ವಾಷಿಂಗ್ಟನ್: ಮಾರಕ ಕೊರೋನಾ ವೈರಸ್ ನಿಂದ ತತ್ತರಿಸಿ ಹೋಗಿದ್ದ ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಕಡಿಮೆ ಪ್ರಮಾಣ ಹೊಸ ಸೋಂಕಿತರ ಸಂಖ್ಯೆ ಕಂಡುಬಂದಿದೆ.
ನಿನ್ನೆ ಒಂದೇ ದಿನ ಅಮೆರಿಕದಲ್ಲಿ 1,015 ಹೊಸ ಪಾಸಿಟಿವ್ ಪ್ರಕರಣಗಳು ಕಂಡುಬಂದಿತ್ತು. ಇದು ಅಮೆರಿಕದಲ್ಲಿ ದಾಖಲಾದ ಒಂದು ದಿನದ ಕನಿಷ್ಠ ಸೋಂಕಿತರ ಪ್ರಮಾಣವಾಗಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ವರದಿ ನೀಡಿದೆ.
ಕಳೆದ ಒಂದು ತಿಂಗಳಿನಿಂದ ಅಮೆರಿಕದಲ್ಲಿ ಕೊರೋನಾ ವೈರಸ್ ಆರ್ಭಟ ಜೋರಾಗಿತ್ತು. ಆದರೆ ನಿನ್ನೆ ಕೊಂಚ ತಗ್ಗಿದ್ದು ತಿಂಗಳಲ್ಲೇ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಕನಿಷ್ಠ ಹೊಸ ಸೋಂಕಿತರ ಪ್ರಮಾಣ ದಾಖಲಾಗಿದೆ. ಅಂತೆಯೇ ಅಮೆರಿಕದಲ್ಲಿ ಈ ವರೆಗೂ ಕೊರೋನಾ ವೈರಸ್ ಗೆ 68,689ಮಂದಿ ಬಲಿಯಾಗಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಅಮೆರಿಕದಲ್ಲಿ ಕೊರೋನಾ ವೈರಸ್ ಗೆ ಕನಿಷ್ಠ 1 ಲಕ್ಷದಿಂದ 2.5 ಲಕ್ಷದವರೆಗೂ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.