HEALTH TIPS

ಅಮೆರಿಕ ಸಹಿತ ವಿಶ್ವಕ್ಕೆ ಮತ್ತೊಂದು ಶಾಕ್ ನೀಡಿದ ಡ್ರ್ಯಾಗನ್ ಚೀನಾ..!

         ಬೀಜಿಂಗ್/ವಾಷಿಂಗ್ಟನ್: ಕೊರೊನಾ ವೈರಸ್ ಹಾವಳಿ ನಂತರ ಚೀನಾ ಮತ್ತು ಅಮೆರಿಕ ಸಂಬಂಧ ಮತ್ತಷ್ಟು ಹಳಸಿದ್ದು, ವಾಣಿಜ್ಯ ಸಮರ ಈಗ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ.ಕೊರೊನಾ ವೈರಸ್ ವಿಪ್ಲವಕ್ಕಾಗಿ ಚೀನಾ ವಿರುದ್ಧ ಸೇಡು ತೀರಿಸಿಕೊಳ್ಳಲು ಅಮೆರಿಕ ಸೇರಿದಂತೆ ಹಲವು ದೇಶಗಳು ಮುಂದಾಗಿರುವ ಸಂದರ್ಭದಲ್ಲೇ ಕಮ್ಯೂನಿಸ್ಟ್ ದೇಶದ ನಿನ್ನೆ ಇಡೀ ವಿಶ್ವಕ್ಕೆ ಶಾಕ್ ನೀಡಿದೆ.
       ಚೀನಾ ತನ್ನ ಷೇರುಪೇಟೆಯಲ್ಲಿ ಶುಕ್ರವಾರ  ಬೆಳಗ್ಗೆಯಿಂದಲೇ ಡಾಲರ್ ನಿಲ್ಲಿಸಿ ಸಂಪೂರ್ಣ ತನ್ನ ದೇಶಿ ಕರೆನ್ಸಿ ಯೆನ್ ನಲ್ಲೇ ವಹಿವಾಟು ಆರಂಭಿಸಿದೆ. ಇದು ಅಮೆರಿಕ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ವಾಣಿಜ್ಯಾ ಘಾತವಾಗಿದೆ. ಚೀನಾದ ಇತಿಹಾಸದಲ್ಲೇ ಈ ವಿದ್ಯಮಾನ ಇದೇ ಮೊದಲು. ಇದು ಕೇವಲ ಅಮೆರಿಕ ಡಾಲರ್ ಮೇಲಷ್ಟೇ ಅಲ್ಲದೆ ಜಾಗತಿಕ ಷೇರು ವಹಿವಾಟುಗಳ ಮೇಲೆ ಭಾರೀ ದುಷ್ಪರಿಣಾಮ ಬೀರಲಿದೆ.
        ಚೀನಾ ಯೆನ್ ಮತ್ತು ಅಮೆರಿಕ ಡಾಲರ್ ವಿರುದ್ಧ ನಿರಂತರವಾಗಿ ಸಮರ ನಡೆಯುತ್ತಿರುವ ಸಂದರ್ಭದಲ್ಲೇ ಬೀಜಿಂಗ್ ಕೈಗೊಂಡಿರುವ ಈ ಕ್ರಮ ವಾಷಿಂಗ್ಟನ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ತಮ್ಮ ಯೆನ್ ಕರೆನ್ಸಿ ಎದುರು ಡಾಲರ್ ಅಪಮೌಲ್ಯವಾಗಿ, ಅದು ಜಾಗತಿಕ ಮಟ್ಟದಲ್ಲಿಯೂ ತನ್ನ ಪ್ರಾಬಲ್ಯ ಕಳೆದುಕೊಳ್ಳುವಂತೆ ಮಾಡುವುದು ಚೀನಾದ ಉದ್ದೇಶವಾಗಿದೆ. ಜೊತೆಗೆ ತನ್ನ ದೇಶಿ ಕರೆನ್ಸಿ ಮೌಲ್ಯ ಮತ್ತು ಪ್ರಾಬಲ್ಯವನ್ನು ವಿಶ್ವಕ್ಕೆ ಮನವರಿಕೆ ಮಾಡಿಕೊಳ್ಳುವ ತಂತ್ರವೂ ಇದರಲ್ಲಿದೆ. ಏಷ್ಯಾದ ಅತ್ಯಂತ ಪ್ರಬಲ ಆರ್ಥಿಕ ಸಾಮಥ್ರ್ಯದ ಚೀನಾ ಮತ್ತು ಸೂಪರ್ ಪವರ್ ಅಮೆರಿಕ ನಡುವೆ ಕೆಲವು ವರ್ಷಗಳಿಂದಲೂ ಟ್ರೇಡ್ ವಾರ್, ಕೋವಿಡ್-19 ಸೋಂಕು ವಿಶ್ವವ್ಯಾಪಿ ವ್ಯಾಪಿಸುತ್ತಿದ್ದಂತೆ ಮತ್ತಷ್ಟು ಉಲ್ಬಣಗೊಂಡಿದೆ.
      ಚೀನಾದ ವುಹಾನ್ ನ ವೈರಸ್ ಲ್ಯಾಬ್ ನಿಂದ ಕಿಲ್ಲರ್ ಕೊರೊನಾ ವೈರಸ್ ಸೋರಿಕೆಯಾಗಿ ವಿಶ್ವಾದ್ಯಂತ 200ಕ್ಕೂ ಹೆಚ್ಚು ದೇಶಗಳಲ್ಲಿ ಲಕ್ಷಾಂತರ ಸಾವು ಮತ್ತು ಸೋಂಕು ಪ್ರಕರಣಗಳಿಗೆ ಕಾರಣವಾಗಿದ್ದು, ಅಪಾರ ಆರ್ಥಿಕ ನಷ್ಟ ಉಂಟಾಗಿದೆ ಎಂಬುದು ಅಮೆರಿಕ ಮತ್ತು ಇತರ ದೇಶಗಳ ಆರೋಪವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries