ಕಾಸರಗೋಡು: ಬ್ರೇಕ್ ದಿ ಚೈನ್ ಅಭಿಯಾದ ಎರಡನೇ ಹಂತವಾಗಿರುವ 'ಮುಂದುವರಿಯಲಿದೆ ಈ ಜಾಗ್ರತೆ' ಚಟುವಟಿಕೆಗಳು ಕಾಸರಗೋಡು ಜಿಲ್ಲೆಯಲ್ಲಿ ಆರಂಭಗೊಂಡಿದೆ. ರಾಜ್ಯ ಸರ್ಕಾರ, ಸಾಮಾಜಿಕ ನೀತಿ ಇಲಾಖೆ, ಮಹಿಳಾ ಶಿಶು ಅಭಿವೃಧ್ಧಿ ಇಲಾಖೆ, ಕೇರಳ ಸಮಾಜ ಸುರಕ್ಷಾ ಮಿಷನ್ ಜಂಟಿ ವತಿಯಿಂದ ಕಾರ್ಯಕ್ರಮ ನಡೆಯುತ್ತಿದೆ.
ಈ ನಿಟ್ಟಿನಲ್ಲಿ 13500 ಭಿತ್ತಿಪತ್ರಗಳು, 20 ಕಿಯಾಸ್ಕ್‍ಗಳನ್ನು ಜಿಲ್ಲೆಯಲ್ಲಿ ವಿತರಿಸಲಾಗಿದೆ. ಎಲ್ಲ ಗ್ರಾಮಪಂಚಾಯಿತಿಗಳು, ನಗರಸಭೆಗಳು, ಸಾರ್ವಜನಿಕ ಕೇಂದ್ರಗಳು, ಅಂಚೆಕಚೇರಿ, ಪೆÇಲೀಸ್ ಠಾಣೆ, ಅಂಗನವಾಡಿ ಒಳಗೊಂಡಂತೆ ನಾನಾ ಕಡೆ ಭಿತ್ತಿ ಪತ್ರ ಲಗತ್ತಿಸಲಾಗುವುದು.ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅವರು ಪಂಚಾಯತ್‍ಡೆಪ್ಯೂಟಿ ಡೈರೆಕ್ಟರ್ ಅವರಿಗೆ ಭಿತ್ತಿಪತ್ರ ಮತ್ತು ಕಿಯಾಸ್ಕ್ ಗಳನ್ನು ಹಸ್ತಾಂತರಿಸಿದರು. ಕೇರಳ ಸಮಾಜ ಸುರಕ್ಷೆಮಿಷನ್ ಜಿಲ್ಲಾ ಸಂಚಾಲಕ ಜಿಷೋ ಜೇಮ್ಸ್, ಸಹಾಯಕ ಸಂಚಾಲಕರಾದ ಅಶ್ರಫ್, ರಾಜೇಶ್ ಉಪಸ್ಥಿತರಿದ್ದರು.