ಪಾಟ್ನಾ: ಭಾರತೀಯ ರೈಲ್ವೆ ವಿಶ್ವ ಕಾರ್ಮಿಕರ ದಿನದಂದೆ ಕೊವಿಡ್-19 ಲಾಕ್ ಡೌನ್ ನಿಂದಾಗಿ ದೇಶದ ವಿವಿಧ ಸ್ಥಳಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ತೆರಳುವುದಕ್ಕಾಗಿ ಶ್ರಮಿಕ ವಿಶೇಷ ರೈಲು ಆರಂಭಿಸಿದೆ.
ಲಾಕ್ ಡೌನ್ ನಿಂದ ವಿವಿಧ ಸ್ಥಳಗಳಲ್ಲಿ ಸಿಲುಕಿರುವ ಯಾತ್ರಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರೆ ವ್ಯಕ್ತಿಗಳು ಸಹ ಈ ವಿಶೇಷ ರೈಲಿನಲ್ಲಿ ಪ್ರಯಾಣಿಸಬಹುದು. ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಮನವಿ ಮೇರಗೆ ಈ ವಿಶೇಷ ರೈಲು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸಲಿದೆ ಎಂದು ಭಾರತೀಯ ರೈಲ್ವೆಯ ಕಾರ್ಯಕಾರಿ ನಿರ್ದೇಶಕ ರಾಜೇಶ್ ದತ್ ಬಾಜ್ಪಾಯಿ ಅವರು ತಿಳಿಸಿದ್ದಾರೆ. ಶ್ರಮಿಕ ವಿಶೇಷ ರೈಲಿನ ಸುಗಮ ಸಂಚಾರಕ್ಕಾಗಿ ರಾಜ್ಯ ಸರ್ಕಾರಗಳು ಮತ್ತು ರೈಲ್ವೆ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಿವೆ. ಎಲ್ಲಾ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿಯೊಬ್ಬ ಪ್ರಯಾಣಿಕ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರಕ್ಕೆ ಪ್ರಯಾಣಿಕರು ಸಹಕರಿಸಬೇಕು ಎಂದು ರೈಲ್ವೆ ತಿಳಿಸಿದೆ.
ಕೇರಳದಿಂದ ಮೊದಲ ಶ್ರಮಿಕ ರೈಲುಗಾಡಿ ನಿನ್ನೆ ರಾತ್ರಿ 10 ಗಂಟೆಗೆ ಒಡಿಸ್ಸಾಕ್ಕೆ ಸಾವಿರಕ್ಕಿಂತಲೂ ಮಿಕ್ಕ ಅನ್ಯರಾಜ್ಯ ಕಾರ್ಮಿಕರನ್ನು ಹೊತ್ತು ಪ್ರಯಾಣಿಸಿತು.