ಮಂಜೇಶ್ವರ: ವಜ್ರ ಟೆಕ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಸಂಸ್ಥೆಯ ಸಂಸ್ಥಾಪಕ,ಸಮಾಜ ಸೇವಕ ಅಶ್ವಿತ್ ಕುಮಾರ್ ಉಪ್ಪಳ ಹಾಗೂ ಸ್ಕಂದ ಕೊರೊನಾ ಹೆಲ್ಪ್ ಡೆಸ್ಕ್ ಮಂಜೇಶ್ವರ ಇವರ ಸಹಯೋಗದಲ್ಲಿ ಯುವಮೋರ್ಚಾ ಮಂಜೇಶ್ವರ ಮಂಡಲ ಅಧ್ಯಕ್ಷ ಚಂದ್ರಕಾಂತ್ ಶೆಟ್ಟಿ ಇಚ್ಲಂಗೋಡು ಇವರ ಪ್ರಾಯೋಜಕತ್ವದಲ್ಲಿ 38 ಬಗೆಯ ಆಯುರ್ವೇದ ಔಷದಿಯ ಗಿಡ ಮೂಲಿಕೆ, ಬೇರುಗಳನ್ನ ಬಳಸಿ, ತಯಾರಿಸಿದ ಕಷಾಯವನ್ನು ಮನೆ-ಮಠ ಬಿಟ್ಟು ಕಳೆದ 41 ದಿನಗಳಿಂದ ಸುಡುವ ಬಿಸಿಲನ್ನು ಲೆಕ್ಕಿಸದೆ ಹಗಲು ರಾತ್ರಿಯೆನ್ನದೆ ಹೆದ್ದಾರಿಗಳಲ್ಲಿ, ವಿವಿಧ ಪ್ರದೇಶಗಳಲ್ಲಿ ಕಾರ್ಯಚರಿಸುವ ಪೆÇಲೀಸ್ ಪೇದೆಗಳಿಗೆ, ಆರೋಗ್ಯ ಅಧಿಕಾರಿಗಳಿಗೆ, ನೀಡುವ ಮೂಲಕ ಯಾವುದೇ ಅನಾರೋಗ್ಯ ಸಂಭವಿಸದಂತೆ ಆರೋಗ್ಯವಂತರಾಗಿ ಕಾರ್ಯ ನಿರ್ವಹಿಸಲು ಉಚಿತವಾಗಿ ನೀಡಲಾಗುತ್ತಿದೆ.
ಕಷಾಯ ವಿತರಿಸುವ ಕಾರ್ಯಕ್ರಮವನ್ನು ಪುತ್ತಿಗೆ ಪಂಚಾಯತಿ ಕಟ್ಟತಡ್ಕದಲ್ಲಿ ಕುಂಬಳೆ ಪೆÇಲೀಸ್ ಠಾಣೆಯ ಸಿವಿಲ್ ಪೆÇಲೀಸ್ ಅಧಿಕಾರಿ ರೇದೀಸ್ ರವರಿಗೆ ಯುವಮೋರ್ಚಾ ಮಂಜೇಶ್ವರ ಮಂಡಲ ಅಧ್ಯಕ್ಷ ಚಂದ್ರಕಾಂತ್ ಶೆಟ್ಟಿ ಇಚ್ಲಂಗೋಡು ಅವರು ವಿತರಿಸುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು. ಈ ಸಂದರ್ಭ ಯುವಮೋರ್ಚಾ ಮಂಜೇಶ್ವರ ಮಂಡಲ ಉಪಾಧ್ಯಕ್ಷ ಕಿಶೋರ್ ಭಗವತೀ, ಬಜರಂಗದಳ ಮಂಗಲ್ಪಾಡಿ ಪಂಚಾಯತಿ ಖಂಡ ಸಮಿತಿ ಸಂಯೋಜಕ ಸತ್ಯ ವೀರನಗರ, ಸ್ಕಂದ ಕೊರೊನಾ ಹೆಲ್ಪ್ ಡೆಸ್ಕ್ ಮಂಜೇಶ್ವರ ಇದರ ಪ್ರಧಾನ ಸಂಚಾಲಕ ರತನ್ ಕುಮಾರ್ ಹೊಸಂಗಡಿ, ಸುಖೇಶ್ ಬೆಜ್ಜ, ಬಾಲಕೃಷ್ಣ ಮಜಿಬೈಲುಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. ಮಂಗಲ್ಪಾಡಿ, ಪುತ್ತಿಗೆ, ಪೈವಳಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಪ್ರದೇಶಗಳಾದ ಬಂದ್ಯೋಡು, ಆರಿಕ್ಕಾಡಿ, ಕುಂಬಳೆ, ಕುಂಬಳೆ ಪೆÇಲೀಸ್ ಠಾಣೆ, ಸೀತಾಂಗೋಳಿ, ಕಟ್ಟತ್ತಡ್ಕ, ಪುತ್ತಿಗೆ, ಪೆರ್ಮುದೆ, ಲಾಲ್‍ಭಾಗ್, ಬಾಯಾರು ಪದವು, ಬೆರಿಪದವು, ಪೆÇನ್ನೆಂಗಳ, ಕುರುಡಪದವು, ಪೈವಳಿಕೆ, ಕೈಕಂಬ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಸುಮಾರು 200 ಕ್ಕೂ ಅಧಿಕ ಪೆÇಲೀಸ್ ಸಿಬ್ಬಂದಿಗಳಿಗೆ, ಆರೋಗ್ಯ ಅಧಿಕಾರಿಗಳಿಗೆ, ಕಷಾಯವನ್ನು ವಿತರಿಸಿ, ಪೆÇಲೀಸರ ಆರೋಗ್ಯ ಕ್ಷೇಮವನ್ನು ವಿಚಾರಿಸಲಾಯಿತು. ಅಲ್ಲದೆ ಉಪ್ಪಳದ ಮಂಗಲ್ಪಾಡಿ ಹೈಯರ್ ಸೆಕೆಂಡರಿ ಶಾಲೆಯಲ್ಲಿರುವ ಸುಮಾರು 80 ಕ್ಕೂ ಅಧಿಕ ಬಿಕ್ಷುಕರಿಗೆ ಮತ್ತು ಹೊರ ರಾಜ್ಯದ ಸುಮಾರು 30 ಕಾರ್ಮಿಕ ವರ್ಗದವರಿಗೂ ನೀಡಲಾಯಿತು.