ಕಾಸರಗೋಡು: ಕೋವಿಡ್ ಹಿನ್ನೆಲೆಯಲ್ಲಿ ದೇಶವ್ಯಾಪಿ ಹೇರಲಾದ ಲಾಕ್ ಡೌನ್ ನಿಯಂತ್ರಣವನ್ನು ಕ್ರಿಯಾತ್ಮಕವಾಗಿ ಟೆಲಿ ಚಿತ್ರವೊಂದನ್ನು ನಿರ್ಮಿಸುವ ಮೂಲಕ ಸಾರ್ಥಕತೆಪಡೆದು ಮಾದರಿಯಾಗಿ ಸ್ತುತ್ಯರ್ಹರಾಗಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಮೊಬೈಲ್ ವೀಕ್ಷಣೆ ಸಹಿತ ಸಾಮಾಜಿಕ ಜಾಲತಾಣಗಳನ್ನು ಸಮಯ ಕಳೆಯುತ್ತಿರುವ ಜನಸಾಮಾನ್ಯರಿಗಿಂತ ವಿಭಿನ್ನವಾಗಿ ಇಲ್ಲೊಂದಿಷ್ಟು ಮಹಿಳೆರು ಸಾಕ್ಷ್ಯಚಿತ್ರ ನಿರ್ಮಿಸುವ ಮೂಲಕ ಗಮನ ಸೆಳೆದಿದ್ದಾರೆ. ಕೋವಿಡ್ 19 ರ ಹಿನ್ನೆಲೆಯಲ್ಲಿ ಬೇಕಲದ ವುಮನ್ಸ್ ಪೋಸ್ಟ್ ಎಂಬ ವಾಟ್ಸ್ ಆಫ್ ಗುಂಪು ಮಕ್ಕಳಲ್ಲಿ ಕೊರೊನಾ ಜಾಗೃತಿಯ 10 ನಿಮಿಷಗಳ ಸಾಕ್ಷ್ಯಚಿತ್ರ ನಿರ್ಮಿಸಿದೆ.
ಕೊರೊನಾ ಬಾಧಿಸಿದ ಶಾಲಾ ವಿದ್ಯಾರ್ಥಿಯೋರ್ವನಿಗೆ ಶಿಕ್ಷಕರು ನೀಡುವ ಧೈರ್ಯ, ಸಾಂತ್ವನದ ಕಥಾ ಹಂದರ ಈ ಸಾಕ್ಷ್ಯಚಿತ್ರದ ಮುಖ್ಯ ಕಥಾವಸ್ತುವಾಗಿದೆ. ವಿದ್ಯಾರ್ಥಿ ಕೋವಿಡ್ ನಿರೀಕ್ಷಣೆಯಲ್ಲಿ ಕಳೆಯುವುದು, ಬಳಿಕ ಪರಿಶೋಧನೆಯಲ್ಲಿ ಪಾಸಿಟಿವ್ ಆಗಿ ರೋಗ ನಿಖರಗೊಳ್ಳುವುದು, ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುವಾಗಿನ ಮನೋಹಿಂಸೆಗಳು ಈ ಚಿತ್ರದಲ್ಲಿ ಬೆರಗುಗೊಳಿಸುತ್ತದೆ.
ಕಣ್ಣೂರು, ಕಾಸರಗೋಡು ಜಿಲ್ಲೆಗಳ ಹಲವು ಶಿಕ್ಷಕಿಯರು ತಮ್ಮ ತಮ್ಮ ಮನೆಯಿಂದಲೇ ಚಿತ್ರೀಕರಿಸಿ ಅಭಿನಯಿಸಿರುವುದೂ ಅಚ್ಚುಕಟ್ಟಾಗಿ ಮೂಡಿಬಂದಿದೆ. 20 ರಷ್ಟು ಶಿಕ್ಷಕಿಯರು ತಮ್ಮ ಮನೆಗಳಲ್ಲೇ ಚಿತ್ರೀಕರಿಸಿದ ವಿವಿಧ ತುಣುಕುಗಳನ್ನು ಬಳಿಕ ಸಂಕಲಿಸಲಾಗಿದೆ. ಕಾಸರಗೋಡು ಶೈಲಿಯ ಮಲೆಯಾಳ ಭಾಷೆಯಲ್ಲಿ ಈ ಚಿತ್ರ ಇರುವುದು ಇನ್ನೊಂದು ವಿಶೇಷತೆಯಾಗಿದೆ. ಇನ್‍ಪ್ರಂಟ್ ಎಂಬ ಹೆಸರಿನ ಈ ಸಾಕ್ಷ್ಯಚಿತ್ರವನ್ನು ಕಾಸರಗೋಡಿನಲ್ಲಿ ಯೂಟ್ಯೂಬ್ ಮೂಲಕ ಮೇ.1 ರಂದು ಬಿಡುಗಡೆಗೊಳಿಸಲಾಗಿದ್ದು 24 ಗಂಟೆಗಳಲ್ಲಿ ಐದು ಸಾವಿರಕ್ಕಿಂತಲೂ ಹೆಚ್ಚು ಮಂದಿ ವೀಕ್ಷಿಸಿರುವುದೂ ಗಮನ ಸೆಳೆದಿದೆ. ವಿ.ಕೆ.ಬಾಲಮಣಿ ಚಿತ್ರ ರಚನೆ ಹಾಗೂ ನಿರ್ದೇಶನ ಮಾಡಿದವರು. ಪಯ್ಯನ್ನೂರ್ ಸೈಂಟ್ ಮೇರೀಸ್ ಶಾಲಾ ವಿದ್ಯಾರ್ಥಿನಿ ಬೇಬಿತೀರ್ಥ ಕೋವಿಡ್ ಬಾಧಿಸಿದ ವಿದ್ಯಾರ್ಥಿಯ ಪಾತ್ರದಲ್ಲಿ ಮನೋಜ್ಞಳಾಗಿ ಅಭಿನಯಿಸಿರುವಳು. ವಿವಿಧ ಶಾಲಾ ಶಿಕ್ಷಕಿಯರಾದ ಹರಿಪ್ರಿಯ, ಸಿನಿಮೋಳ್, ಸತಿ, ಶೋಭಾ, ಪ್ರಸನ್ನ, ಬೇಬಿ ಸಜಿನಿ, ರೇಷ್ಮ, ಪ್ರೀತ, ಪ್ರಭಾವತಿ, ಶೈಲಜ ಮೊದಲಾದವರು ಸಾಕ್ಷ್ಯಚಿತ್ರದ ವಿವಿಧ ಪಾತ್ರಗಳನ್ನು ಅಭಿನಯಿಸಿದ್ದಾರೆ. ಲೋಕ್ ಡೌನ್ ಸಂದರ್ಭದ ಕಾಲಾವಧಿಯಲ್ಲಿ ವಿದ್ಯಾರ್ಥಿಗಳ ಸಕಾರಾತ್ಮಕ ಚಟುವಟಿಕೆಗಳ ಪ್ರೋತ್ಸಾಹಕ್ಕೆ ಮುನ್ನುಡಿಯಾಗಿ ಈ ಚಿತ್ರ ನಿರ್ಮಿಸಲಾಯಿತೆಂದು ನಿರ್ದೇಶಕಿ ಬಾಲಮಣಿ ತಿಳಿಸಿದ್ದಾರೆ.