ಕಾಸರಗೋಡು: ಸ್ನಾನಕ್ಕೆ ತೆರಳಿದ್ದ ಮೂವರು ಮಕ್ಕಳು ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕಾಞಂಗಾಡ್ ಭಾವನಗರ್ ಕಾಪಿಲ್ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಮೃತರು ಒಂದೇ ಕುಟುಂಬದವರಾಗಿದ್ದಾರೆ. ಮೃತರನ್ನು ಬಶೀರ್(6), ಅಜ್ಞಾಸ್(7), ನಿಶಾದ್(8) ಎಂದು ಗುರುತಿಸಲಾಗಿದೆ. ಪುಟಾಣಿಗಳು ಕೆರೆಯಲ್ಲಿ ಸ್ನಾನಕ್ಕೆಂದು ತೆರಳಿದ್ದರು.ಸಂಜೆ ವೇಳೆ ಮನೆ ಸಮೀಪದ ನೀರು ತುಂಬಿದ್ದ ಹೊಂಡಕ್ಕೆ ಪುಟಾಣಿಗಳು ಇಳಿದಿದ್ದರು. ಆ ಸಂದರ್ಭದಲ್ಲಿ ಅದರಲ್ಲಿದ್ದ ಕೆಸರಲ್ಲಿ ಹೂತು ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಮನೆಯವರು ಸಂಜೆ ಮನೆಯೊಳಗಿದ್ದಾಗ ಮಕ್ಕಳು ಅಂಗಳದಲ್ಲಿ ಆಟವಾಡುತ್ತಿದ್ದರು. ಕೆಲ ಸಮಯದಲ್ಲಿ ನಾಪತ್ತೆಯಾಗಿದ್ದಾರೆ. ಇದರಿಂದ ಗಾಬರಿಗೊಂಡು ಶೋಧ ನಡೆಸಿದಾಗ ಕೆರೆಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಮಕ್ಕಳು ಕೆಸರಿನಲ್ಲಿ ಸಿಲುಕಿದ್ದರು. ಮನೆಯ 200 ಮೀಟರ್ ದೂರದಲ್ಲಿ ಈ ಕೆರೆ ಇದ್ದು, ಮಕ್ಕಳು ಆಟವಾಡುತ್ತಾ ಇಲ್ಲಿಗೆ ತಲುಪಿರಬಹುದು ಎಂದು ಶಂಕಿಸಲಾಗಿದೆ.
ಪರಿಸರವಾಸಿಗಳು ಹಾಗೂ ಮನೆಯವರು ಮಕ್ಕಳನ್ನು ಮೇಲಕ್ಕೆತ್ತಿ ಕಾಞ0ಗಾಡ್ ನ ಆಸ್ಪತ್ರೆಗೆ ಕೊಂಡೊಯ್ದರೂ ಆಗಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.