ಕಾಸರಗೋಡು: ಕೊರೊನಾ ವೈರಸ್ ಕಾರಣದಿಂದ ದೇಶದಾದ್ಯಂತ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಬಡ, ನಿರ್ಗತಿಕ, ಕಾರ್ಮಿಕರಿಗೆ ಹಾಗು ಅನ್ಯರಾಜ್ಯದ ಕಾರ್ಮಿಕರಿಗೆ ಒಂದು ಹೊತ್ತಿನ ತುತ್ತಿಗೆ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ಹೊತ್ತಿನ ತುತ್ತಿಗೂ ಸಂಕಷ್ಟ ಪಡುತ್ತಿರುವವರಿಗೆ ಆರ್‍ಎಸ್‍ಎಸ್‍ನ ಸೇವಾ ವಿಭಾಗವಾದ ಸೇವಾ ಭಾರತಿಯ ಮೂಲಕ ದಿನಾ ಮಧ್ಯಾಹ್ನದೂಟ ನೀಡುವ ಮೂಲಕ ಅಭಿನಂದನೆಗೆ ಪಾತ್ರವಾಗಿದೆ.
ಕಾಸರಗೋಡು ಅಭಯ (ಆರ್‍ಎಸ್‍ಎಸ್ ಕಾರ್ಯಾಲಯ) ದಲ್ಲಿ ಆಹಾರ ಸಿದ್ಧಪಡಿಸಿ ಬಾಳೆ ಎಲೆಯಲ್ಲಿ ಪ್ಯಾಕ್ ಮಾಡಿ ವಾಹನಗಳಲ್ಲಿ ವಿತರಿಸಲಾಗುತ್ತಿದೆ. ದಿನವೊಂದಕ್ಕೆ ಸುಮಾರು 500 ಮಂದಿಗೆ ಮಧ್ಯಾಹ್ನದ ಊಟ ಒದಗಿಸುತ್ತಿದೆ. ಬಾಳೆ ಎಲೆಯಲ್ಲಿ ಮಧ್ಯಾಹ್ನದೂಟ ನೀಡುವ ಮೂಲಕ ಪ್ಲಾಸ್ಟಿಕ್ ನಿಷೇಧವನ್ನು ಚಾಚು ತಪ್ಪದೇ ಪಾಲಿಸುತ್ತಿದೆ.
ಕಳೆದ ಮಾರ್ಚ್ 22ರಿಂದ ಕಾಸರಗೋಡು ನಗರದ ಅನ್ಯರಾಜ್ಯ ಕಾರ್ಮಿಕರಿಗೆ, ಬಡ ಹಾಗು ನಿರ್ಗತಿಕರಿಗೆ ದಿನಾ ಮಧ್ಯಾಹ್ನದೂಟ ನೀಡುತ್ತಿದ್ದು, ಸೇವಾ ವಿಭಾಗದ ಕಾರ್ಯಕರ್ತರು ನಗರದಲ್ಲಿ ಸುಮಾರು 350 ಕ್ಕೂ ಹೆಚ್ಚು ಮನೆಗಳಿಗೆ ಧಾನ್ಯ, ತರಕಾರಿ ಹಾಗು ನಿತ್ಯೋಪಯೋಗಿ ವಸ್ತುಗಳನ್ನೂ ತಲುಪಿಸಿದ್ದಾರೆ. ಸೇವಾ ಕಾರ್ಯಕರ್ತರು ಒಂದು ದಿನಕ್ಕೆ ಸುಮಾರು 30 ಮುಂದಿಗೆ ಅವರ ಮನೆಗಳಿಗೆ ಔಷದಿಗಳನ್ನು ಮಾರ್ಚ್ 22ರಿಂದ ತಲುಪಿಸುತ್ತಾ ಇದ್ದಾರೆ ಹಾಗು ಹಿರಿಯರು ಮತ್ತು ರೋಗಿಗಳಿಗೆ ವೈದ್ಯಕೀಯ ಸೌಕರ್ಯ, ಇವರ ಸಂಚಾರಕ್ಕೆ ಬೇಕಾದ ವಾಹನ ವ್ಯವಸ್ಥೆ ಇತ್ಯಾದಿಗಳನ್ನು ಸೇವಾ ವಿಭಾಗದಿಂದ ಮಾಡುತ್ತಿದ್ದಾರೆ.
ಸೇವಾ ಭಾರತಿ ಸೇವಾ ಕಾರ್ಯದಲ್ಲಿ ನಿರತವಾಗಿದ್ದು ಕೇರಳದಲ್ಲಿ ಸಂಭವಿಸಿದ ನೆರೆಯ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಾರ್ಯಕರ್ತರು ನೆರೆಯಿಂದ ಸಂತ್ರಸ್ತರಾದವರಿಗೆ ಆಸರೆಯನ್ನು ಒದಗಿಸಿತ್ತು. ಈಗಾಗಲೇ ಹಲವು ಮನೆಗಳನ್ನು ನಿರ್ಮಿಸಿ ಕೊಟ್ಟಿದೆ.