ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ ಕೂಡ ಹೊಸ ಕೊರೊನಾ ಸೋಂಕು ತಗಲಿರುವ ಪ್ರಕರಣ ದಾಖಲಾಗಿಲ್ಲ.
ಜಿಲ್ಲೆಯಲ್ಲಿ ಸೋಮವಾರ ಸೋಂಕು ಬಾ„ತರ ರಿಕವರಿ ರೇಟ್ ಶೇ. 96.6 ಆಗಿದೆ. ಜಿಲ್ಲೆಯಲ್ಲಿ ಈ ವರೆಗೆ 172 ಮಂದಿ ಗುಣಮುಖರಾಗಿದ್ದಾರೆ. 4812 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 4144 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. 340 ಮಂದಿಯ ಫಲಿತಾಂಶ ಲಭಿಸಿಲ್ಲ. ಜಿಲ್ಲೆಯಲ್ಲಿ ಈಗ 6 ಮಂದಿ ಪಾಸಿಟವ್ ರೋಗಿಗಳಿದ್ದಾರೆ.
ಮನೆಗಳಲ್ಲಿ 1346 ಮಂದಿ, ಆಸ್ಪತ್ರೆಗಳಲ್ಲಿ 25 ಮಂದಿ ನಿಗಾದಲ್ಲಿದ್ದಾರೆ. ಒಬ್ಬರನ್ನು ಸೋಮವಾರ ನೂತನವಾಗಿ ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. 262 ಮಂದಿ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
ಕೇರಳದಲ್ಲಿ 61 ಮಂದಿ ಗುಣಮುಖ : ಕೇರಳ ರಾಜ್ಯದಲ್ಲಿ ಸೋಮವಾರ ಹೊಸದಾಗಿ ಕೊರೊನಾ ವೈರಸ್ ಸೋಂಕು ಪ್ರಕರಣ ಕಂಡು ಬಂದಿಲ್ಲ. ಅದೇ ವೇಳೆ 61 ಮಂದಿ ಗುಣಮುಖರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಕೇವಲ 34 ಮಂದಿ ಮಾತ್ರವೇ ಚಿಕಿತ್ಸೆಯಲ್ಲಿದ್ದಾರೆ.
ರಾಜ್ಯದಲ್ಲಿ ಈ ತನಕ 499 ಮಂದಿಗೆ ಕೊರೊನಾ ವೈರಸ್ ಸೋಂಕು ಬಾ„ಸಿದ್ದು, ಈ ಪೈಕಿ 462 ಮಂದಿ ಗುಣಮುಖರಾಗಿದ್ದಾರೆ. 21352 ಮಂದಿ ಮನೆಗಳಲ್ಲೂ, 372 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. 33010 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, ಈ ಪೈಕಿ ಲಭ್ಯ 32315 ನೆಗೆಟಿವ್ ಆಗಿದೆ. ರಾಜ್ಯದಲ್ಲಿ ಒಟ್ಟ 84 ಹಾಟ್ ಸ್ಪಾಟ್ ಪ್ರದೇಶಗಳಿವೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗುತ್ತಿರುವುದು ಸಮಾಧಾನಕರವಾಗಿದ್ದರೂ, ವಿದೇಶದಲ್ಲಿ ಮತ್ತು ಅನ್ಯರಾಜ್ಯಗಳಲ್ಲಿ ಕೇರಳದ 80 ಕ್ಕೂ ಅಧಿಕ ಮಂದಿ ಸಾವಿಗೀಡಾಗಿರುವುದು ದು:ಖಕರವೆಂದು ಮುಖ್ಯಮಂತ್ರಿ ಹೇಳಿದರು.
16 ಕೇಸು ದಾಖಲು :
ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 16 ಕೇಸುಗಳನ್ನು ದಾಖಲಿಸಲಾಗಿದೆ. 36 ಮಂದಿಯನ್ನು ಬಂಧಿಸಲಾಗಿದ್ದು, 9 ವಾಹನಗಳನ್ನು ವಶಪಡಿಸಲಾಗಿದೆ. ವಿದ್ಯಾನಗರ ಪೆÇಲೀಸ್ ಠಾಣೆಯಲ್ಲಿ 2 ಕೇಸುಗಳು, ಕಾಸರಗೋಡು 1, ಬೇಡಗಂ 2, ಅಂಬಲತ್ತರ 2, ನೀಲೇಶ್ವರ 2, ಚಿತ್ತಾರಿಕಲ್ 3, ವೆಳ್ಳರಿಕುಂಡ್ 4 ಕೇಸುಗಳನ್ನು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 2029 ಕೇಸುಗಳನ್ನು ದಾಖಲಿಸಲಾಗಿದೆ. 2565 ಮಂದಿಯನ್ನು ಬಂಧಿಸಲಾಗಿದೆ. 839 ವಾಹನಗಳನ್ನು ವಶಪಡಿಸಲಾಗಿದೆ.