HEALTH TIPS

ಒಗ್ಗಟ್ಟಿನಿಂದ ಮುನ್ನಡೆದರೆ ದೇಶದಲ್ಲಿ ಕೊರೋನಾ ಪೀಕ್ ಗೆ ಹೋಗುವುದಿಲ್ಲ: ಕೇಂದ್ರ

 
           ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರ ನಡುವೆಯೇ, ಮಹಾಮಾರಿಯನ್ನು ಕಟ್ಟಿಹಾಕಲು ನಾವು ಎಲ್ಲರೂ ಒಟ್ಟಾಗಿ ಯತ್ನಿಸಿದರೆ ದೇಶದಲ್ಲಿ ಕೊವಿಡ್-19 ಯಾವತ್ತೂ ಪೀಕ್ ಗೆ ಹೋಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
           ನಿನ್ನೆ ಸುದ್ದಿಗೋಷ್ಠಿಯಲ್ಲಿ ಕೊವಿಡ್-19 ಪ್ರಕರಣಗಳ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ಅವರು, ದೇಶದಲ್ಲಿ ಕೊರೋನಾ ವೈರಸ್ ಡಬಲ್ ಆಗುವ ಪ್ರಮಾಣ ಈಗ 12 ದಿನಕ್ಕೆ ಏರಿಕೆಯಾಗಿದೆ ಎಂದರು.
          ಸಾಂಕ್ರಾಮಿಕ ರೋಗ ಸದ್ಯ ನಿಯಂತ್ರಣದಲ್ಲಿದೆ. ಒಂದು ವೇಳೆ ನಾವು ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ದೇಶದಲ್ಲಿ ಕೊರೋನಾ ಪೀಕ್ ಗೆ ಹೋಗುವುದಿಲ್ಲ. ಆದರೆ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು ಅಷ್ಟೇ ಎಂದು ಅಗರವಾಲ್ ಹೇಳಿದ್ದಾರೆ. ಸೋಮವಾರ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 2,573 ಹೊಸ ಪಾಸಿಟಿವ್ ಪ್ರಕರಣ ದಾಖಲಾಗಿವೆ. ಆ ಮೂಲಕ ಸೋಂಕಿತರ ಸಂಖ್ಯೆ 42,836ಕ್ಕೆ ಏರಿಕೆಯಾಗಿದೆ. ಈ ಪೈಕಿ  11,762 ಮಂದಿ ಸೋಂಕಿತರು ಗುಣಮುಖರಾಗಿದ್ದು, 29, 685 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು. ಭಾರತದ 20 ಮಹಾ ನಗರಗಳಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ಮುಂಬೈ, ಅಹಮದಾಬದ್, ದೆಹಲಿ, ಚೆನ್ನೈ ನಗರಗಳಲ್ಲೇ ಹೆಚ್ಚು ಕೊರೋನಾ ಪೀಡಿತರಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.
         ಮೊನ್ನೆ ಒಂದೇ ದಿನ 83 ಮಂದಿ ಸೋಂಕಿತರು ಸಾವನ್ನಪ್ಪಿದ್ದು ಆ ಮೂಲಕ ದೇಶದಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1389ಕ್ಕೆ ಏರಿಕೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries