HEALTH TIPS

ಭಾರತದಲ್ಲಿ 52 ಸಾವಿರ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ: ಮಹಾರಾಷ್ಟ್ರದಲ್ಲಿ ಮತ್ತೊಬ್ಬ ಪೆÇಲೀಸ್ ಸಾವು

Top Post Ad

Click to join Samarasasudhi Official Whatsapp Group

Qries

Qries

      ನವದೆಹಲಿ: ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಗುರುವಾರ 52 ಸಾವಿರ ಗಡಿ ದಾಟಿದ್ದು ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿ ಪ್ರಕಾರ ಒಟ್ಟು ಸೋಂಕಿತರ ಸಂಖ್ಯೆ 52 ಸಾವಿರದ 952 ಆಗಿದೆ.
     ಆರೋಗ್ಯ ಸಚಿವಾಲಯದ ಅಂಕಿಅಂಶ ಪ್ರಕಾರ ದೇಶದಲ್ಲಿ 35 ಸಾವಿರದ 902 ಸಕ್ರಿಯ ಕೊರೋನಾ ಸೋಂಕಿತ ಕೇಸುಗಳಿದ್ದು 15 ಸಾವಿರದ 266 ರೋಗಿಗಳು ಗುಣಮುಖರಾಗಿದ್ದಾರೆ, ಇನ್ನು ಹಲವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ದೇಶದಲ್ಲಿ ಇದುವರೆಗೆ ಒಟ್ಟಾರೆ 1,783 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
     ಮಹಾರಾಷ್ಟ್ರದ ಸೋಲಾಪುರದ ಎಂಐಡಿಸಿ ಪೆÇಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ಕಳೆದ ಮಂಗಳವಾರ ಕೊರೋನಾ ಸೋಂಕಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿಗೆ ಮೃತಪಟ್ಟ ಪೆÇಲೀಸ್ ಸಿಬ್ಬಂದಿ ಸಂಖ್ಯೆ 5ಕ್ಕೇರಿದೆ.
     ದೇಶದಲ್ಲಿ ಮುಂಬೈ, ಪುಣೆ,ಥಾಣೆ, ದೆಹಲಿ ಮತ್ತು ಗುಜರಾತ್ ನ ಅಹಮದಾಬಾದ್, ಸೂರತ್ ನಗರಗಳಲ್ಲಿ ಹೆಚ್ಚು ಮಂದಿ ಕೊರೋನಾ ಸೋಂಕಿತರಿದ್ದಾರೆ. ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಚೆನ್ನೈಯ ಕೊಯಂಬೆಡು ಸಗಟು ಮಾರುಕಟ್ಟೆ ಮುಚ್ಚಿರುವುದರಿಂದ ಚೆನ್ನೈ ನಗರದಲ್ಲಿ ತರಕಾರಿಗೆ ವ್ಯತ್ಯಯ ಉಂಟಾಗಿದೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries