HEALTH TIPS

ಹಣ ವಿತ್ ಡ್ರಾ ಮಾಡುವ ನಿಯಮ ಬದಲು!


          ನವದೆಹಲಿ: ದೇಶದಲ್ಲಿ ಲಾಕ್‍ಡೌನ್ ಕಾರಣ ಅನೇಕ ನಿಯಮಗಳನ್ನು ಬದಲಾಯಿಸಲಾಗಿದೆ. ಲಾಕ್ ಡೌನ್ ಸಮಯದಲ್ಲಿ ಬಂಕುಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿತ್ತು. ಇದೀಗ ಭಾರತೀಯ ಬ್ಯಾಂಕುಗಳ ಸಂಘವು ಬ್ಯಾಂಕುಗಳಿಂದ ಹಣವನ್ನು ಹಿಂಪಡೆಯಲು ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
       ಏಕಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್ ತಲುಪದಂತೆ ಸಂಘವು ಎಲ್ಲಾ ಬ್ಯಾಂಕ್ ಗ್ರಾಹಕರನ್ನು ಕೋರಿದೆ. ಬದಲಿಗೆ ಆನ್‍ಲೈನ್ ವಹಿವಾಟಿನತ್ತ ಗಮನ ಹರಿಸಿ ಎಂದು ಮನವಿ ಮಾಡಿದೆ. ಇದರೊಂದಿಗೆ ಕನಿಷ್ಠ ಜನರು ಬ್ಯಾಂಕಿನಲ್ಲಿ ಹಣವನ್ನು ಹಿಂಪಡೆಯಲು ಬರುತ್ತಾರೆ ಎಂದು ಐಬಿಎ ತಿಳಿಸಿದೆ.
       ಹೊಸ ನಿಯಮಗಳು:
ಏಪ್ರಿಲ್ನಲ್ಲಿ ಬ್ಯಾಂಕಿನಿಂದ ಹಣವನ್ನು ಹಿಂಪಡೆಯಲು ಹೆಚ್ಚಿನ ಸಂಖ್ಯೆಯ ಜನರು ಸೇರಿದ್ದರು, ನಂತರ ಬ್ಯಾಂಕುಗಳಲ್ಲಿ ಜನಸಂದಣಿ ಇತ್ತು. ಇಂತಹ ಪರಿಸ್ಥಿತಿಯಲ್ಲಿ ಅನೇಕ ಬಾರಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಹೊಸ ನಿಯಮಗಳನ್ನು ಜಾರಿ ಮಾಡಿದೆ.
       ಬದಲಾವಣೆ ತಂದ ಇಂಡಿಯನ್ ಬ್ಯಾಂಕ್ ಅಸೋಸಿಯೇಶನ್:
      ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಗ್ರಾಹಕರಿಗೆ ಬ್ಯಾಂಕುಗಳಿಗೆ ಧಾವಿಸಬೇಡಿ ಎಂದು  ಮನವಿ ಮಾಡಿದ್ದು ಬ್ಯಾಂಕಿಗೆ ತೆರಳುವ ಬದಲಿಗೆ ಜನರು ಆನ್‍ಲೈನ್ ವಹಿವಾಟಿನ ಮೂಲಕ ಮಾತ್ರ ಹೆಚ್ಚಿನ ಕೆಲಸ ಮಾಡಬೇಕೆಂದು ಬ್ಯಾಂಕುಗಳು ಬಯಸುತ್ತವೆ. ಇನ್ನು ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ 500 ರೂಪಾಯಿಗಳನ್ನು ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತಿದೆ. ಈ ಹಣ ಹಿಂಪಡೆಯುವ ಸಲುವಾಗಿ ಜನರು ಹೆಚ್ಚಾಗಿ ಬ್ಯಾಂಕಿಗೆ ಬರುತ್ತಿರುವುದು ಕಂಡು ಬರುತ್ತಿದೆ. ಈ ಹಣದ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ಇದು ನಿಮ್ಮ ಖಾತೆಗಳಲ್ಲಿ ಸುರಕ್ಷಿತವಾಗಿರಲಿದೆ ಎಂದು ಬ್ಯಾಂಕ್ ಗ್ರಾಹಕರಿಗೆ ವಿವರಿಸಿದೆ.
         ಖಾತೆ ಸಂಖ್ಯೆ ಆಧಾರದ ಮೇಲೆ ಹಣ ವಿತ್ ಡ್ರಾ ಮಾಡಲು ಸಾಧ್ಯ:
ಈಗಾಗಲೇ ಏಪ್ರಿಲ್ ಕಂತಿನ ಹಣವನ್ನು ಮಹಿಳೆಯರ ಖಾತೆಗೆ ಹಾಕಲಾಗಿದೆ ಮತ್ತು ಮೇ ತಿಂಗಳ 500 ರೂಪಾಯಿಗಳ ಕಂತನ್ನು ಖಾತೆಗೆ ಹಾಕಲಾಗುತ್ತಿದೆ. ಹಣ ಹಿಂಪಡೆಯುವ ಸಲುವಾಗಿ ಜನರು ಬ್ಯಾಂಕಿಗೆ ಬರುವುದರಿಂದ ಜನಸಂದಣಿ ಹೆಚ್ಚಾಗದಂತೆ ಮತ್ತು ಈ ಸಂದರ್ಭದಲ್ಲಿ ಸಾಮಾಜಿಕ ದೂರವನ್ನು ಕಾಯ್ದುಕೊಳ್ಳುವ ಸಲುವಾಗಿ ಬ್ಯಾಂಕುಗಳು ಹಣವನ್ನು ಹಿಂಪಡೆಯಲು ದಿನಾಂಕದ ಪ್ರಕಾರ ವ್ಯವಸ್ಥೆ ಮಾಡಿವೆ.  ಖಾತೆ ಸಂಖ್ಯೆಯ  ಆಧಾರದ ಮೇಲೆ ಈ ವ್ಯವಸ್ಥೆಯನ್ನು ಮಾಡಲಾಗಿದೆ.
       ಖಾತೆ ಸಂಖ್ಯೆ ಕೊನೆಯ ಅಂಕಿಗಳು 0-1 ಇರುವ ಜನರು ಮೇ 4ರಂದು ಹಣವನ್ನು ಹಿಂಪಡೆಯುವಂತೆ ಸೂಚಿಸಲಾಗಿದೆ. ಇದಲ್ಲದೆ ಖಾತೆ ಕೊನೆಯ ಸಂಖ್ಯೆ 2-3 ಇರುವ ಗ್ರಾಹಕರು ಮೇ 5ರಂದು ಹಣವನ್ನು ಹಿಂಪಡೆದರೆ ಖಾತೆಯ ಕೊನೆಯ ಸಂಖ್ಯೆ 4-5 ಮೇ 6ರಂದು,  ಖಾತೆ ಕೊನೆ ಸಂಖ್ಯೆ 6-7 ಹೊಂದಿರುವ ಗ್ರಾಹಕರು ಮೇ 8 ರಂದು ಮತ್ತು ಗ್ರಾಹಕರು ಖಾತೆ ಕೊನೆ ಸಂಖ್ಯೆ 8-9 ಆಗಿದ್ದರೆ ಅವರು ಮೇ 11 ರಂದು ಹಣವನ್ನು ಹಿಂಪಡೆಯಬಹುದು ಎಂದು ಸೂಚಿಲಾಗಿದೆ.
       ಇದಲ್ಲದೆ ಮೇ 11ರ ನಂತರ ಯಾರಾದರೂ ತಮ್ಮ ಖಾತೆಯಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ, ಅಂದರೆ ಮೇ 11 ರ ನಂತರ ದಿನಾಂಕ ಮತ್ತು ಕೊನೆಯಖಾತೆ ಸಂಖ್ಯೆಯನ್ನು ವ್ಯವಸ್ಥೆಗೊಳಿಸಲಾಗುವುದಿಲ್ಲ ಎಂದು ಹೇಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries