HEALTH TIPS

ಅಕಾಡೆಮಿಯೊಂದರ ಅಧ್ಯಕ್ಷರ ಪುತ್ರನ ಕಾರಲ್ಲಿ ಮದ್ಯ ಸಾಗಾಟ-ವಶ

   
         ಕಾಸರಗೋಡು: ರಾಜ್ಯ ಸರ್ಕಾರದ ಪ್ರತಿಷ್ಠಿತ ಅಕಾಡೆಮಿಯೊಂದರ ಅಧ್ಯಕ್ಷರ ಪುತ್ರನದ್ದೆಂದು ಹೇಳಲಾಗುವ ವಾಹನದಿಂದ ಭಾರೀ ಮೊತ್ತದ ವಿದೇಶ ಮದ್ಯ ವಶಪಡಿಸಲಾಗಿದ್ದು ಜಿಲ್ಲೆಯ ಸಾಂಸ್ಕøತಿಕ ವಲಯ ತಳಮಳಗೊಂಡ ಘಟನೆ ನಿನ್ನೆ ಸಂಜೆ ನಡೆದಿದೆ.
     ರಾಜ್ಯ ಸರ್ಕಾರದ ಪ್ರತಿಷ್ಠಿತ ಇಲಾಖೆಯೊಂದರ ಅಧ್ಯಕ್ಷರ ಮನೆ ಹಿತ್ತಲಿನಿಂದ ಅವರ ಪುತ್ರನದ್ದೆಂದು ಹೇಳಲಾಗುವ ಕೆಎಲ್ 05, ಎಪಿ 8040 ಕಾರಲ್ಲಿ ಸಂಗ್ರಹಿಸಲಾಗಿದ್ದ ಕರ್ನಾಟಕ ನಿರ್ಮಿತ 10 ಬಾಟಲಿ ಬಿಯರ್, 180 ಮಿಲ್ಲಿ ಮದ್ಯ ವನ್ನು ವಶಪಡಿಸಲಾಗಿದೆ.
    ಕರ್ನಾಟಕದಿಂದ ಅಕ್ರಮವಾಗಿ ಕಾರಿನ ಮೂಲಕ ಮದ್ಯ ರವಾನೆಯಾಗುತ್ತಿದೆ ಎಂಬ ರಹಸ್ಯ ಮಾಹಿತಿಯ ಮೇರೆಗೆ ಪೋಲೀಸರು ಮನೆ ಪರಿಸರದಲ್ಲಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಮನೆ ಹಿತ್ತಲಿಂದ ವಾಹನವೊಂದು ತೆರಳುತ್ತಿರುವುದನ್ನು ಗಮನಿಸಿ ಬೆಂಬತ್ತಿ ಹಿಡಿದು ಪರಿಶೀಲನೆ ನಡೆಸಿದಾಗ ಅಕ್ರಮ ಮದ್ಯ ಪತ್ತೆಯಾಯಿತು. ಕಾರಲ್ಲಿದ್ದ ಇಬ್ಬರು ಈ ಮಧ್ಯೆ ಓಡಿ ಪರಾರಿಯಾದರೆಂದು ಪೋಲೀಸರು ತಿಳಿಸಿದ್ದಾರೆ. ಈ ಪೈಕಿ ಓರ್ವನ ಹೆಸರು ಮೃದುಲೇಶ್ ಎಂದಾಗಿರುವುದಾಗಿ ಪೋಲೀಸರು ಪತ್ತೆಹಚ್ಚಿದ್ದು ಇಬ್ಬರ ಬಂಧನಕ್ಕೂ ವ್ಯಾಪಕ ಶೋಧ ನಡೆಸಲಾಗಿದೆ. ಕಾರು ಹಾಗೂ ಮದ್ಯವನ್ನು ಪೋಲೀಸರು ವಶಪಡಿಸಿಕೊಂಡಿರುವರು. ನಗರ ಠಾಣೆ  ಪೆÇಲೀಸರು ಕೇಸು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
    ನಿನ್ನೆ ಸಂಜೆ ವೇಳೆ ಉಂಟಾದ ಈ ನಾಟಕೀಯ ಬೆಳವಣಿಗೆಯಿಂದ ಜಿಲ್ಲೆಯ ಸಾಂಸ್ಕøತಿಕ ವಲಯ ದಿಗ್ಮೂಡಗೊಂಡಿದೆ. ಪ್ರತಿಷ್ಠಿತ ಅಕಾಡೆಮಿಯ ಅಧ್ಯಕ್ಷರು ಜನಪ್ರಿಯ ವ್ಯಕ್ತಿಯಾಗಿದ್ದು, ಅವರ ನೇರ ಅರಿವಿನಲ್ಲೇ ಇಂತಹ ಘಟನೆ ನಡೆದಿರುವುದು ಆಶ್ಚರ್ಯ ಮೂಡಿಸಿದೆ. ಜೊತೆಗೆ ರಾಜ್ಯದ ಆಡಳಿತ ಪಕ್ಷದಲ್ಲೂ ಗುರುತಿಸಿಕೊಂಡಿರುವ ಇವರು ಇಂತಹ ಅಮಾನವೀಯ ವ್ಯವಹಾರಗಳಿಗೆ ಒತ್ತಾಸೆಯಾಗಿರುವುದು ಹಲವು ಸಂಶಯಗಳಿಗೂ ಎಡೆಮಾಡಿದೆ.  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries