ಕಾಸರಗೋಡು: ಮುಖ್ಯಮಂತ್ರಿ ಅವರ ವಿಪತ್ತು ನಿವಾರಣಾ ನಿಧಿಗೆ ಕಾಸರಗೋಡು ಜಿಲ್ಲೆಯ ವಿವಿಧೆಡೆಯಿಂದ ದೇಣಿಗೆ ಬಂದು ಸಏರುತ್ತಿದೆ. ಬದಿಯಡ್ಕ ಗ್ರಾಮಪಂಚಾಯಿತಿಯ ಚರ್ಲಡ್ಕ ದ ಬಾಡಿಗೆ ಕ್ವಾರ್ಟ ರ್ಸ್ ನಲ್ಲಿ ವಾಸಿಸುತ್ತಿರುವ ಸಿರಾಜ್-ಸುಮಯ್ಯ ದಂಪತಿ ಮಕ್ಕಳಾದ ಮಹಮ್ಮದ್ ಅಯಾನ್, ಅಬ್ದುಲ್ ಸಮದ್ ತಾವು ಸೈಕಲ್ ಖರೀದಿಸುವ ಬಯಕೆಯಿಂದ ಸಂಗ್ರಹಿಸಿದ್ದ1224 ರೂ.ವನ್ನು ಮುಖ್ಯಮಂತ್ರಿಯ ವಿಪತ್ತು ನಿವಾರಣೆ ನಿಧಿಗೆಹಸ್ತಾಂತರಿಸಿದ್ದಾರೆ.
ಕಾಸರಗೋಡು ತಹಸೀಲ್ದಾರ್ ಎ.ವಿ.ರಾಜನ್‍ಮೊಬಲಗು ಪಡೆದುಕೊಂಡರು. ಈ ಮಕ್ಕಳ ತಂದೆ ಸಿರಾಜ್ ವಾಹನ ಅಫಘಾತಕ್ಕೆ ಸಿಲುಕಿ ಗಂಭೀರ ಗಾಯಗೊಂಡು ಅನೇಕ ತಿಂಗಳುಗಳಿಂದ ಹಾಸಿಗೆ ಹಿಡಿದಿದ್ದಾರೆ.ಕಾನತ್ತೂರು ಪಯೋಲ್ ನಿವಾಸಿ ತೆಂಗಿನ ಮರವೇರುವ ಕಾರ್ಮಿಕ ವಿ.ಪ್ರಕಾಶನ್ 5100 ರೂ. ವನ್ನುಮುಖ್ಯಮಂತ್ರಿ ಅವರ ವಿಪತ್ತು ನಿವಾರಣೆ ನಿಧಿಗೆ ಹಸ್ತಾಂತರಿಸಿದ್ದಾರೆ. ಕಾರಡ್ಕ ಬ್ಲೋಕ್ ಪಂಚಾಯಿತಿ ಅಧ್ಯಕ್ಷೆ ಓಮನಾ ರಾಮಚಂದ್ರನ್‍ಅವರು ಈ ಮೊತ್ತವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಹಸ್ತಾಂತರಿಸಿದರು.