ನವದೆಹಲಿ: ಜಾಗತಿಕ ಮಹಾಮಾತಿ ಕೊರೊನಾ ವೈರಸ್ ದೆಸೆಯಿಂದ ಅನೇಕ ರಾಜ್ಯ, ದೇಶ, ಪ್ರದೇಶಗಳು ಲಾಕ್ ಡೌನ್ ಆಗಿವೆ. ಉದ್ಯೋಗ ಸಮಸ್ಯೆ, ಉತ್ಪಾದನಾ ಸ್ಥಗಿತ, ಮಾರಾಟ ರಹಿತ ವ್ಯವಹಾರದಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ದೇಶದ ಹಲವು ರಾಜ್ಯಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಅಂಕಿ ಅಂಶ ನೀಡಿದೆ.
ಸಿಎಂಐಇ ನೀಡಿರುವ ತಿಂಗಳ ಅಂಕಿ ಅಂಶದ ಪ್ರಕಾರ ಏಪ್ರಿಲ್ ತಿಂಗಳಲ್ಲಿ ನಿರುದ್ಯೋಗ ದರ ಶೇ. 23.5 ಕ್ಕೆ ಏರಿಕೆಯಾಗಿದೆ. ತಮಿಳುನಾಡು, ಜಾಖರ್ಂಡ್ ಮತ್ತು ಬಿಹಾರದಲ್ಲಿ ನಿರುದ್ಯೋಗ ಪ್ರಮಾಣ ಅತ್ಯಧಿಕವಾಗಿದೆ.
ಮೇ. 3 ರಂದು ಕೊನೆಗೊಂಡ ವಾರಾಂತ್ಯಕ್ಕೆ ದೇಶದಲ್ಲಿ ನಿರುದ್ಯೋಗ ಪ್ರಮಾಣ ಮತ್ತಷ್ಟು ಏರಿಕೆಯಾಗಿ ಶೇ. 27.1 ರಷ್ಟಿದೆ. ಏಪ್ರಿಲ್ 26ರ ವಾರಾಂತ್ಯಕ್ಕೆ ಶೇ 21.05ರಷ್ಟಿತ್ತು. ಮಾರ್ಚ್ ನಿಂದ ಏಪ್ರಿಲ್ ತಿಂಗಳ ಅವಧಿಯಲ್ಲಿ ಕನಿಷ್ಠ 114 ದಶಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಮುಂಬೈ ಮೂಲದ ಸಿಎಂಐಇ ಸಂಸ್ಥೆ ಪ್ರಕಾರ, ನಗರ ಪ್ರದೇಶಗಳಲ್ಲಿ ಉದ್ಯೋಗ ಸಮಸ್ಯೆ ಹೆಚ್ಚಾಗಿದೆ.ರೆಡ್ ಜೋನ್ ಗಳಲ್ಲಿ ನಿರುದ್ಯೋಗ ಅಧಿಕವಾಗಿದ್ದು ಶೇ 29.22 ರಷ್ಟಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಶೇ 26.16ರಷ್ಟಿದೆ. ಏಪ್ರಿಲ್ 26ರಲ್ಲಿ ನಗರಪ್ರದೇಶದಲ್ಲಿ ಈ ಪ್ರಮಾಣ ಕ್ರಮವಾಗಿ ಶೇ 21.45 ಹಾಗೂ ಶೇ 20.88ರಷ್ಟಿತ್ತು.
ಏಪ್ರಿಲ್ ತಿಂಗಳಾಂತ್ಯದ ರಾಜ್ಯವಾರು ಅಂಕಿ ಅಂಶದಲ್ಲಿ ಪುದುಚೇರಿಯಲ್ಲಿ ನಿರುದ್ಯೋಗ ಪ್ರಮಾಣ ಶೇ 75.8ರಷ್ಟಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಂತರ ತಮಿಳುನಾಡಿನಲ್ಲಿ ಶೇ. 49.8 ರಷ್ಟು ನಿರುದ್ಯೋಗ ದರ ಜಾಖರ್ಂಡ್ ನಲ್ಲಿ ಶೇ. 47.1, ಬಿಹಾರದಲ್ಲಿ ಶೇ. 46.6,ಹರ್ಯಾಣದಲ್ಲಿ ಶೇ 43.2ರಷ್ಟು, ಮಹಾರಾಷ್ಟ್ರದಲ್ಲಿ ಶೇ 20.9, ಉತ್ತರಪ್ರದೇಶದಲ್ಲಿ ಶೇ 21.5ರಷ್ಟು ಹಾಗೂ ಕರ್ನಾಟಕದಲ್ಲಿ ಶೇ 29.8ರಷ್ಟು ನಿರುದ್ಯೋಗ ಪ್ರಮಾಣ ದಾಖಲಾಗಿದೆ.