ಮುಳ್ಳೇರಿಯ: ಇಲ್ಲಿಯ ಕಯ್ಯಾರ ಕಿಂಞಣ್ಣ ರೈ ಗ್ರಂಥಾಲಯದ ಸಹಭಾಗಿತ್ವದಲ್ಲಿ 15 ವರ್ಷದ ಕೆಳಗಿನ ಮಕ್ಕಳಿಗಾಗಿ ಈ ಲೋಕ್ ಡೌನ್ ಕಾಲದ ಜ್ಞಾನ ವರ್ಧನೆಯ ಸದುದ್ದೇಶದೊಂದಿಗೆ ಆನ್ಲೈನ್ ಕ್ವಿಜ್ ಸ್ಪರ್ಧೆ ಆಯೋಜಿಸಲಾಯಿತು.
ಸ್ಪರ್ಧೆಯು ಏಪ್ರಿಲ್ 29 ರಿಂದ ಮೇ 3 ರ ವರಗೆ ನಡೆಸಲಾಯಿತು.ವರ್ತಮಾನದ ವಿಷಯಾಧಾರಿತ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲೆಯಲ್ಲದೆ ಕಣ್ಣೂರು, ವಯನಾಡ್ ಜಿಲ್ಲೆಯ ಸ್ಪರ್ಧಾರ್ಥಿಗಳೂ ಸೇರಿ 62 ವಿದ್ಯಾರ್ಥಿಗಳು ನೋಂದಾಯಿಸಿ 50 ವಿದ್ಯಾರ್ಥಿಗಳು ಭಾಗವಹಸಿದರು.
ಸ್ಪರ್ಧೆಯನ್ನು ಕಾಸರಗೋಡು ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಜನಾರ್ಧನನ್ ಉದ್ಘಾಟಿಸಿದರು. ಸಮಾರೋಪವನ್ನು ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಪಿ ದಾಮೋದರನ್ ನಿರ್ವಹಿಸಿದರು. ಕುಂಬಳೆ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ, ಉತ್ತಮ ಅಧ್ಯಾಪಕ ಪ್ರಶಸ್ತಿ ವಿಜೇತ ನಿರ್ಮಲ್ ಕಾರಡ್ಕ, ಭಿತ್ತಿಚಿತ್ರ ಕಲಾವಿದ ವಿಪಿನ್ ಇರಿಟ್ಟಿ ಶುಭ ಹಾರೈಸಿದರು.ಸಮಾರೋಪದ ದಿನ ಅಧ್ಯಾಪಿಕೆ ಬಿಂಜೂಷ, ಸಂಗೀತ ಅಧ್ಯಾಪಿಕೆ ನಿಶಾ, ಚಿತ್ರ ನಟಿ ರಂಜುಷಾ ಕೋಟ್ಟಂಕುಳಿ, ಸುಜಾ ಸಿ. ಏಲಿಯಾಸ್ ರವರ ವಿವಿಧ ಕಲಾ ಕಾರ್ಯಕ್ರಮಗಳನ್ನು ಏರ್ಪಡಿಲಾಗಿತ್ತು. ಸ್ಪರ್ಧೆಗಳ ನಿಯಂತ್ರಣವನ್ನು ಮಿಧೇಶ್ ಪನೆಯಾಲ್ ಹಾಗು ತಾಂತ್ರಿಕ ಸಾಹಯವನ್ನು ಸದಾನಂದ ಮಿಂಚಿಪದವು ರವರು ನಿರ್ವಹಿಸಿದರು. ಸ್ಪರ್ಧಾ ವಿಜೇತಾರಾಗಿ ಪ್ರಥಮ ದೇವಿಕಾ ಮೋಹನ್ ಕೆ.ಕೆ., ದ್ವಿತೀಯ ಶ್ರೇಯಸ್ ಬಿ ನಂಬಿಯಾರ್, ತೃತೀಯ ದೀಪಕ್ ಮೋಹನ್ ಕೆ.ಕೆ. ಹಾಗು ಅನುಗ್ರಹ ಚಾಯೋತ್ತ್ ಪಡೆದರು. ಕಯ್ಯಾರ ಕಿಂಞಣ್ಣ ರೈ ಗ್ರಂಥಾಲಯದ ಸಂಯೋಜಕ ಮೋಹನ್ ಮಾಸ್ತರ್ ಕೆ.ಕೆ. ಸ್ವಾಗತಿಸಿ, ಚಂದ್ರನ್ ಮೋಟಮ್ಮಲ್ ವಂದಿಸಿದರು.