ಚೆನ್ನೈ: ಒಮ್ಮೆ ಬಳಸಿದ ಮಾಸ್ಕ್‍ನಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.
ಜನರು ಸಾಮಾನ್ಯವಾಗಿ ಬಯೋ ಮೆಡಿಕಲ್ ತ್ಯಾಜ್ಯವನ್ನು ಆಸ್ಪತ್ರೆ ಅಥವಾ ಆರೋಗ್ಯ ಸೇವಾ ಸಿಬ್ಬಂದಿಗಳಿಗೆ ಸಂಬಂಧಿಸಿದ್ದು ಎಂಬುದಾಗಿ ಭಾವಿಸಿ ನಿರ್ಲಕ್ಷ್ಯ ವಹಿಸುತ್ತಾರೆ. ಆದರೆ, ಬಳಸಿದ ಮಾಸ್ಕ್ ಗಳಿಂದಲೂ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ . ಸಾಮಾನ್ಯವಾಗಿ ಜನರು ಮಾಸ್ಕ್ ಗಳನ್ನು ಯಾವುದೇ ವಸ್ತುಗಳಿಂದ ಪ್ರತ್ಯೇಕಿಸದೆ ಹೇಗೆ ಬಳಸಿತ್ತಾರೋ ಹಾಗೆಯೇ ಡಸ್ಟ್ ಬಿನ್ ಗಳಲ್ಲಿ ತಂದು ಹಾಕುತ್ತಾರೆ. ತಮ್ಮಲ್ಲಿಯೇ 10 ಮಂದಿಗೆ ಸೋಂಕು ತಗುಲಿದ ಬಳಿಕ ಭಯ ಆರಂಭವಾಗಿದೆ ಎಂದು ಪೌರಕಾರ್ಮಿಕರು ಹೇಳುತ್ತಾರೆ.
ಚೆನ್ನೈ ಕಾಪೆರ್Çೀರೇಷನ್ ಚೆನ್ನೈ ಕಾಪೆರ್Çೀರೇಷನ್ ಅಂದಾಜಿನ ಪ್ರಕಾರ, ಲಾಕ್ ಡೌನ್ ಆರಂಭವಾದಾಗಿನಿಂದಲೂ ಪ್ರತಿನಿತ್ಯ ಸುಮಾರು 5 ಟನ್ ನಷ್ಟು ಬಯೋಮೆಡಿಕಲ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಕ್ವಾರಂಟೈನ್ ನಲ್ಲಿರುವ ಮನೆಗಳಿಂದ ಉತ್ಪತ್ತಿಯಾಗುವ ಘನ ತ್ಯಾಜ್ಯವೂ ಸೇರಿದೆ. ಕ್ವಾರಂಟೈನ್ ಅಲ್ಲದ ಮನೆಗಳ ನಿವಾಸಿಗಳು ತಾವು ಬಳಸಿದ ಮಾಸ್ಕ್ ಗಳು, ಗ್ಲೌಸುಗಳನ್ನು ಸಾಮಾನ್ಯ ದ್ರಾವಣದಿಂದ ಸೋಂಕು ರಹಿತಗೊಳಿಸಿ ಅವುಗಳನ್ನು ಪ್ರತ್ಯೇಕವಾಗಿ ಸುತ್ತಿ ಪೌರ ಕಾರ್ಮಿಕರಿಗೆ ನೀಡಬೇಕು ಎಂದು ಏಪ್ರಿಲ್ 11 ರಂದು ಮಹಾನಗರ ಪಾಲಿಕೆ ಸಾರ್ವಜನಿಕರಿಗೆ ಸಲಹೆಯೊಂದನ್ನು ಪ್ರಕಟಿಸಿತ್ತು. ಡಸ್ಟ್ ಬಿನ್ ಗಳಲ್ಲಿ ಮಾಸ್ಕ್ ಸಾಮಾನ್ಯವಾಗಿ ಜನರು ಮಾಸ್ಕ್ ಗಳನ್ನು ಯಾವುದೇ ವಸ್ತುಗಳಿಂದ ಪ್ರತ್ಯೇಕಿಸದೆ ಹೇಗೆ ಬಳಸಿತ್ತಾರೋ ಹಾಗೆಯೇ ಡಸ್ಟ್ ಬಿನ್ ಗಳಲ್ಲಿ ತಂದು ಹಾಕುತ್ತಾರೆ. ತಮ್ಮಲ್ಲಿಯೇ 10 ಮಂದಿಗೆ ಸೋಂಕು ತಗುಲಿದ ಬಳಿಕ ಭಯ ಆರಂಭವಾಗಿದೆ ಎಂದು ಪೌರಕಾರ್ಮಿಕರು ಹೇಳುತ್ತಾರೆ.
ಗರಿಷ್ಠ ನಾಲ್ಕುಗಂಟೆ ಮಾತ್ರ ಒಂದು ಮಾಸ್ಕ್ ಬಳಸಬೇಕು:
ನಾಲ್ಕು ಗಂಟೆಗೂ ಹೆಚ್ಚು ಕಾಲದವರೆಗೂ ಬಳಸಿದ ಮಾಸ್ಕ್ ಗಳನ್ನು ಬದಲಾಯಿಸದಿದ್ದರೆ ಅವುಗಳು ಮಾಲಿನ್ಯಕಾರಕವಾಗಲಿವೆ. ಇವುಗಳನ್ನು ಸಂಗ್ರಹಿಸುವ ಪೌರ ಕಾರ್ಮಿಕರ ಆರೋಗ್ಯದ ಮೇಲೂ ತೀವ್ರ ಪರಿಣಾಮ ಬೀರಲಿವೆ ಎಂದು ಅವರು ಹೇಳಿದ್ದಾರೆ. ಪೌರಕಾರ್ಮಿಕರಿಗೆ ಸುರಕ್ಷತಾ ಕಿಟ್ ಕಂಟೈನ್ ಮೆಂಟ್ ಪ್ರದೇಶದೊಳಗೆ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಸುರಕ್ಷತಾ ಕಿಟ್ ಗಳನ್ನು ಒದಗಿಸಲಾಗುತ್ತಿದೆ. ಆದಾಗ್ಯೂ, ಕಂಟೈನ್ ಮೆಂಟ್ ಪ್ರದೇಶದ ಹೊರಗಡೆ ಕೆಲಸ ಮಾಡುವ ಪೌರ ಕಾರ್ಮಿಕರು ಕೂಡಾ ಮಾಸ್ಕ್ , ಗ್ಲೌಸು ಮತ್ತಿತರ ಸುರಕ್ಷತಾ ಕ್ರಮಗಳ ಮೂಲಕ ಕೆಲಸ ಮಾಡಬೇಕು. ಕೆಲಸ ಮುಗಿಸಿ ಮನೆಗೆ ಹೋದ ನಂತರ ಸ್ನಾನ ಮಾಡಬೇಕು ಎಂದು ಕಾಪೆರ್Çರೇಷನ್ ಅಧಿಕಾರಿ ತಿಳಿಸಿದ್ದಾರೆ.