HEALTH TIPS

ಕೇರಳದ ಆದಿವಾಸಿ ಸಮುದಾಯದಿಂದ ಮೊದಲ ಉನ್ನತ ಶಿಕ್ಷಣ ಪಡೆದ ಮಹಿಳೆ ಉಪ ಜಿಲ್ಲಾಧಿಕಾರಿಯಾಗಿ ನಿಯುಕ್ತಿ


         ಕೋಝಿಕ್ಕೋಡ್: ಕೇರಳದ ಬುಡಕಟ್ಟು ಸಮುದಾಯದಿಂದ ರಾಜ್ಯದ ಮೊದಲ ನಾಗರಿಕ ಸೇವಾ ಪರೀಕ್ಷೆ(ಐಎಎಸ್)ತೇರ್ಗಡೆಗೊಂಡ ವಯನಾಡ್ ಜಿಲ್ಲೆಯ  ಶ್ರೀಧನ್ಯಾ ಸುರೇಶ್ ಕೋಝಿಕ್ಕೋಡ್ ಜಿಲ್ಲಾ  ಉಪ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ.
       ವಯನಾಡ್ ಮೂಲದ ಶ್ರೀಧನ್ಯ ಅವರು ಕಳೆದ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ 410 ನೇ ಸ್ಥಾನ ಪಡೆದಿದ್ದರು. ವಯನಾಡದ ಕುರಿಚಿಯಾ ವಿಭಾಗದಿಂದ ಮೊದಲ ಬಾರಿಗೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶ್ರೀಧನ್ಯಾ ಸುದ್ದಿಯಾಗಿದ್ದರು. ಶ್ರೀಧನ್ಯ ಅವರು ವಯನಾಡಿನ ಇಡಿಯಂವಯಲ್ ಕಾಲೋನಿಯ ಸುರೇಶ್ ಮತ್ತು ಕಮಲಾ ದಂಪತಿಯ ಪುತ್ರಿ. ಪರೀಕ್ಷೆಗೆ ಹಾಜರಾದ 759 ಅಭ್ಯರ್ಥಿಗಳಲ್ಲಿ ತ್ರಿಶೂರ್ ಮೂಲದ ಶ್ರೀಲಕ್ಷ್ಮಿ ರಾಮ್ 29 ನೇ ಸ್ಥಾನದಲ್ಲಿದ್ದರು. ಅಲ್ಲದೆ ಇತರ ಮಲೆಯಾಳಿಗರಾದ ರಂಜÁ ಮೇರಿ ವರ್ಗೀಸ್ (49 ನೇ ಸ್ಥಾನ) ಮತ್ತು ಅರ್ಜುನ್ ಮೋಹನ್ (66 ನೇ ಸ್ಥಾನ) ರ್ಯಾಂಕ್ ಪಡೆದಿದ್ದರು. ಬಾಂಬೆ ಐಟಿ ಪದವೀಧರರಾದ ಕನಿಷ್ಕಾ ಕೌನಿಯಾ ಪ್ರಥಮ ರ್ಯಾಂಕ್ ಪಡೆದವರಾಗಿದ್ದಾರೆ.
       ಅತ್ಯಂತ ತಳಮಟ್ಟದ ಬುಡಕಟ್ಟು ವರ್ಗದಿಂದ ಸಂಕಷ್ಟದಲ್ಲಿ ಓದು ಮುಂದುವರಿಸಿ ಐಎಎಸ್ ಪರೀಕ್ಷೆ ತೇರ್ಗಡೆಯಾಗಿರುವ ಶ್ರೀಧನ್ಯಾ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದರು. ತನ್ನ ಬಾಲ್ಯ ಕಾಲದ ಸಹಪಾಠಿಗಳು, ಸ್ನೇಹಿತರ ಸಂಪೂರ್ಣ ಬೆಂಬಲದೊಂದಿಗೆ ಎರಡನೇ ಪ್ರಯತ್ನದಲ್ಲಿ ಐಎಎಸ್ ಪಡೆಯಲು ಶ್ರೀಧನ್ಯಾರಿಗೆ ಸಾಧ್ಯವಾಯಿತೆಂದು ತಿಳಿಸಿದ್ದಾರೆ. ಮೊದಲು ಕಲ್ಲಿಕ್ಕೋಟೆಯ ಸಹಾಯಕ ಸಂಗ್ರಾಹಕ ಅಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿ ಇದೀಗ ಮಂಗಳವಾರದಿಂದ ಕೋಝಿಕ್ಕೋಡ್ ಉಪಜಿಲ್ಲಾಧಿಕಾರಿಯಾಗಿ ಮಹತ್ವದ ಮೈಲುಗಲ್ಲು ಸ್ಥಾಪಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries