು ನೀಡಿದೆ.
ರೆಡ್ ಜೋನ್ ನಲ್ಲಿರುವ ದೇಶದ 130 ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಲ್ಲಿರಲಿದೆ. ಇದರಲ್ಲಿ ಕರ್ನಾಟಕದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಜಿಲ್ಲೆಗಳು ಸೇರಿವೆ. ಮೇ 4ರಿಂದ ಎಲ್ಲಾ ಜೋನ್ ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ ಸಾರ್ವಜನಿಕವಾಗಿ ಮದ್ಯ ಸೇವನೆ ಮಾಡುವಂತಿಲ್ಲ. ಪಾರ್ಸಲ್ ತೆಗೆದುಕೊಂಡು ಹೋಗಲು ಅನುಮತಿ ಇರಲಿದೆ.
ಆರೆಂಜ್ ಮತ್ತು ಗ್ರೀನ್ ಜೋನ್ ಗಳಲ್ಲಿ ಏನಿರಲಿದೆ!
* ಕೈಗಾರಿಕೆಗಳಿಗೆ ಶರತ್ತುಬದ್ಧ ಅನುಮತಿ
* ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ತೆರೆಯಲು ಅವಕಾಶ. ಔಷದ ವೈದ್ಯಕೀಯ ಸಲಕರಣೆಗಳ ಉತ್ಪಾದನೆಗೆ ಅವಕಾಶ.
* ಗ್ರೀನ್ ನಲ್ಲಿ ಬಸ್ ಸಂಚಾರಕ್ಕೆ ಅವಕಾಶ. 50ರಷ್ಟು ಪ್ರಯಾಣಿಕರಿಗೆ ಅವಕಾಶ.
* ಆರೆಂಜ್ ಜೋನ್ ನಲ್ಲಿ ಟ್ಯಾಕ್ಸಿ ಓಡಾಟಕ್ಕೆ ಅನುಮತಿ ಸಿಕ್ಕಿದ್ದು ಒಂದು ವಾಹನದಲ್ಲಿ ಇಬ್ಬುರ ಮಾತ್ರ ಓಡಾಡಬಹುದು. ಅಂತರ್ ಜಿಲ್ಲೆ ಓಡಾಟಕ್ಕೆ ಅನುಮತಿ ಪಡೆಯಬೇಕು.
* ಕಟ್ಟಡ ಕಾರ್ಮಿಕರು, ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ಶರತ್ತುಬದ್ಧ ಅನುಮತಿ. ಹೊರರಾಜ್ಯಗಳಿಂದ ಕಾರ್ಮಿಕರನ್ನು ಕರೆತರುವಂತಿಲ್ಲ.
* ಎಲ್ಲರೂ ಆರೋಗ್ಯ ಸೇತು ಆಪ್ ಬಳಸುವುದು ಕಡ್ಡಾಯ.
* ಗೂಡ್ಸ್ ವಾಹನಗಳಿಗೆ ಅವಕಾಶ.
ಏನಿರಲ್ಲ!
* ಶಾಪಿಂಗ್ ಮಾಲ್, ಕಾಂಪ್ಲೆಕ್ ಗಳಿಗೆ ಅನುಮತಿ ಇಲ್ಲ.
* ಸೆಲೂನ್, ಹೊಟೇಲ್, ರೆಸ್ಟೋರೆಂಟ್, ಪಬ್ ತೆರೆಯುವಂತಿಲ್ಲ.
* ವಿಮಾನ, ರೈಲು ಸಂಚಾರಕ್ಕೆ ಅವಕಾಶವಿಲ್ಲ.