ಕಾಸರಗೋಡು: ಜಿಲ್ಲೆಯಲ್ಲಿ ಜಾರಿಯಲ್ಲಿರುವ ನಿಷೇದಾಜ್ಞೆ ಯ ಹಿನ್ನೆಲೆಯಲ್ಲಿ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ನೀಡಲಾಗಿದ್ದ ವಿನಾಯಿತಿಯನ್ನು ಮೇ 4ರಿಂದ ಬೆಳಗ್ಗೆ 7 ರಿಂದ ಸಂಜೆ 5 ಗಂಟೆ ವರೆಗೆ ವಿಸ್ತರಿಸಲಾಗಿದೆ. ಆದರೆ ಬೆಳಗ್ಗೆ 7 ಗಂಟೆಗೆ ಮೊದಲು ಮನೆಯಿಂದ ಹೊರಗಿಳಿಯಲು ಅನುಮತಿಯಿಲ್ಲ.
ಇಂದಿನಿಂದ ತೆರೆಯಬಹುದಾದ ಸಂಸ್ಥೆಗಳು:
ಇಂದಿನಿಂದ(ಮೇ 4) ಅಲ್ಯಮಿನಿಯಂ ಫ್ಯಾಬ್ರಿಕೇಷನ್, ಮರದ ಮಿಲ್, ಪ್ಲೈ ವುಡ್ ಖಾರ್ಖಾನೆ ಇತ್ಯಾದಿ ತೆರೆಯಬಹುದು. ಇಲ್ಲಿ ರೋಗಾಣು ಮುಕ್ತ ಚಟುವಟಿಕೆ ನಡೆಸುವ ನಿಟ್ಟಿನಲ್ಲಿ ಸಾನಿಟೈಸರ್, ಮಾಸ್ಕ್, ಗ್ಲೌ ಸ್ ಇತ್ಯಾದಿಗಳನ್ನುಬಳಸಬೇಕು. ಫೆÇಟೋ ಸ್ಟುಡಿಯೋಗಳು, ಪ್ರಿಂಟಿಂಗ್ ಪ್ರೆಸ್‍ಗಳು ಎಲ್ಲ ಮಂಗಳವಾರವೂ ಕಾರ್ಯಾಚರಿಸಬಹುದು. ಜಿಲ್ಲೆಯಲ್ಲಿ ಕೇವಲ ಒಬ್ಬ ಪ್ರಯಾಣಿಕನನ್ನು ಕರೆದೊಯ್ಯುವ ನಿಟ್ಟಿನಲ್ಲಿ ಟ್ಯಾಕ್ಸಿ ಸೇವೆ ಆರಂಭಿಸಬಹುದು. ವಾಹನವೇರುವ ಮುನ್ನ ಸಾನಿಟೈಸರ್ ಬಳಸಿ ಕೈ ಶುಚಿಗೊಳಿಸಬೇಕು. ಆಟೋರಿಕ್ಷಾ ಸಂಚಾರಕ್ಕೆ ಅನುಮತಿಯಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅನಿವಾರ್ಯ ಸೇವೆ, ಸರ್ಕಾರಿ ಕಚೇರಿ:
ಅನಿವಾರ್ಯ ಸೇವೆ, ಸರ್ಕಾರಿ ಕಚೇರಿಗಳು ಇಂದಿನಿಂದ ಕಾರ್ಯಾಚರಿಸಬಹುದು. ಕಂದಾಯ, ಪೆÇಲೀಸ್, ಕೃಷಿ, ಪಶುಸಂಗೋಪನೆ, ಜಿಲ್ಲಾ ಪಂಚಾಯಿತಿ, ಅಗ್ನಿ ಶಾಮಕ, ಸ್ಥಳೀಯಾಡಳಿತೆ, ಆಹಾರ ಸುರಕ್ಷೆ, ಲೋಕೋಪಯೋಗಿ,ನೀರಾವರಿ, ಎಲ್.ಎಸ್.ಜಿ.ಡಿ., ಜಲ ಪ್ರಾಧಿಕಾರ, ಕೆ.ಎಸ್.ಇ.ಬಿ., ಕುಟುಂಬ ಶ್ರೀ, ಸಿವಿಲ್ ಸಪ್ಲೈಸ್ ಇಲಾಖೆಗಳು ಕಾರ್ಯಾಚರಿಸಬಹುದು. ಸಿಬ್ಬಂದಿಯ ಅಗತ್ಯಕ್ಕನುಸಾರ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ನಡೆಸಲಿವೆ. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಸಾಬು, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ಡಿ.ಡಿ.ಪಿ. ರೆಜಿ ಕುಮಾರ್, ರಸ್ತೆ ಸಾರಿಗೆ ಅಧಿಕಾರಿ ಮನೋಜ್ ಎಸ್.,ಡಿ.ವೈಎಸ್.ಪಿ. ಸುನಿಲ್ ಕುಮಾರ್, ಇತರಇಲಾಖೆಗಳ ಜಿಲ್ಲಾ ಮಟ್ಟದ ಮುಖ್ಯಸ್ಥರು ಉಪಸ್ಥಿತರಿದ್ದರು.