ತಿರುವನಂತಪುರಂ: ಕೇಂದ್ರ ಸರ್ಕಾರ ದೇಶವ್ಯಾಪಿ ಕೊರೋನಾ ಸೋಂಕು ಅಪಾಯಕಾರಿ ಮಟ್ಟದಲ್ಲಿರುವ ಪ್ರದೇಶಗಳನ್ನು ಗುರುತಿಸಿ, ರೆಡ್, ಅರೆಂಜ್ ಮತ್ತು ಗ್ರೀನ್ ಜೋನ್ ಎಂದು ವರ್ಗೀಕರಿಸಿದ್ದು, ಕೇರಳದ ಎರಡು ಜಿಲ್ಲೆಗಳು ಮಾತ್ರ ರೆಡ್ ಜೋನ್ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಕಣ್ಣೂರ್ ಮತ್ತು ಕೊಟ್ಟಾಯಂ ಮಾತ್ರ ರೆಡ್ ಜೋನ್ ನಲ್ಲಿದ್ದು, ಎರ್ನಾಕುಲಂ ಮತ್ತು ವಯನಾಡು ಜಿಲ್ಲೆಗಳು ಗ್ರೀನ್ ಜೋನ್ ನಲ್ಲಿವೆ. ಕೇರಳ ರಾಜಧಾನಿ ತಿರುವನಂತಪುರಂ ಸೇರಿದಂತೆ ಉಳಿದ 10 ಜಿಲ್ಲೆಗಳು ಅರೆಂಜ್ ನಲ್ಲಿವೆ.
ದೇಶಾದ್ಯಂತ ಜಾರಿಗೊಳಿಸಲಾಗಿರುವ ಎರಡನೇ ಹಂತದ ಲಾಕ್ ಡೌನ್ ಭಾನುವಾರ ಅಂತ್ಯವಾಗುತ್ತಿದ್ದು, ಲಾಕ್ ಡೌನ್ ನಂತರ ರೆಡ್, ಅರೆಂಜ್ ಮತ್ತು ಗ್ರೀನ್ ಜೋನ್ ಗಳಿಗೆ ಯಾವ ವಿನಾಯ್ತಿಗಳನ್ನು ನೀಡಬೇಕು ಎಂಬುದರ ಬಗ್ಗೆ ಎಲ್ಲಾ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಯವರಿಗೆ ಕೇಂದ್ರ ಸ್ಪಷ್ಟ ಸೂಚನೆ ನೀಡಿದೆ. ವೈರಸ್ ಸೋಂಕಿನ ತೀವ್ರತೆಯ ಆಧಾರದ ಮೇಲೆ ಈ ಮೂರು ಪಟ್ಟಿಗಳನ್ನು ಮಾಡಲಾಗಿತ್ತು, ರೆಡ್ ಝೋನ್, ಆರೆಂಜ್ ಝೋನ್ ಮತ್ತು ಗ್ರೀನ್ ಝೋನ್ ಗಳನ್ನು ಪಟ್ಟಿ ಮಾಡಲಾಗಿದೆ. ರೆಡ್ ಝೋನ್ ನಲ್ಲಿ ಸೋಂಕಿನ ತೀವ್ರತೆ ಅಪಾಯಕಾರಿ ಮಟ್ಟದಲ್ಲಿರುತ್ತದೆ. ಬೆರಳೆಣಿಕೆ ಪ್ರಕರಣಗಳಿರುವುದು ಆರೆಂಜ್ ಪಟ್ಟಿಯಲ್ಲಿವೆ. ಕಳೆದ 15 ದಿನಗಳಿಂದ ಒಂದು ಪ್ರಕರಣ ದಾಖಲಾಗದೆ ಇರುವ ಪ್ರದೇಶಗಳನ್ನು ಗ್ರೀನ್ ಝೋನ್'ಗೆ ಸೇರಿಲಾಸಲಾಗಿದೆ. ಒಟ್ಟು 733 ಜಿಲ್ಲೆಗಳನ್ನು ಈ ಮೂರು ಪಟ್ಟಿಗೆ ವಿಭಾಗಿಸಲಾಗಿದೆ.
ರೆಡ್ ಝೋನ್ ಪಟ್ಟಿಯಲ್ಲಿ ದೇಶದ 130 ಜಿಲ್ಲೆಗಳಿವೆ. ಕರ್ನಾಟಕದ ಮೂರು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಜಿಲ್ಲೆಗಳು ಕೆಂಪು ವಲಯದಲ್ಲಿವೆ.