ಕಾಸರಗೋಡು: ಅನಿವಾರ್ಯ ಸೇವೆಗಳ ಸರಕಾರಿ ಕಚೇರಿಗಳು ಇಂದಿನಿಂದ (ಮೇ 4ರಿಂದ) ಕಾರ್ಯಾಚರಿಸಬಹುದು. ಕಂದಾಯ, ಪೆÇಲೀಸ್, ಕೃಷಿ, ಪಶುಸಂಗೋಪನೆ, ಜಿಲ್ಲಾ ಪಂಚಾಯತ್, ಅಗ್ನಿ ಶಾಮಕ, ಸ್ಥಳೀಯಾಡಳಿತೆ, ಆಹಾರ ಸುರಕ್ಷೆ, ಲೋಕೋಪಯೋಗಿ, ನೀರಾವರಿ, ಎಲ್.ಎಸ್.ಜಿ.ಡಿ., ಜಲ ಪ್ರಾಧಿಕಾರ, ಕೆ.ಎಸ್.ಇ.ಬಿ., ಕುಟುಂಬ ಶ್ರೀ, ಸಿವಿಲ್ ಸಪ್ಲೈಸ್ ಇಲಾಖೆಗಳು ಕಾರ್ಯಾಚರಿಸಬಹುದು. ಸಿಬ್ಬಂದಿಯ ಅಗತ್ಯಕ್ಕನುಸಾರ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ನಡೆಸಲಿವೆ.
ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಸಾಬು, ಹೆಚ್ಚುವರಿ ದಂಡನಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ಡಿ.ಡಿ.ಪಿ.ರೆಜಿ ಕುಮಾರ್, ರಸ್ತೆ ಸಾರಿಗೆ ಅಧಿಕಾರಿ ಮನೋಜ್ ಎಸ್., ಡಿ.ವೈಎಸ್.ಪಿ. ಸುನಿಲ್ ಕುಮಾರ್, ಇತರ ಇಲಾಖೆಗಳ ಜಿಲ್ಲಾ ಮಟ್ಟದ ಮುಖ್ಯಸ್ಥರು ಉಪಸ್ಥಿತರಿದ್ದರು.