ಮಂಜೇಶ್ವರ: ಗಡಿ ಪ್ರದೇಶದ ಹೆಲ್ಪ್ ಡೆಸ್ಕ್ ಗಳ ಕಾರ್ಯ ಚಟುವಟಿಕೆಗಳ ಭಾಗವಾಗಿ ಇಂಟರ್ನೆಟ್ ಸೌಕರ್ಯದಿಂದೊಡಗೂಡಿದ ಕಂಟ್ರೋಲ್ ರೂಂ ಸ್ಥಾಪಿಸಲಾಗುವುದು. ಇಲ್ಲಿ ನೇಮಕಗೊಂಡ ನೌಕರರಿಗೂ ಇತರರಿಗೂ ಆಹಾರ ತಯಾರಿಸಿ ನೀಡಲು ಕುಟುಂಬಶ್ರೀಯವರಿಗೆ ಜವಾಬ್ದಾರಿ ನೀಡಲಾಯಿತು. ಪ್ರತಿಯೊಂದು ಹೆಲ್ಪ್ ಡೆಸ್ಕ್ ಗಳಲ್ಲಿ ಲಭ್ಯವಾಗುವ ದಾಖಲೆಗಳ ಆಧಾರದಲ್ಲಿ ವಾಹನ ತಪಾಸಣೆ ಮಾಡಲು ಪ್ರಯಾಣಿಕರ ಪ್ರಸ್ತುತ ಆರೋಗ್ಯ ಸ್ಥಿತಿ ಗತಿ ಆರ್.ಟಿ.ಒ ಅಧಿಕಾರಿಗಳನ್ನೂ ಜೂನಿಯರ್ ಹೆಲ್ತ್ ಇನ್ಸ್‍ಫೆಕ್ಟರ್ ಗಳನ್ನೂ ಒಬ್ಬ ಮೆಡಿಕಲ್ ಆಫೀಸರ್ ರನ್ನೂ ನೇಮಿಸಲಾಗುವುದು. ಗಡಿ ಪ್ರದೇಶದಲ್ಲಿ ಸಜ್ಜು ಗೊಳಿಸಿದ ಹೆಲ್ಪ್ ಡೆಸ್ಕ್ ಗಳ ಹಾಗೂ ಇತರ ಎಲ್ಲಾ ಚಟುವಟಿಕೆಗಳ ಏಕೋಪನದ ಜವಾಬ್ದಾರಿ ಕಾಸರಗೋಡು ಆರ್.ಟಿ.ಒ ರವರಿಗೆ ಆಗಿರುತ್ತದೆ. ಗಡಿ ಭಾಗಕ್ಕೆ ತಲುಪಿದ ಪ್ರಯಾಣಿಕರನ್ನು ಎಊI ಗಳಿಗೆ ರೋಗ ನಿರ್ಣಯಿಸಲು ಸಾಧ್ಯವಾಗದೇ ಹೋದಾಗ ಮೆಡಿಕಲ್ ಆಫೀಸರ್ ರವರನ್ನು ಉಪಯೋಗಿಸಲಾಗುವುದು.
ಕೋವಿಡ್ ಲಕ್ಷಣ ಕಂಡುಬಂದವರ ಸ್ಯಾಂಪಲ್ ತೆಗೆಯಲು ಅಂಬುಲೆನ್ಸ್ ಮೂಲಕ ಅವರನ್ನು ಪ್ರತ್ಯೇಕ ಸಜ್ಜು ಗೊಳಿಸಿದ ಕೇಂದ್ರಗಳಿಗೆ ತಲುಪಿಸಲಾಗುವುದು. ಜಿಲ್ಲೆಯ ಮೂಲಕ ಹಾದು ಹೋಗಲು ಜನರೊಂದಿಗೆ ತಲುಪುವ ವಾಹನಗಳಿಂದ ಪ್ರಯಾಣಿಕರ ವಿವರಗಳನ್ನೊಳಗೊಂಡ ದಾಖಲೆ ವಾಹನದ ಕ್ಯಾಪ್ಟನ್/ ಡ್ರೈವರ್ ಮಾತ್ರ ಹೆಲ್ಪ್ ಡೆಸ್ಕ್ ಗಳ ಮುಂದೆ ಹಾಜರಾಗಲು ಅನುಮತಿ ನೀಡಬೇಕು. ಪ್ರಯಾಣ ಮುಂದುವರೆಸುವ ಮೊದಲು ಮುಂದೆ ಜಿಲ್ಲೆಯಲ್ಲಿ ಎಲ್ಲಿಯೂ ವಾಹನ ನಿಲ್ಲಿಸುವುದಿಲ್ಲ ಎಂದೂ ಜನರನ್ನು ಇಳಿಸುವುದಿಲ್ಲ ಎಂದೂ ಒಪ್ಪಿದ ಸಮ್ಮತಿ ಪತ್ರ ಪಡೆದು ಕೊಳ್ಳ ಬೇಕು. ಗಡಿ ಪ್ರದೇಶದಲ್ಲಿ ಜನರನ್ನು ಹೊತ್ತು ಧಾರಾಳ ವಾಹನಗಳು ತಲುಪಲು ಸಾಧ್ಯತೆಯಿರುವ ಕಾರಣ ಹೆಲ್ಪ್ ಡೆಸ್ಕ್ 24 ಗಂಟೆಗಳ ಕಾಲ ಕಾರ್ಯವೆಸಗುತ್ತದೆ. ಇದಕ್ಕಾಗಿ ರೆವೆನ್ಯೂ, ಪೆÇೀಲೀಸ್, ಆರ್. ಟಿ.ಒ ಎಂಬೀ ಇಲಾಖೆಗಳ ನೌಕರರಿಗೆ 2 ಶಿಫ್ಟ್ (12 ಗಂಟೆಗಳ ಡ್ಯೂಟಿ) ಅಧ್ಯಾಪಕರಿಗೆ 3 ಶಿಫ್ಟ್ (8 ಗಂಟೆಗಳ ಡ್ಯೂಟಿ) ಏರ್ಪಡಿಸಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿರುತ್ತಾರೆ.
ಗಡಿ ಪ್ರದೇಶಕ್ಕೆ ತಲುಪುವ ವಾಹನಗಳಿಗೆ ಟೋಕನ್ ಸಿಸ್ಟಮ್:
ಗಡಿ ಪ್ರದೇಶಕ್ಕೆ ತಲುಪುವ ವಾಹನಗಳಿಗೆ ರಸ್ತೆಯ ವಿಭಾಜಕ(ಡಿವೈಡರ್)ಕ್ಕೆ ಸಮೀಪ ಅಗತ್ಯವಾದ ಪಾಕಿರ್ಂಗ್ ಸೌಕರ್ಯ ಒದಗಿಸಲಾಗುವುದು. ಸಜ್ಜು ಗೊಳಿಸಿದ ಹೆಲ್ಪ್ ಡೆಸ್ಕ್ ಗಳಲ್ಲಿ ಉಪಯೋಗಿಸಲು 100 ಥರ್ಮಲ್ ಸ್ಕಾನರ್, ಅಗತ್ಯವಾದ ಮಾಸ್ಕ್, ಸಾನಿಟೈಸರ್,ಗ್ಲೌಸ್ ಗಳು ಎರಡು 108 ಅಂಬುಲೆನ್ಸ್ ಗಳನ್ನು ಒದಗಿಸಲಾಗುವುದು.
ಗಡಿ ಭಾಗಕ್ಕೆ ತಲುಪುವ ಎಲ್ಲಾ ವಾಹನಗಳಿಗೂ ಕೌಂಟರ್ ಸ್ಥಾಪಿಸಿ ಟೋಕನ್ ಸಂಪ್ರದಾಯ ಏರ್ಪಡಿಸಲಾಗುವುದು. ಹೆಲ್ಪ್ ಡೆಸ್ಕ್ ಮೂಲಕ ಉಂಟಾಗುವ ಎಲ್ಲಾ ಖರ್ಚುಗಳನ್ನು ನಿಭಾಯಿಸುವುದು ಎಸ್.ಡಿ.ಆರ್.ಎಫ್ ನಿಂದ ಐದು ಕೋಟಿ ರೂಪಾಯಿ ಮಂಜೂರು ಮಾಡಲು ಸರಕಾರ ಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿರುತ್ತಾರೆ.