ತಿರುವನಂತಪುರ: ತಿರುವನಂತಪುರದ ಇಬ್ಬರು ಕೋವಿಡ್ 19 ಪರೀಕ್ಷಾ ವರದಿಗಳು ಎರಡು ಲ್ಯಾಬ್ ಗಳಲ್ಲಿ ವ್ಯತ್ಯಸ್ಥವಾಗಿ ಬಂದಿರುವುದು ಹೆಚ್ಚು ಆತಂಕಕ್ಕೆ ಕಾರಣವಾದ ಘಟನೆ ನಡೆದಿದ್ದು ಹಲವು ಸಂಶಯಗಳಿಗೂ ಎಡೆಮಾಡಿದೆ.
ತಿರುವನಂತಪುರದ ರಾಜೀವ್ ಗಾಂಧಿ ಇನ್ಸ್‍ಟ್ಯೂಟ್ ಆಫ್ ಬಯೋ ಟೆಕ್ನೋಲಜಿ ನಡೆಸಿದ ರೋಗಿಯೊಬ್ಬರ ಪರಿಶೋಧನೆಯಲ್ಲಿ ಪಾಸಿಟಿವ್ ವರದಿ ಬಂದಿದ್ದರೆ, ತಿರುವನಂತಪುರ ಮೆಡಿಕಲ್ ಕಾಲೇಜಿನ ಮೊದಲ ಪರಿಶೋಧನಾ ವರದಿಯಲ್ಲಿ ಅದೇ ವ್ಯಕ್ತಿಯದ್ದು ನೆಗೆಟಿವ್ ಆಗಿ ಆಶ್ಚರ್ಯ ಮೂಡಿಸಿತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕಡನಪ್ಪಳ್ಳಿ ಸುರೇಂದ್ರನ್ ಅವರು, ಈ ರೀತಿಯ ವ್ಯತ್ಯಸ್ಥ ವರದಿಗಳು ಸಹಜ. ಅಗತ್ಯವಿದ್ದರೆ ಕೋವಿಡ್ ಪರಿಶೀಲನೆಯ ರಾಜ್ಯದ ಮೊದಲ ಅಧಿಕೃತ ಪ್ರಯೋಗಾಲಯವಾದ ಆಲಪ್ಪುಳ ವೈದ್ಯಕೀಯ ವಿದ್ಯಾಲಯದಲ್ಲಿ ಮರು ಪರಿಶೀಲನೆ ನಡೆಸಬಹುದಾಗಿದೆ ಎಂದಿರುವರು.
ತಿರುವನಂತಪುರ ನೆಯ್ಯಾಟಿಂಗರ ಖಾಸಗೀ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಯಲ್ಲಿದ್ದ ಇಬ್ಬರು ಕೋವಿಡ್ ರೋಗಿಗಳ ಜೊಲ್ಲು ಪರಿಶೀಲನೆಯನ್ನು ತಿರುವನಂತಪುರದ ರಾಜೀವಗಾಂಧಿ ಬಯೋ ಟೆಕ್ನೋಲಜಿಯಲ್ಲಾಗಿತ್ತು. ಈ ಪರಿಶೀಲನೆಯಲ್ಲಿ ರೋಗ ಪಾಸಿಟಿವ್ ಎಂದು ಕಂಡುಬಂದಿದ್ದರಿಂದ ಕೋವಿಡ್ ರೋಗಿಗಳೆಂದು ಘೋಶಿಸಿ ತಿರುವನಂತಪುರ ವೈದ್ಯಕೀಯ ಮಹಾ ವಿದ್ಯಾಲಯಕ್ಕೆ ಬಳಿಕ ಸ್ಥಳಾಂತರಿಸಲಾಗಿತ್ತು. ಜೊತೆಗೆ ಅದೇ ದಿನ ಕೋವಿಡ್ ಪರಿಶೀಲನೆಯನ್ನೂ ಮತ್ತೆ ನಡೆಸಲಾಗಿತ್ತು. ಆ ಪರಿಶೀಲನಾ ವರದಿ ಗುರುವಾರ ಹೊರಬಂದಿದ್ದು, ಅದು ನೆಗೆಟಿವ್ ಆಗಿ ಗುರುತಿಸಲ್ಪಟ್ಟಿದೆ. ಮುಂದಿನ 48 ಗಂಟೆಗಳಲ್ಲಿ ಮತ್ತಿಬ್ಬರು ರೋಗಿಗಳ ಪರಿಶೋಧನಾ ವರದಿಗಳೂ ಹೊರಬರಲಿದೆ.
ಈ ಬಗ್ಗೆ ರಾಜೀವ್ ಗಾಂಧಿ ಬಯೋಟೆಕ್ನೋಲಜಿ ಸಂಸ್ಥೆಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಈ ಇನ್ಸ್‍ಟಿಟ್ಯೂಟ್ ನಲ್ಲಿ ಜರ್ಮನ್ ತಂತ್ರಜ್ಞಾನ ಆಧಾರಿತ ಪರಿಶೋಧನೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.