ಮೇ 4ರಿಂದ ಮತ್ತೆ ಎರಡು ವಾರಗಳ ಕಾಲ ದೇಶದಾದ್ಯಂತ ಕೊರೊನಾ ಲಾಕ್ ಡೌನ್ ಮುಂದುವರಿಸಿ ಗೃಹ ವ್ಯವಹಾರಗಳ ಸಚಿವಾಲಯವು ಆದೇಶ ನೀಡಿದೆ. ಈ ಸಂಬಂಧವಾಗಿ ರೆಡ್, ಆರೇಂಜ್ ಮತು ಗ್ರೀನ್ ಝೋನ್ ಗಳಿಗೆ ಪ್ರತ್ಯೇಕವಾದ ಸೂಚನೆಗಳನ್ನು ನೀಡಲಾಗಿದೆ. ಅದರ ಪ್ರಕಾರ ಯಾವ ಚಟುವಟಿಕೆಗಳನ್ನು ನಡೆಸಬಹುದು ಹಾಗೂ ಯಾವುದನ್ನು ನಡೆಸುವಂತಿಲ್ಲ ಎಂಬ ವಿವರ ಇದೆ. ಅಪಾಯದ ಮಟ್ಟದ ಆಧಾರದ ಮೇಲೆ ಸರ್ಕಾರವು ಮೂರು ವಲಯಗಳನ್ನು ವಿಂಗಡಿಸಿದೆ. ಈ ಪಟ್ಟಿಯನ್ನು ವಾರಕ್ಕೆ ಒಮ್ಮೆ ಅಥವಾ ಆಯಾ ಕಾಲಕ್ಕೆ ಅಪ್ ಡೇಟ್ ಮಾಡುತ್ತದಂತೆ ಸರ್ಕಾರ. ಗ್ರೀನ್ ಝೋನ್ ಅಂದರೆ ಅಥವಾ ಗ್ರೀನ್ ಜಿಲ್ಲೆ ಅಂದರೆ ಈ ವರೆಗೆ ಯಾವುದೇ ಕೊರೊನಾ ಪ್ರಕರಣ ಇಲ್ಲದಿರುವುದು ಅಥವಾ ಕಳೆದ 21 ದಿನದಲ್ಲಿ ಯಾವುದೇ ಕೊರೊನಾ ಪ್ರಕರಣ ಆಗದಿರುವುದು.
ಯಾವುದನ್ನು ಗ್ರೀನ್ ಅಥವಾ ರೆಡ್ ಝೋನ್- ಜಿಲ್ಲೆ ಎಂದು ಗುರುತಿಸಿರುವುದಿಲ್ಲವೋ ಅವೇ ಆರೇಂಜ್ ಝೋನ್ - ಜಿಲ್ಲೆಗಳು. ಇನ್ನು ರೆಡ್ ಝೋನ್ ಅಥವಾ ಹಾಟ್ ಸ್ಪಾಟ್ ಅನ್ನು ಅಲ್ಲಿನ ಸಕ್ರಿಯ ಪ್ರಕರಣಗಳು, ದ್ವಿಗುಣಗೊಳ್ಳುವ ವೇಗ, ಖಚಿತ ಪ್ರಕರಣಗಳು, ಟೆಸ್ಟಿಂಗ್ ಪ್ರಮಾಣ ಹಾಗೂ ನಿಗಾ ಮತ್ತಿತರ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಆರೋಗ್ಯ ಸಚಿವಾಲಯ ಘೋಷಣೆ ಮಾಡುತ್ತದೆ.
ಇಡೀ ದೇಶದಾದ್ಯಂತ ನಿರ್ಬಂಧಿಸಲಾದ ಚಟುವಟಿಕೆಗಳಿವು * ಎಲ್ಲ ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾ ಯಾನ ಪ್ರಯಾಣಕ್ಕೆ ನಿರ್ಬಂಧವಿದೆ. ವೈದ್ಯಕೀಯ/ಭದ್ರತೆ ಕಾರಣ ಅಥವಾ ಗೃಹ ಸಚಿವಾಲಯದಿಂದ ಅನುಮತಿ ಪಡೆದಿರುವುದಕ್ಕೆ ವಿನಾಯಿತಿ ಇದೆ. * ಎಲ್ಲ ರೈಲು ಸಂಚಾರಕ್ಕೆ ನಿರ್ಬಂಧ. ಭದ್ರತೆ ಕಾರಣಗಳಿಗೆ ಅಥವಾ ಗೃಹ ಸಚಿವಾಲಯ ಅನುಮತಿ ನೀಡಿರುವ ಉದ್ದೇಶಗಳಿಗೆ ವಿನಾಯಿತಿ ಇದೆ. * ಚಿತ್ರಮಂದಿರ, ಶಾಪಿಂಗ್ ಮಾಲ್, ಜಿಮ್, ಕ್ರೀಡಾ ಸಮುಚ್ಚಯ, ಸ್ವಿಮ್ಮಿಂಗ್ ಪೂಲ್, ಮನರಂಜನಾ ಪಾರ್ಕ್, ರಂಗಮಂದಿರ, ಬಾರ್ ಗಳು ಮತ್ತು ಆಡಿಟೋರಿಯಂ, ಅಸೆಂಬ್ಲಿ ಹಾಲ್ ಮತ್ತು ಇದೇ ರೀತಿಯ ಸ್ಥಳಗಳಿಗೆ ಅನುಮತಿ ಇಲ್ಲ. * ಎಲ್ಲ ಸಾಮಾಜಿಕ/ರಾಜಕೀಯ/ಕ್ರೀಡೆ/ಮನರಂಜನೆ/ಶೈಕ್ಷಣಿಕ/ಸಾಂಸ್ಕೃತಿಕ ಅಥವಾ ಧಾರ್ಮಿಕ ಕಾರ್ಯಕ್ರಮ/ಇತರ ಸಮಾರಂಭಗಳಿಗೆ ನಿರ್ಬಂಧ. * ಅಂತರರಾಜ್ಯ ಸಾರ್ವಜನಿಕ ಸಾರಿಗೆ ಬಸ್ ಗಳ ಮೇಲೆ ನಿರ್ಬಂಧ ಅಥವಾ ಗೃಹ ಸಚಿವಾಲಯ ಅನುಮತಿ ನೀಡಿದಂತೆ ನಡೆದುಕೊಳ್ಳಬೇಕು * ಎಲ್ಲ ಶಾಲೆ, ಕಾಲೇಜು, ಶಿಕ್ಷಣ/ತರಬೇತಿ ಕೇಂದ್ರಗಳು ಮುಂತಾದವುಗಳಿಗೆ ನಿರ್ಬಂಧ. * ಆರೋಗ್ಯ ಸಿಬ್ಬಂದಿ/ಪೊಲೀಸರು/ಸರ್ಕಾರಿ ಅಧಿಕಾರಿಗಳು/ಆರೋಗ್ಯ ಸಿಬ್ಬಂದಿ, ಲಾಕ್ ಡೌನ್ ನಿಂದ ಸಿಲುಕಿಕೊಂಡಿರುವ ಪ್ರವಾಸಿಗರು, ಕ್ವಾರಂಟೈನ್ ನಲ್ಲಿ ಇರುವವರಿಗೆ ಸೇವೆ ಒದಗಿಸುತ್ತಿರುವ ಹೋಟೆಲ್, ರೆಸ್ಟೋರೆಂಟ್ ಗಳಿಗೆ ಮಾತ್ರ ವಿನಾಯಿತಿ ಇದೆ. * ಎಲ್ಲ ಧಾರ್ಮಿಕ ಸ್ಥಳಗಳು/ಸಾರ್ವಜನಿಕ ಪ್ರಾರ್ಥನೆ ಸ್ಥಳಗಳು
ಕಂಟೇನ್ ಮೆಂಟ್ ಝೋನ್:
ಆಚೆ ರೆಡ್ ಝೋನ್ ನಲ್ಲಿ ನಿರ್ಬಂಧಗಳೊಂದಿಗೆ ಯಾವ ಚಟುವಟಿಕೆಗೆ ಅವಕಾಶ ನಗರಪ್ರದೇಶದ ಎಲ್ಲ ಕೈಗಾರಿಕೆ ಸಂಸ್ಥೆಗಳಿಗೆ ನಿಷೇಧ. ವಿಶೇಷ ಆರ್ಥಿಕ ವಲಯ (ಎಸ್ ಇಜೆಡ್), ಕೈಗಾರಿಕೆ ಎಸ್ಟೇಟ್ ಗಳು/ಸಂಪರ್ಕವು ನಿಯಂತ್ರಣದಲ್ಲಿ ಇರುವ ಟೌನ್ ಷಿಪ್ ಗಳಲ್ಲಿ ಅವಕಾಶ ಇದೆ. * ಅಗತ್ಯ ವಸ್ತುಗಳ ತಯಾರಿಕೆಗಳಾದ ಫಾರ್ಮಾಸ್ಯುಟಿಕಲ್ಸ್, ವೈದ್ಯಕೀಯ ಸಲಕರಣೆ, ಅವುಗಳ ಕಚ್ಚಾವಸ್ತು ಹಾಗೂ ಇತರ ಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶ ಇದೆ. * ನಿರಂತರ ಪ್ರೊಸೆಸ್ ಅಗತ್ಯ ಇರುವ ಉತ್ಪಾದನಾ ಘಟಕಗಳು ಮತ್ತು ಅವುಗಳ ಪೂರೈಕೆ ಜಾಲ, ಸೆಣಬು ಕಾರ್ಖಾನೆಯಲ್ಲಿ ಸರದಿ ಪಾಳಿ ಹಾಗೂ ಸಾಮಾಜಿಕ ಅಂತರದೊಂದಿಗೆ ಅವಕಾಶ. * ಖಾಸಗಿ ಕಚೇರಿಗಳು ಶೇಕಡಾ 33ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಬಹುದು. ಉಳಿದವರು ಮನೆಯಿಂದ ಕೆಲಸ ಮಾಡಬೇಕಾಗುತ್ತದೆ. * ಡೆಪ್ಯೂಟಿ ಸೆಕ್ರೆಟರಿ ಹಂತದ ಅಧಿಕಾರಿಗಳ ಮೇಲ್ಪಟ್ಟು ಶೇಕಡಾ ನೂರರಷ್ಟು ಹಾಜರಾತಿ ಇರಬೇಕು. ಇನ್ನು ಉಳಿದಂತೆ ಶೇಕಡಾ 33ರ ತನಕ ಹಾಜರಾಗಬಹುದು. * ರಕ್ಷಣೆ ಮತ್ತು ಭದ್ರತಾ ಸೇವೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪೊಲೀಸ್, ಹೋಮ್ ಗಾರ್ಡ್ಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳಿಗೆ ಯಾವುದೇ ನಿರ್ಬಂಧ ಇಲ್ಲ. * ಜನ ಹಾಗೂ ವಾಹನ ಸಂಚಾರ ಅನುಮತಿ ನೀಡಿದ ಚಟುವಟಿಕೆಗಳಿಗೆ ಮಾತ್ರ. ನಾಲ್ಕು ಚಕ್ರದ ವಾಹದಲ್ಲಿ ಚಾಲಕ ಹೊರತುಪಡಿಸಿ ಇಬ್ಬರು ಪ್ರಯಾಣಿಸಬಹುದು. ದ್ವಿಚಕ್ರ ವಾಹನದಲ್ಲಿ ಒಬ್ಬರು ಮಾತ್ರ ಪ್ರಯಾಣಿಸಬಹುದು. * ನಗರ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಕಾಮಗಾರಿ ಮಾಡುವಂತಿಲ್ಲ. ಆದರೆ ನವೀಕೃತ ಇಂಧನ ಯೋಜನೆಗಳ ನಿರ್ಮಾಣ, situ ನಿರ್ಮಾಣ ಮಾಡಬಹುದು. * ರೆಡ್ ಝೋನ್ ಗಳಲ್ಲಿ ಮಾಲ್ ಗಳನ್ನು ಹೊರತುಪಡಿಸಿ ಅಗತ್ಯವಸ್ತುಗಳನ್ನು ಮಾರಾಟ ಮಾಡುವ ಎಲ್ಲ ಅಂಗಡಿಗಳೂ ತೆರೆಯಬಹುದು. * ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ವಸ್ತುಗಳನ್ನು ಮಾರುವ ಶಾಪಿಂಗ್ ಮಾಲ್ ನ ಮಳಿಗೆಗಳು, ಮಾರ್ಕೆಟ್ ಕಾಂಪ್ಲೆಕ್ಸ್ ಗಳು ಹಾಗೂ ಮಾರ್ಕೆಟ್ ಗಳನ್ನು ನಗರ ಪ್ರದೇಶದಲ್ಲಿ ತೆರೆಯುವಂತಿಲ್ಲ. * ಒಂಟಿ ಮಳಿಗೆಗಳು, ಮನೆ ಬಳಿಯ ಮಳಿಗೆಗಳು, ವಸತಿ ಸಮುಚ್ಚಯದಲ್ಲಿ ಇರುವ ಮಳಿಗೆಗಳು ನಗರ ಪ್ರದೇಶಗಲ್ಲಿ ಅಗತ್ಯ ವಸ್ತುಗಳು ಹಾಗೂ ಅವುಗಳನ್ನು ಹೊರತುಪಡಿಸಿದಂತೆ ಮಾರಾಟ ಮಾಡಬಹುದು. * ಮಿಲ್ಸ್ ಹೊರತುಪಡಿಸಿ ಅಗತ್ಯ ವಸ್ತುಗಳು ಮತ್ತು ಅವುಗಳನ್ನು ಹೊರತುಪಡಿಸಿದ ವಸ್ತುಗಳನ್ನು ಮಾರಾಟ ಮಾಡಲು ಗ್ರಾಮೀಣ ಪ್ರದೇಶಗಳಲ್ಲಿ ಮಳಿಗೆಗಳನ್ನು ತೆರೆಯಬಹುದು. ಅಗತ್ಯ ವಸ್ತುಗಳನ್ನು ಮಾತ್ರ ಇ ಕಾಮರ್ಸ್ ಮೂಲಕ ಮಾರಾಟ ಮಾಡಬಹುದು. ದೇಶದಾದ್ಯಂತ ನಿರ್ಬಂಧ ವಿಧಿಸಿರುವ ಚಟುವಟಿಕೆಗಳಿಗೆ ರೆಡ್ ಝೋನ್ ನಲ್ಲಿ ನಿರ್ಬಂಧ ಇದೆ. ಸೈಕಲ್ ಮತ್ತು ಆಟೋರಿಕ್ಷಾ, ಟ್ಯಾಕ್ಸಿ ಮತ್ತು ಕ್ಯಾಬ್, ಅಂತರ್ ಜಿಲ್ಲಾ ಬಸ್ ಗಳು, ಕ್ಷೌರದಂಗಡಿ, ಸ್ಪಾ, ಸಲೂನ್ ಗಳನ್ನು ಸಹ ನಿರ್ಬಂಧಿಸಲಾಗಿದೆ.
ಗ್ರೀನ್ ಝೋನ್:
ದೇಶದಾದ್ಯಂತ ನಿರ್ಬಂಧ ಹೇರಿರುವ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದವಕ್ಕೆ ಅವಕಾಶ ಇದೆ. ಆದರೆ ಬಸ್ ಗಳಲ್ಲಿ ಒಟ್ಟು ಸೀಟಿನ ಸಾಮರ್ಥ್ಯದಲ್ಲಿ ಶೇಕಡಾ ಐವತ್ತರಷ್ಟು ಮಾತ್ರ ಪ್ರಯಾಣಿಕರನ್ನು ಕರೆದೊಯ್ಯಬೇಕು. ಬಸ್ ಡಿಪೋಗಳ ಒಟ್ಟು ಸಾಮರ್ಥ್ಯದ ಶೇಕಡಾ ಐವತ್ತರಷ್ಟರೊಂದಿಗೆ ಕಾರ್ಯ ನಿರ್ವಹಿಸಬಹುದು.
ಕಂಟೇನ್ ಮೆಂಟ್ ಝೋನ್:
ಹೊರಗೆ ಆರೇಂಜ್ ಝೋನ್ ನಲ್ಲಿ * ಅಂತರ ಜಿಲ್ಲೆ ಹಾಗೂ ಜಿಲ್ಲೆಯ ವಿವಿಧೆಡೆಗಳಿಂದ ಬಸ್ ಸಂಚಾರ ಇಲ್ಲ * ಟಾಕ್ಸಿ ಹಾಗೂ ಕ್ಯಾಬ್ ನಲ್ಲಿ ಒಬ್ಬರು ಚಾಲಕ ಮತ್ತು ಇಬ್ಬರು ಪ್ರಯಾಣಿಕರಿಗೆ ಅವಕಾಶ * ನಾಲ್ಕು ಚಕ್ರದ ವಾಹನಗಳಲ್ಲಿ ಗರಿಷ್ಠ ಇಬ್ಬರು ಪ್ರಯಾಣಿಕರು ಮತ್ತು ಒಬ್ಬರು ಚಾಲಕರಿಗೆ ಅವಕಾಶ
ಸಾರ್ವಜನಿಕ ಸ್ಥಳಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಸೂಚನೆಗಳು :
* ಮದುವೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಐವತ್ತಕ್ಕಿಂತ ಹೆಚ್ಚು ಅತಿಥಿ- ಅಭ್ಯಾಗತರು ಭಾಗವಹಿಸುವಂತಿಲ್ಲ * ಅಂತ್ಯ ಸಂಸ್ಕಾರ, ಅಂತಿಮ ವಿಧಿ ವಿಧಾನಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇಪ್ಪತ್ತಕ್ಕಿಂತ ಹೆಚ್ಚು ಜನರಿಗೆ ಅವಕಾಶ ಇಲ್ಲ. * ಮುಖವು ಕವರ್ ಆಗಿರಬೇಕಾದದ್ದು ಕಡ್ಡಾಯ, ಜತೆಗೆ ಸಾಮಾಜಿಕ ಅಂತರ ಇರಬೇಕು. * ಸಾರ್ವಜನಿಕ ಸ್ಥಳದಲ್ಲಿ ಐದಕ್ಕಿಂತ ಹೆಚ್ಚು ಜನ ಒಂದು ಕಡೆ ಸೇರುವಂತಿಲ್ಲ. * ಸಾರ್ವಜನಿಕ ಸ್ಥಳದಲ್ಲಿ ಉಗುಳುವುದು ಶಿಕ್ಷಾರ್ಹ ಅಪರಾಧ.
ಉದ್ಯೋಗ ಸ್ಥಳದಲ್ಲಿ ಅನುಸರಿಸಬೇಕಾದ ಮಾರ್ಗ ಸೂಚಿ :
* ಕಂಪೆನಿಯ ಟ್ರಾನ್ಸ್ ಪೋರ್ಟ್ ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು * ಮುಖವನ್ನು ಮರೆ ಮಾಡಿರುವುದು ಕಡ್ಡಾಯ * ಉದ್ಯೋಗ ಸ್ಥಳದಲ್ಲಿ ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ವಾಶ್ ಹಾಗೂ ಸ್ಯಾನಿಟೈಜರ್. * ಶಿಫ್ಟ್ ಗಳ ಮಧ್ಯೆ ಅಗತ್ಯ ಅಂತರ ಇರಬೇಕು ಹಾಗೂ ಊಟದ ಅವಧಿಯಲ್ಲೂ ಪಾಲನೆ ಆಗಬೇಕು. * ಉದ್ಯೋಗ ಸ್ಥಳದಲ್ಲಿ ಪೂರ್ತಿಯಾಗಿ ಸ್ಯಾನಿಟೈಸೇಷನ್ ಆಗಬೇಕು.
* ಎಲ್ಲ ಉದ್ಯೋಗಿಗಳಿಗೂ, ಸಂಸ್ಥೆಯ ಹಿರಿಯ ಅಧಿಕಾರಿಗಳಿಗೂ ಆರೋಗ್ಯ ಸೇತು (Aarogya Setu) ಮೊಬೈಲ್ ಅಪ್ಲಿಕೇಷನ್ ಡೌನ್ ಲೋಡ್ ಮಾಡುವುದು ಕಡ್ಡಾಯ.