ಕಾಸರಗೋಡು: ಕೋವಿಡ್ ಕಾರಣ ಹಠಾತ್ ಆಗಿ ಮುಂದೂಡಲ್ಪಟ್ಟಿದ್ದ ಎಸ್.ಎಸ್.ಎಲ್.ಸಿ. ಮತ್ತು ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳ ಬಾಕಿ ಉಳಿದಿರುವ ಪರೀಕ್ಷೆಗಳು ಮೇ 21 ರಿಂದ ಆರಂಭಗೊಂಡು ಮೇ 29 ರಂದು ಕೊನೆಗೊಳ್ಳಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಶಿಕ್ಷಣ ಇಲಾಖೆ ತಯಾರಿಸಿದ ನಿರ್ದೇಶದಂತೆ ಮೇ 21 ರಂದು ವಿ.ಎಚ್.ಎಸ್.(ಪೊಕೇಶನಲ್ ಹೈಯರ್ ಸೆಕೆಂಡರಿ)ನ ಒಂದು ಪರೀಕ್ಷೆ ನಡೆಯಲಿದೆ. ಮೇ 22 ರಂದು ಪ್ರಥಮ ವರ್ಷದ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯುವುದು. ಮೇ 26, 27 ಮತ್ತು 28 ರಂದು ಬೆಳಗ್ಗೆ ದ್ವಿತೀಯ ವರ್ಷ ಹೈಯರ್ ಸೆಕೆಂಡರಿ ಮತ್ತು ಮಧ್ಯಾಹ್ನ ಎಸ್‍ಎಸ್‍ಎಲ್‍ಸಿ ಯ ಉಳಿದ ಪರೀಕ್ಷೆ ನಡೆಯಲಿದೆ. ದ್ವಿತೀಯ ವರ್ಷ ವಿದ್ಯಾರ್ಥಿಗಳ ಉಳಿದ ಒಂದು ಪರೀಕ್ಷೆ ಮೇ 29 ರಂದು ನಡೆಯಲಿದೆ. ಅಂದು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೂ ಪರೀಕ್ಷೆ ಇದೆ.
ಜೂನ್ ತಿಂಗಳಲ್ಲೇ ಪಾಠ ಆರಂಭ :
ಜೂನ್ ತಿಂಗಳ 1 ರ ಮುಂಚಿತವಾಗಿ ಪರೀಕ್ಷೆಗಳು ಮುಗಿಸಲು ಸಾಧ್ಯವಾಗುವುದಿದ್ದರೂ ಶಾಲೆ ಆರಂಭಿಸುವ ದಿನಾಂಕದ ಕುರಿತು ಯಾವುದೇ ಚಿಂತನೆ ನಡೆದಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಶಾಲೆ ಆರಂಭಿಸಲು ಕೇಂದ್ರ ಸರ್ಕಾರದ ಅನುಮತಿ ಬೇಕು. ಶಾಲೆ ಆರಂಭಗೊಳ್ಳಲು ವಿಳಂಬವಾಗುವುದಿದ್ದರೂ ಜೂನ್ 1 ರಿಂದಲೇ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪಾಠ ವಿಕ್ಟರ್ಸ್ ಚಾನೆಲ್‍ನಲ್ಲಿ(ವಿದ್ಯಾರ್ಥಿಗಳಿಗೆ ಪಠ್ಯಗಳು ಉತ್ತಮ ರೀತಿಯಲ್ಲಿ ಮನನವಾಗುವಂತೆ ರಾಜ್ಯ ಸರ್ಕಾರದಿಂದ ನಡೆಸಲಾಗುತ್ತಿರುವ ವಿಶೇಷ ಟೆಲಿವಿಷನ್ ಚಾನೆಲ್-ಯೂ ಟ್ಯೂಬ್ ಮತ್ತು ಕೇಬಲ್ ಟಿ.ವಿ ಯಲ್ಲಿ ಈಗಾಗಲೇ ಲಭ್ಯ. ಆದರೆ ವಿವಿಧ ಡಿಷ್ ಚಾನೆಲ್ ಗಳಲ್ಲೂ ಲಭ್ಯವಾಗುವಂತೆ ಇನ್ನು ವ್ಯವಸ್ಥೆ ಕಲ್ಪಿಸಲಾಗುವುದೆಂದು ಶಿಕ್ಷಣ ತಂತ್ರಜ್ಞಾನ ಇಲಾಖೆ ತಿಳಿಸಿದೆ.) ನಡೆಯಲಿದೆ. ಇದು ಇಂಟರ್‍ನೆಟ್‍ನಲ್ಲೂ, ಮೊಬೈಲ್‍ನಲ್ಲೂ ಲಭಿಸುವುದು. ಈ ಸೌಕರ್ಯಗಳಿಲ್ಲದಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸೌಕರ್ಯ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಮಾಹಿತಿ ನೀಡಿರುವರು.