ಚಂಡೀಘಡ: ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿರುವಂತೆಯೇ ಅತ್ತ ಹರ್ಯಾಣದಲ್ಲಿ ಐಎಎಸ್ ಅಧಿಕಾರಿಯೊಬ್ಬರು ವೈಯಕ್ತಿಕ ಸುರಕ್ಷತೆಯ ಆತಂಕದಿಂದ ತಮ್ಮ ಹುದ್ದೆಯನ್ನು ತೊರೆದಿದ್ದಾರೆ.
2014ರ ಬ್ಯಾಚ್ ನ ಹರ್ಯಾಣದ ರಾಣಿ ನಗರ ಐಎಎಸ್ ಅಧಿಕಾರಿ ಕೆಶಾನಿ ಆನಂದ್ ಅರೋರಾ ಅವರು ತಮ್ಮ ಐಎಎಸ್ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ರಾಣಿ ನಗರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಹೆಚ್ಚುವರಿ ನಿರ್ದೇಶಕಿಯಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಕೊರೋನಾ ವೈರಸ್ ಹಿನ್ನಲೆಯಲ್ಲಿ ವೈಯುಕ್ತಿಕ ವೈಯಕ್ತಿಕ ಸುರಕ್ಷತೆಯ ಆತಂಕದ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ತಮ್ಮ ರಾಜಿನಾಮೆ ಪತ್ರವನ್ನು ರಾಷ್ಟ್ರಪತಿಗಳಿಗೆ, ಪ್ರಧಾನಿ ಕಚೇರಿಗೆ ಮತ್ತು ಹರ್ಯಾಣ ಗವರ್ನರ್ ರಾಜಿನಾಮೆ ಪತ್ರವನ್ನು ರವಾನೆ ಮಾಡಿದ್ದಾರೆ. ಕಳೆದ ಏಪ್ರಿಲ್ ನಲ್ಲಿ ಈ ಬಗ್ಗೆ ತಮ್ಮ ಪೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದ ಕೆಶಾನಿ ಆನಂದ್ ಅರೋರಾ ಅವರು, ತಮ್ಮ ಐಎಎಸ್ ಹುದ್ದೆಗೆ ರಾಜಿನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದರು. ಅಲ್ಲದೆ ತಮ್ಮ ಉತ್ತರ ಪ್ರದೇಶದ ಘಾಜಿಯಾಬಾದ್ ಗೆ ತೆರಳಬೇಕು ಎಂದು ಹೇಳಿಕೊಂಡಿದ್ದರು. ಪ್ರಸ್ತುತ ರಾಣಿ ನಗರದಲ್ಲಿ ಅವರು ತಮ್ಮ ಸಹೋದರಿ ನಿವಾಸದಲ್ಲಿ ಉಳಿದುಕೊಂಡಿದ್ದರು.
ಈ ಹಿಂದೆ ಇದೇ ಕೇಶಾನಿ ಆನಂದ್ ಅರೋರಾ ಅವರು ತಮ್ಮ ಹಿರಿಯ ಅಧಿಕಾರಿಗಳ ವಿರುದ್ಧ ಕಿರುಕುಳ ಆರೋಪ ಮಾಡಿ ಸುದ್ದಿಗೆ ಗ್ರಾಸವಾಗಿದ್ದರು.