ಕಾಸರಗೋಡು: ಕೆಎಸ್ಸಾರ್ಟಿಸಿ ನೌಕರರ ವೇತನ ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಕೇರಳ ಸರ್ಕಾರ ಹೊರಡಿಸಿರುವ ಆಧ್ಯಾದೇಶ ಹಾಗೂ ಕುರುಡು ನೀತಿ ವಿರುದ್ಧ ಕೆಎಸ್‍ಟಿ ಎಪ್ಲೋಯೀಸ್ ಸಂಘ್(ಬಿಎಂಎಸ್)ವತಿಯಿಂದ ಮಂಗಳವಾರ ಕೆಎಸ್ಸಾರ್ಟಿಸಿ ಡಿಪೋ ಎದುರು ಧರಣಿ ನಡೆಸಲಾಯಿತು.
ಪ್ರತಿಭಟನಾ ಮೆರವಣಿಗೆಯನ್ನು ಬಿಎಂಎಸ್ ಜಿಲ್ಲಾ ಸಮಿತಿ ಅಧ್ಯಕ್ಷ ವಕೀಲ ಪಿ.ಮುರಳೀಧರನ್ ಉದ್ಘಾಟಿಸಿದರು. ಕಳೆದ ಐದು ವರ್ಷಗಳಿಂದ ಕೆಎಸ್ಸಾರ್ಟಿಸಿ ನೌಕರರಿಗೆ ವೇತನ ಪರಿಷ್ಕರಣೆ ಅಥವಾ ಡಿಎ ಹೆಚ್ಚಳಗೊಳಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳದೆ, ಇದೀಗ ಏಕಾಏಕಿ ನಷ್ಟದ ಲೆಕ್ಕಚಾರ ಹಾಗೂ ಕರೊನಾ ಹಿನ್ನೆಲೆಯಲ್ಲಿ ಹಣ ಕಡಿತಗೊಳಿಸಲು ಮುಂದಾಗಿರುವುದು ಖಂಡನೀಯ. ಜತೆಗೆ ಮಂಗಳವಾರದಿಂದ ಎಂ ಪ್ಯಾನಲ್ ಮೆಕ್ಯಾನಿಕ್‍ಗಳನ್ನೂ ಕೆಲಸಕ್ಕೆ ಹಾಜರಾಗದಿರುವಂತೆ ಸೂಚಿಸುವ ಮೂಲಕ ಕೆಎಸ್ಸಾರ್ಟಿಸಿ ಅಮಾನವೀಯ ವರ್ತನೆ ತೋರಿರುವುದಾಗಿ ದೂರಿದರು.
ಸಂಘಟನೆ ಜಿಲ್ಲಾ ಕಾರ್ಯದರ್ಶಿ ಕೆ.ವಿ ಗಿರೀಶ್, ಯೂನಿಯನ್ ಕಾರ್ಯದರ್ಶಿ ಎಂ. ಪ್ರವೀಣ್ ಮುಂತಾದವರು ಉಪಸ್ಥಿತರಿದ್ದರು. ಕೆಎಸ್‍ಟಿಎ ಎಂಪ್ಲಯೀಸ್ ಸಂಘ್ ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಮಣಿಕಂಠನ್ ಸ್ವಾಗತಿಸಿದರು.