ಕಾಸರಗೋಡು: ಹಾಟ್ ಸ್ಪಾಟ್‍ಗಳಲ್ಲದೇ ಇರುವ ವಲಯಗಳಲ್ಲಿ ವಿನಾಯಿತಿಗಳನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಘೋಷಿಸಿದ್ದಾರೆ.
ರಾಜ್ಯ ಸರ್ಕಾರದ ನೂತನ ಆದೇಶಗಳ ಪ್ರಕಾರ ಜಿಲ್ಲೆಯನ್ನು ಆರೆಂಜ್ ಝೋನ್‍ನಲ್ಲಿ ಅಳವಡಿಸಿರುವ ಹಿನ್ನೆಲೆಯಲ್ಲಿ ಈ ವಿನಾಯಿತಿಗಳನ್ನು ಪ್ರಕಟಿಸಿದ್ದಾರೆ.
ಸೋಮವಾರ : ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ಮಾರಾಟ ನಡೆಸುವ ಅಂಗಡಿಗಳು(ಹಾರ್ಡ್ ವೇರ್ಸ್, ಸಾನಿಟರಿ ವೇರ್ಸ್, ಟೈಲ್ಸ್ ಇತ್ಯಾದಿ), ಗೂಡ್ಸ್ ಕ್ಯಾರಿಯರ್ ವಾಹನಗಳು, ಮೊಬೈಲ್ ಅಂಗಡಿಗಳು, ಕಂಪ್ಯೂಟರ್ ಮಾರಾಟ-ಸರ್ವೀಸ್ ನಡೆಸುವ ಅಂಗಡಿಗಳು, ಬೀಡಿ ಕಂಪನಿ, ಫ್ರಿಜ್, ವಾಷಿಂಗ್ ಮೆಷಿನ್, ಎ.ಸಿ., ಫ್ಯಾನ್ ಇತ್ಯಾದಿಗಳ ಮಾರಾಟ- ಸರ್ವೀಸ್, ಚಪ್ಪಲಿ ಅಂಗಡಿ ಇತ್ಯಾದಿಗಳನ್ನು ತೆರೆದು, ಶಟರ್ ಮುಚ್ಚಿ ಶುಚೀಕರಣ ನಡೆಸುವ ಚಟುವಟಿಕೆಗಳಿಗೆ ಮಾತ್ರ ಅನುಮತಿಯಿದೆ.
ಮಂಗಳವಾರ : ಬೀಡಿ ಕಂಪನಿ, ಪುಸ್ತಕ ಅಂಗಡಿ, ಸ್ಟುಡಿಯೋ, ಪ್ರಿಂಟಿಂಗ್ ಪ್ರೆಸ್‍ಗಳನ್ನು ಶುಚೀಕರಣ ನಡೆಸಿದ ನಂತರ ತೆರೆಯಬಹುದು.
ಬುಧವಾರ : ಧ್ವನಿ-ಬೆಳಕು ಸಾಮಾಗ್ರಿಗಳನ್ನು ಬಾಡಿಗೆಗೆ ನೀಡುವ ಸಂಸ್ಥೆಗಳನ್ನು ಶುಚೀಕರಿಸಿದ ನಂತರವಷ್ಟೇ ತೆರೆಯಬಹುದು. ಯಾವ ವಿಧದಲ್ಲೂ ವ್ಯವಹಾರ ನಡೆಸಕೂಡದು.
ಗುರುವಾರ : ವರ್ಕ್ ಶಾಪ್‍ಗಳು, ವಾಹನಗಳ ಬಿಡಿಭಾಗಗಳ ಮಾರಾಟ ಅಂಗಡಿ, ಚಿಪ್ಪಿನಿಂದ ಕುಮ್ಮಾಯ ತಯಾರಿಸುವ ಘಟಕಗಳು, ಹರಿತ ಕ್ರಿಯಾ ಸೇನೆಗಾಗಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುವ ಚಟುವಟಿಕೆ ನಡೆಸಬಹುದು.
ಶುಕ್ರವಾರ : ಪುಸ್ತಕದ ಅಂಗಡಿಗಳನ್ನು ತೆರೆಯಬಹುದು.
ಶನಿವಾರ : ಗೂಡ್ಸ್ ಕ್ಯಾರಿಯರ್ ವಾಹನಗಳು, ನಿರ್ಮಾಣ ಸಾಮಾಗ್ರಿ ಮಾರಾಟ ನಡೆಸುವ ಅಂಗಡಿಗಳು(ಹಾರ್ಡ್ ವೇರ್ಸ್, ಸಾನಿಟರಿ ವೇರ್ಸ್, ಟೈಲ್ಸ್ ಇತ್ಯಾದಿ), ಬಟ್ಟೆ ಅಂಗಡಿಗಳು ಇತ್ಯಾದಿ ಶಟರ್ ಮುಚ್ಚಿ ಶುಚೀಕರಣ ನಡೆಸಲು ಮಾತ್ರ ಅನುಮತಿಯಿದೆ. ವ್ಯವಹಾರ ನಡೆಸುವಂತಿಲ್ಲ. ಮೊಬೈಲ್ ಅಂಗಡಿ, ಕಂಪ್ಯೂಟರ್ ಮಾರಾಟ-ದುರಸ್ತಿ ಅಂಗಡಿಗಳು ತೆರೆಯಬಹುದು.