ಮುಳ್ಳೇರಿಯ: ಅನಿರೀಕ್ಷಿತವಾಗಿ ಭಾನುವಾರ ಸಂಜೆ ಉಂಟಾದ ಬಿರುಗಾಳಿ ಹಾಗೂ ಮಳೆಗೆ ವ್ಯಾಪಕ ಕೃಷಿ ನಾಶ ಉಂಟಾಗಿದ್ದು ರೈತರು ಕಂಗಾಲಾಗಿದ್ದಾರೆ.
ದೇಲಂಪಾಡಿ ಗ್ರಾ.ಪಂ. ವ್ಯಾಪ್ತಿಯ ಪಳ್ಳಂಜಿ ಹಾಗೂ ಸುತ್ತಮುತ್ತ ಭಾನುವಾರ ಸಂಜೆ ಸುಂಟರ ಗಾಳಿ ಸಹಿತ ಮಳೆಗೆ ಸುಲೈಮಾನ್ ಪಳ್ಳಂಜಿ, ಆಚಕರೆಯ ಅಬ್ದುಲ್ಲ, ಸೂಫಿ ಪಳ್ಳಂಜಿ, ಉಸೈನಾರ್ ಪಳ್ಳಂಜಿ, ಸಿ.ಎಚ್.ಮೊಹಮ್ಮದ್ ಎಂಬವರ ಮನೆಯ ಮೇಲಿನ ಶೀಟ್ ಪೂರ್ಣವಾಗಿ ಎಸೆಯಲ್ಪಟ್ಟಿದೆ. ಲತೀಫ್, ಲಕ್ಷ್ಮಣ ನಾಯ್ಕ್, ಜನಾರ್ಧನ, ಸೂಫಿ, ಟಿ.ಕೆ.ಅಬ್ದುಲ್ಲ ಕುಂಞÂ ಎಂಬವರ ಕಂಗು, ತೆಂಗು, ಬಾಳೆ ಕೃಷಿಗಳು ಶೇ. 50 ಗಾಳಿಗೆ ನೆಲಕಚ್ಚಿದೆ.
ಪಳ್ಳತ್ತಡ್ಕ ಮುಂದುಮಂದಿರದ ಸಮೀಪ ಬೃಹತ್ ಮರವೊಂದು ಧರಾಶಾಯಿಯಾಗಿ ವಿದ್ಯುತ್ ಕಂಬಗಳು ಹಾನಿಗೊಂಡು ವ್ಯಾಪಕ ನಷ್ಟ ಉಂಟಾಯಿತು. ಜೊತೆಗೆ 50ಕ್ಕಿಂತಲೂ ಮಿಕ್ಕಿದ ಕುಟುಂಬಗಳಿಗೆ ವಿದ್ಯುತ್ ಸ್ತಬ್ದಗೊಂಡಿತು.ಪೆರ್ಲ, ಕುಂಬಳೆ, ನೀರ್ಚಾಲು, ಸೀತಾಂಗೋಳಿ ಪ್ರದೇಶಗಳಲ್ಲೂ ಮರಗಳು ಧರಾಶಾಯಿಯಾಗಿವೆ.