ಕಾಸರಗೋಡು: ಕೋವಿಡ್ ಕಾಲದಲ್ಲಿ ಜನತೆಯ ಆಹಾರ ಸುರಕ್ಷೆ ಖಚಿತಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ನೀಡುತ್ತಿರುವ ಉಚಿತ ಆಹಾರ ಧಾನ್ಯ ಗಳ ಕಿಟ್ ವಿತರಣೆ ಜಿಲ್ಲೆಯಲ್ಲಿ ಶೇ 99.05 ನಡೆದಿದೆ. ಪಿಂಲ್ ಕಾರ್ಡ್ (ಅಂತ್ಯೋದಯ ಅನ್ನಪೂರ್ಣ ಪಡಿತರ ಚೀಟಿ) ಮಂದಿ ಈ ಸೌಲಭ್ಯ ಪಡೆದಿದ್ದಾರೆ. ಹಳದಿ ಕಾರ್ಡು ದಾರರಿಗೆ ಏ.7ರಂದು, ಪಿಂಕ್ ಕಾರ್ಡ್ ದಾರರಿಗೆ ಏ.22ರಂದು ವಿತರಣೆ ಆರಂಭಿಸಲಾಗಿದೆ.
ಉಚಿತ ಆಹಾರ ಧಾನ್ಯ ಕಿಟ್ ವಿತರಣೆ ಸಂಬಂಧ ಮೂರನೇ ಹಂತದ ಚಟುವಟಿಕೆ ಈಗ ನಡೆಯುತ್ತಿದೆ. ಇದರ ಅಂಗವಾಗಿ ನೀಲಿ ಕಾರ್ಡ್ (ಸಾರ್ವಜನಿಕ ವಿಭಾಗ ರಿಯಾಯಿತಿ) ದಾರರಾದ 1,01,429 ಕುಟುಂಬಗಳಿಗೆ ಕಿಟ್ ಲಭಿಸಲಿದೆ. ಡಿಪೆÇೀಗಳ ನೇತೃತ್ವದಲ್ಲಿ ಸಾಮಾಗ್ರಿಗಳನ್ನು ಸಂಗ್ರಹಿಸಿ ಪ್ಯಾಕಿಂಗ್ ನಡೆಸಲಾಗುತ್ತಿದೆ. ಒಂದು ಕುಟುಂಬಕ್ಕೆ ಒಂದು ಕಿಟ್ ಎಂಬ ರೂಪದಲ್ಲಿ ಒಂದು ಸಾವಿರ ರೂ. ಮೌಲ್ಯದ ಕಿಟ್ ವಿತರಿಸಲಾಗುವುದು.
ಶೇ 98.27 ಪಿ.ಎಂ.ಜಿ.ಕೆ.ಎ.ವೈ ಅಕ್ಕಿ ವಿತರಣೆ
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಪ್ರಕಾರ ಎ.ಎ.ವೈ.(ಹಳದಿ), ಆದ್ಯತೆ(ಪಿಂಕ್) ಕಾರ್ಡ್ ನಲ್ಲಿರುವುಚಿತ ಅಕ್ಕಿ ವಿತರಣೆ ಜಿಲ್ಲೆಯಲ್ಲಿ ಶೇ 98.27 ನಡೆದಿದೆ. ಜಿಲ್ಲೆಯಲ್ಲಿ 29781 ಮಂದಿ ಹಳದಿ ಕಾರ್ಡ್ ದಾರರಿಗೆ 658.079 ಮೆಟ್ರಿಕ್ ಟನ್, 100789 ಪಿಂಕ್ ಕಾರ್ಡ್ ದಾರರಿಗೆ 1660.287 ಮೆಟ್ರಿಕ್ ಟನ್ ಅಕ್ಕಿ ವಿತರಣೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಏ.21 ರಿಂದ ಅಕ್ಕಿ ವಿತರಿಸಲಾಗಿದೆ. ಒಬ್ಬ ವ್ಯಕ್ತಿಗೆ ತಲಾ 5 ಕಿಲೋ ಅಕ್ಕಿ ಎಂಬ ರೀತಿ ಏ.3ರಿಂದ ಮೂರು ತಿಂಗಳ ಅವಧಿಗೆ ಅಕ್ಕಿ ವಿತರಣೆ ನಡೆಸಲಾಗಿದೆ.
ಇಂದಿನಿಂದ ಬಯೋಮೆಟ್ರಿಕ್ ಸೌಲಭ್ಯಗಳೊಂದಿಗೆ ಪಡಿತರ ವಿತರಣೆ
ಕಾಸರಗೋಡು: ಇಂದಿನಿಂದ (ಮೇ 5) ಪಡಿತರ ಅಂಗಡಿಗಳಲ್ಲಿ ಬಯೋ ಮೆಟ್ರಿಕ್ ಸೌಲಭ್ಯಗಳೊಂದಿಗೆ ಅಕ್ಕಿ, ಕಿಟ್ ಇತ್ಯಾದಿಗಳ ವಿತರಣೆ ನಡೆಸಲಾಗುವುದು ಎಂದು ಜಿಲ್ಲಾ ಸಿವಿಲ್ ಸಪ್ಲೈ ಸ್ ಅಧಿಕಾರಿ ವಿ.ಕೆ.ಶಶಿಧರನ್ ತಿಳಿಸಿರುವರು.