ಕಾಸರಗೋಡು: ಆಹಾರ ಸುರಕ್ಷಾ ಅಭಿಯಾನ ಅಂಗವಾಗಿ ಕುಟುಂಬಶ್ರೀ ಜಿಲ್ಲಾ ಮಿಷನ್ ವತಿಯಿಂದ 'ನಾನು ಮತ್ತು ನನ್ನ ನೆರೆಕರೆಕೂಟ ಕೃಷಿಯತ್ತ'ಯೋಜನೆ ಜಿಲ್ಲೆಯಲ್ಲಿ ಆರಂಭಗೊಳ್ಳಲಿದೆ. ಜಿಲ್ಲೆಯ ನೆರೆಕೂಟ ಸದಸ್ಯರ ಮೂಲಕ ಯೋಜನೆ ಜಾರಿಗೊಳ್ಳಲಿದೆ. ಕೋವಿಡ್ ನಿಯಂತ್ರಣ ಅವಧಿಯ ನಂತರ ಆಹಾರ ಸುರಕ್ಷೆ ಮುಗ್ಗಟ್ಟು ಪರಿಹರಿಸುವ ನಿಟ್ಟಿನಲ್ಲಿ ಕುಟುಂಬಶ್ರೀ ಈ ಯೋಜನೆ ಜಾರಿಗೊಳಿಸುತ್ತಿದೆ. ಜಿಲ್ಲೆಯ 10,936 ನೆರೆಕೂಟದಲ್ಲಿರುವ 1,7,48,00 ಸದಸ್ಯರು ಈ ಮೂಲಕ ಕೃಷಿರಂಗಕ್ಕೆ ಪಾದಾರ್ಪಣೆ ನಡೆಸಬಹುದಾಗಿದೆ. ಇದರ ಅಂಗವಾಗಿ ಎಡೆ ಬೆಳೆರೂÀಪದಲ್ಲಿ ಸುವರ್ಣ ಗಡ್ಡೆ, ಬೇವಿನ ಸೊಪ್ಪು, ಬಾಳೆ, ಪಪ್ಪಾಯ ಇತ್ಯಾದಿಗಳ ಕೃಷಿ ನಡೆಸಲಾಗುವುದು. ಪ್ರತಿ ನೆರೆಕರೆ ಕೂಟದಲ್ಲೂ ಕನಿಷ್ಠ ಒಂದು ಜೆ.ಎಲ್.ಜಿ. ರಚಿಸಲಾಗುವುದು. ನೆರೆಕರೆಕೂಟ ಪ್ರದೇಶದಲ್ಲಿ ಕನಿಷ್ಠ 50 ಸೆಂಟ್ಸ್ ಜಾಗ ಪತ್ತೆಮಾಡಿ ಕೃಷಿ ಆರಂಭಿಸಲಾಗುವುದು ಎಂದು ಕುಟುಂಬಶ್ರೀ ಜಿಲ್ಲಾ ಸಂಚಾಲಕ ಟಿ.ಟಿ.ಸುರೇಂದ್ರನ್ ತಿಳಿಸಿದರು. ಈ ಯೋಜನೆ ಜಾರಿಯನ್ನು ಜನಪರ ಉತ್ಸವವಾಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಸ್ಥಳೀಯಾಡಳಿತ ಸಂಸ್ಥೆಗಳ ಯೋಜನೆಗಳು, ಕೃಷಿ ಇಲಾಖೆ, ಕುಟುಂಬಶ್ರೀ ಇತ್ಯಾದಿಗಳ ಆರ್ಥಿಕ ಬೆಂಬಲದೊಂದಿಗೆ ಅನುಷ್ಠಾನಗೊಳಿಸಲಾಗುವುದು.
'ನಾನು ಮತ್ತು ನನ್ನ ನೆರೆಕರೆಕೂಟ ಕೃಷಿಯತ್ತ'- ಯೋಜನೆ ಆರಂಭ
0
ಮೇ 03, 2020