ಲಂಡನ್: ವಿಶ್ವದಾದ್ಯಂತ ಕೊರೋನಾ ಆರ್ಭಟ ಹೆಚ್ಚಾಗುತ್ತಲೇ ಇದ್ದು, ಮಹಾಮಾರಿ ವೈರಸ್'ಗೆ ಈ ವರೆಗೂ 2.33 ಲಕ್ಷ ಮಂದಿ ಬಲಿಯಾಗಿದ್ದಾರೆ. ಅಲ್ಲದೆ, ಸೋಂಕಿತರ ಸಂಖ್ಯೆ 32.76 ಲಕ್ಷಕ್ಕೆ ಏರಿಕೆಯಾಗಿದೆ.
ವಿಶ್ವದ ಒಟ್ಟು 187 ರಾಷ್ಟ್ರಗಳಲ್ಲಿ ಕೊರೋನಾ ವೈರಸ್ ಮರಣ ಮೃದಂಗವನ್ನು ಮುಂದುವರೆಸಿದೆ. ಇದರ ಪರಿಣಾಮ 32,76,373 ಮಂದಿ ಸೋಂಕಿನಿಂದ ಬಳಲುತ್ತಿದ್ದು, 2,33,998 ಮಂದಿ ಸಾವನ್ನಪ್ಪಿದ್ದಾರೆ. 187 ರಾಷ್ಟ್ರಗಳ ಪೈಕಿ ಅಮೆರಿಕಾದಲ್ಲಿಯೇ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಈವರೆಗೂ ಆ ರಾಷ್ಟ್ರದಲ್ಲಿ 11,13,437 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಸ್ಪೇನ್ ನಲ್ಲಿ 2,42,988, ಇಟಲಿಯಲ್ಲಿ 2,07,428, ಬ್ರಿಟನ್ ನಲ್ಲಿ 1,77,454, ಜರ್ಮನಿಯಲ್ಲಿ 1,63,542, ಫ್ರಾನ್ಸ್ ನಲ್ಲಿ 1,30,185 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.
ಇದರಂತೆ ಸಾವಿನ ಸಂಖ್ಯೆ ಕೂಡ ಹೆಚ್ಚಾಗಿದ್ದು, ಅಮೆರಿಕಾದಲ್ಲಿ 64,715, ಇಟಲಿಯಲ್ಲಿ 28,236, ಬ್ರಿಟನ್ ನಲ್ಲಿ 27,510, ಸ್ಪೇನ್ ನಲ್ಲಿ 24,824, ಫ್ರಾನ್ಸ್ ನಲ್ಲಿ 24,594ಮಂದಿ ಬಲಿಯಾಗಿದ್ದಾರೆ.