ಮಂಜೇಶ್ವರ: ಉದ್ಯಾವರ ಹತ್ತನೇ ಮೈಲು ಪರಿಸರದಲ್ಲಿ ಮನೆಯ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಭಾರಿ ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ.
ಉದ್ಯಾವರ ಹತ್ತನೇ ಮೇಲಿನ ಪರಿಸರದಲ್ಲಿ ವಾಸವಾಗಿರುವ ಕೊಲ್ಲಿ ನಿವಾಸಿ ನವೀನ್ ಚಂದ್ರ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಮನೆಯ ಮುಂಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಎರಡು ಕಪಾಟಿನಲ್ಲಿರಿಸಲಾಗಿದ್ದ 34 ಪವನ್ ಕರಿಮಣಿ ಸರ, ಬಳೆ, ಇತರ ಸರಗಳ ಸಹಿತ ವಿವಿಧ ಮಾದರಿಯ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ನವೀನ್ ಚಂದ್ರ ರವರ ಪತ್ನಿ ಮಮತಾ ಆಕೆಯ ತಾಯಿ ಮನೆಯಲ್ಲಿ ವಾಸವಾಗಿದ್ದಾರೆ. ಸಮೀಪದಲ್ಲೇ ವಾಸವಾಗಿರುವ ಸಂಬಂಧಿಕ ಪ್ರತಿ ದಿನ ಬೆಳಿಗ್ಗೆ ಬಂದು ಬೆಳಕು ಉರಿಸಿ ಹೋಗುತಿದ್ದನೆಂದು ಹೇಳಲಾಗಿದೆ. ಇದರಂತೆ ಬುಧವಾರ ಬೆಳಿಗ್ಗೆ ಬೆಳಕು ಉರಿಸಲು ಮನೆಗೆ ಆಗಮಿಸಿದಾಗ ಬಾಗಿಲು ತೆರೆದ ಸ್ಥಿತಿಯಲ್ಲಿ ಕಂಡು ಬಂದಿದೆ. ಬಳಿಕ ಮಮತಾಳಿಗೆ ಮಾಹಿತಿ ನೀಡಿದಾಗ ಆಕೆ ಬಂದು ಪರಿಶೀಲಿಸಿದಾಗ ಮನೆಯ ಮಲಗುವ ಕೊಠಡಿಗಳ ಕಪಾಟಿನಲ್ಲಿರಿಸಲಾಗಿದ್ದ ವಸ್ತ್ರಗಳನ್ನು ಚೆಲ್ಲಾಪಿಲ್ಲಿಗೊಳಿಸಿರುವ ದೃಶ್ಯ ಕಂಡು ಬಂದಿದೆ.
ಆಭರಣಗಳು ನಾಪತ್ತೆಯಾಗಿರುವುದು ಕಂಡುಬಂತು. ಬಳಿಕ ಮಂಜೇಶ್ವರ ಪೆÇಲೀಸರಿಗೆ ನೀಡಿದ ದೂರಿನಂತೆ ಪೆÇಲೀಸರು ಆಗಮಿಸಿ ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ . ಮಾತ್ರವಲ್ಲದೆ ಸಮೀಪದ ಮನೆಯ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸುತಿದ್ದಾರೆ.