HEALTH TIPS

ಲಾಕ್ ಡೌನ್ ಹಿನ್ನೆಲೆ-ಸರ್ಕಾರಿ ಕಚೇರಿಗಳಿಗೆ ಶನಿವಾರ ರಜೆ

   
       ಕಾಸರಗೋಡು: ರಾಜ್ಯ ಸರ್ಕಾರದ ಆದೇಶ ಪ್ರಕಾರ ಎಲ್ಲ ಸರ್ಕಾರಿ ಕಚೇರಿಗಳು ಚಟುವಟಿಕೆ ನಡೆಸಬೇಕು. ಅನಿವಾರ್ಯ ಸೇವೆಗಳಲ್ಲದ ಸರ್ಕಾರಿ ಕಚೇರಿಗಳಲ್ಲಿ ಗ್ರೂಪ್ ಎ ಮತ್ತು ಬಿ ಸಿಬ್ಬಂದಿ ಶೇ 50, ಗ್ರೂಪ್ ಸಿ ಮತ್ತು ಡಿ ಸಿಬ್ಬಂದಿ ಶೇ 33 ಕಚೇರಿಗೆ ಹಾಜರಾಗಬೇಕು. ಲಾಕ್ ಡೌನ್ ಆದೇಶ ಜಾರಿಯಲ್ಲಿರುವವರೆಗೆ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಿಗೆ ಶನಿವಾರ ರಜೆಯಿರುವುದು.
      ಹಾಟ್ ಸ್ಪಾಟ್ ಗಳಲ್ಲದೇ ಇರುವ ಪ್ರದೇಶಗಳಲ್ಲಿ (ಭಾನುವಾರ ಹೊರತು ಪಡಿಸಿ) ಎಲ್ಲ ದಿನ ನಡೆಸಬಹುದಾದ ಚಟುವಟಿಕೆಗಳು ಇಂತಿವೆ. ಕೃಷಿ ವಲಯಗಳ ಚಟುವಟಿಕೆಗಳು, ಸರ್ಕಾರಿ ವಲಯಗಳಲ್ಲಿ ಅಂತಿಮ ಹಂತದಲ್ಲಿರುವ ಕಟ್ಟಡ ನಿರ್ಮಾಣ ಚಟುವಟಿಕೆಗಳು.(ನೂತನ ಕಟ್ಟಡ ನಿರ್ಮಾಣ ನಡೆಸುವಂತಿಲ್ಲ.), ನೀರಾವರಿ, ಜಲಪ್ರಾಧಿಕಾರ ವ್ಯಾಪ್ತಿಯಲ್ಲಿ ನಿಗದಿ ಪಡಿಸಲಾದ ಅವಧಿಯಲ್ಲಿ ಪೂರ್ತಿಗೊಳಿಸಬೇಕಾದ ನಿರ್ಮಾಣ ಚಟುವಟಿಕೆಗಳು, ಸಾರ್ವಜನಿಕ ಆಸ್ತಿ ನಿರ್ಮಾಣ, ಪುನರ್ ನಿರ್ಮಾ ಣಕ್ಕೆ ಮಾತ್ರವಿರುವ ಉದ್ಯೋಗ ಖಾತ್ರಿ ಯೋಜನೆಯ ಚಟುವಟಿಕೆಗಳು(5 ಮಂದಿಯ ಗುಂಪು ಮಾತ್ರ ನಡೆಸಬೇಕಾದ ಎಲ್ಲ ಮಾನದಂಡಗಳನ್ನು ಬಳಸಬೇಕು.), ಅಂತಿಮ ಹಂತದಲ್ಲಿರುವ ಖಾಸಗಿ ಭವನಗಳ ನಿರ್ಮಾಣ ಪೂರ್ತೀ ಕರಣದ ಚಟುವಟಿಕೆಗಳು, ಈ ಸಂಬಂಧ ಬಡಗಿ ಕಾಯಕಗಳು(ಮರದ ಕೆಲಸಗಳು.) ಚಟುವಟಿಕೆ ನಡೆಸಬಹುದು. ಆದರೆ ಪೀಠೋಪಕರಣಗಳ ಘಟಕಗಳ ಚಟುವಟಿಕೆ ಸಲ್ಲದು. ಮರದ ಮಿಲ್ಲುಗಳು, ಪ್ಲೈ ವುಡ್ ಸಂಸ್ಥೆಗಳು, ಅಲ್ಯುಮಿನಿಯಂ ಫ್ಯಾಬ್ರಿಕೇಷನ್, ಇಂಜಿನಿಯರಿಂಗ್‍ವಕ್ರ್ಸ್(ವೆಲ್ಡಿಂಗ್) ಇತ್ಯಾದಿಗಳನ್ನು ನಿಗದಿ ಪಡಿಸಲಾದ ಸಿಬ್ಬಂದಿಗಳನ್ನು ಬಳಸಿ, ಕೋವಿಡ್ ಸುರಕ್ಷಾ ಕಟ್ಟುನಿಟ್ಟುಗಳ ಅನ್ವಯ ಚಟುವಟಿಕೆ ನಡೆಸಬಹುದು. ಮೀನುಗಾರಿಕೆ, ತ್ಯಾಜ್ಯ ಸಂಸ್ಕರಣೆ, ಅಕ್ಷಯ ಕೇಂದ್ರಗಳು (ಹವಾನಿಯಂತ್ರಿತ ವ್ಯವಸ್ಥೆಗಳಿಲ್ಲದೆ,ಏಕಕಾಲಕ್ಕೆ ಒಬ್ಬರು ಮಾತ್ರ ಕಚೇರಿಯೊಳಗೆ ಪ್ರವೇಶಿಸುವ ರೀತಿ) ಚಟುವಟಿಕೆ ನಡೆಸಬಹುದು. ಅಂಗೀಕಾರ ಹೊಂದಿರುವ ಕರ್ಗಲ್ಲಕೋರೆಗಳು, ಕ್ರಷರ್ ಗಳು ಕಾರ್ಯಾಚರಿಸಬಹುದಾಗಿದೆ.
ಹಾಟ್ ಸ್ಪಾಟ್ ಗಳಲ್ಲದ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಡುಗೆ ಮಾಡಿ ಆಹಾರವನ್ನು ಆಯಾ ಪಂಚಾಯಿತಿ/ ನಗರಸಭೆ ಪ್ರದೇಶಗಳಲ್ಲಿ ಮಾನದಂಡ ಪಾಲಿಸಿ ಹೋಂ ಡೆಲಿವರಿ ನಡೆಸಬಹುದು. ಸರ್ಕಾರಿನಿಬಂಧನೆಗಳನ್ನು ಪಾಲಿಸಿ ವಿವಾಹ, ಮರಣೋತ್ತರ ಕಾರ್ಯಕ್ರಮಗಳನ್ನು ಗರಿಷ್ಠ 20 ಮಂದಿ ಭಾಗವಹಿಸುವಂತೆ ನಡೆಸಬಹುದು. ಸಾರ್ವಜನಿಕ ಕೇಂದ್ರಗಳನ್ನು (ಆರಾಧನಾಲಯಗಳನ್ನು) ಹೊರತುಪಡಿಸಿಕಾರ್ಯಕ್ರಮ ನಡೆಸಬಹುದಾಗಿದೆ. .ಭಾನುವಾರ ಪೂರ್ಣ ರೂಪದ ಲಾಕ್ ಡೌನ್ ಆಗಿರಲಿದ್ದು, ಈ ದಿನದಂದು ಜಿಲ್ಲೆಯಲ್ಲಿ ಯಾವ ಸಂಸ್ಥೆಗಳೂ, ಅಂಗಡಿಗಳೂ ಚಟುವಟಿಕೆ ನಡೆಸುವಂತಿಲ್ಲ. ವಾಹನಗಳೂ ಸಂಚಾರ ನಡೆಸಕೂಡದು ಎಂದವರು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries