ಕಾಸರಗೋಡು: ಲಾಕ್ ಡೌನ್ ಕಟ್ಟುನಿಟ್ಟಿನ ನಡುವೆಯೂ ಪೂರ್ಣ ಗರ್ಭಿಣಿಯಾಗಿರುವ ಮಹಿಳೆಯನ್ನು ಉಡುಪಿಯ ತಾಯಿಯ ಮನೆಗೆ ತಲಪಿಸುವ ಮೂಲಕ ಮಹಿಳಾ ಶಿಶು ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಐ.ಸಿ.ಡಿ.ಎಸ್. ಕಚೇರಿ ಮಾನವೀಯತೆ ಮೆರೆದಿದ್ದಾರೆ.
ಮಂಜೇಶ್ವರದಲ್ಲಿ ಪತಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಹಫೀಝಾ ಬಾನು ಅವರನ್ನು ಈ ರೀತಿ ತಾಯಿಯ ಮನೆಗೆ ಕಳುಹಿಸಲಾಗಿದೆ. ವೈದ್ಯರು ಮೇ 5 ಅವರ ಹೆರಿಗೆಗೆ ದಿನಾಂಕ ನಿಗದಿಪಡಿಸಿದ್ದಾರೆ. ಏ.24ರಿಂದಲೇ ಅವರಿಗೆ ಆಗಾಗ ನೋವು ಕಾಣಿಸಿಕೊಳ್ಳತೊಡಗಿತ್ತು. ಸ್ಥಳೀಯ ಅಂಗನವಾಡಿಯ ಶಿಕ್ಷಕಿಯೊಬ್ಬರ ಸಂದರ್ಭೋಚಿತ ಕ್ರಮದ ಹಿನ್ನೆಲೆಯಲ್ಲಿ ಮಹಿಳೆಯನ್ನು ಕಾಞಂಗಾಡಿನ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಲ್ಲಾ ಐ.ಸಿ.ಡಿ.ಎಸ್. ಪೆÇ್ರೀಗ್ರಾಂ ಕಚೇರಿಯ ಶಾಲಾ ಕೌನ್ಸಿಲರ್ ಟಾಲ್ಸಿ ಈ ವಿಚಾರಕ್ಕೆ ಗಮನ ಹರಿಸಿದ್ದರು.
ಹಫೀಝಾ ಬಾನು ಅವರ ಮೊದಲ ಹೆರಿಗೆ ವೇಳೆಯೂ ಪತಿ ಮತ್ತು ಸಂಬಂಧಿಕರು ಜತೆಯಲ್ಲಿಲ್ಲದೆ ಸಮಸ್ಯೆಯಾಗಿತ್ತು. ಈ ವೇಳೆಯೂ ಮಹಿಳಾ ಶಿಶು ಅಭಿವೃಧ್ಧಿ ಇಲಾಖೆ ಸಿಬ್ಬಂದಿ ಇವರಿಗೆ ಸಹಾಯ ಒದಗಿಸಿದ್ದರು. ಆಸ್ಪತ್ರೆಗೆ ದಾಖಲಾದ ಹಫೀಝಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯ ನಂತರ ತಾಯಿ ಮತ್ತು ಮಗುವನ್ನು ಮರಳಿ ಬಾಡಿಗೆ ಮನೆಗೆ ತಲಪಿಸುವ ವರೆಗೂ ಸಿಬ್ಬಂದಿ ವ್ಯವಸ್ಥೆ ಏರ್ಪಡಿಸಿದ್ದರು.