ಕಾಸರಗೋಡು: ಕೋವಿಡ್-19 ಹಿನ್ನೆಲೆಯಲ್ಲಿ ಚಟುವಟಿಕೆ ಸ್ಥಗಿತಗೊಳಿಸಲಾಗಿದ್ದ ಕಾಸರಗೋಡು ಜಿಲ್ಲೆಯ ಇಲೆಕ್ಟ್ರಿಕಲ್ ಸೆಕ್ಷನ್ ಕಚೇರಿಗಳ ಕ್ಯಾಷ್ ಕೌಂಟರ್ಗಳು ಮೇ 4ರಿಂದ ಚಟುವಟಿಕೆ ಆರಂಭಿಸಲಿವೆ. ಈ ವೇಳೆ ಜನನಿಭಿಡತೆ ನಿಯಂತ್ರಿಸುವ ನಿಟ್ಟಿನಲ್ಲಿ ಹಣಪಾವತಿಗೆ ಗ್ರಾಹಕ ನಂಬ್ರ ಹಿನ್ನೆಲೆಯಲ್ಲಿ ದಿನಾಂಕ ನಿಗದಿ ಪಡಿಸಲಾಗಿದೆ.
ಕನ್ಸ್ಯೂ ಮರ್ ನಂಬ್ರ 0(ಸೊನ್ನೆ)ಯಲ್ಲಿ ಕೊನೆಗೊಳ್ಳುವ ಮಂದಿ ಮೇ 4ರಂದು ಹಣ ಪಾವತಿಸಬಹುದು. ಕನ್ಸ್ಯೂ ಮರ್ ನಂಬ್ರ 1 ರಲ್ಲಿ ಕೊನೆಗೊಳ್ಳುವ ಮಂದಿ ಮೇ 5ರಂದು, 2ರಲ್ಲಿ ಕೊನೆಗೊಳ್ಳುವವರು ಮೇ 6ರಂದು ಹಣಪಾವತಿಸಬಹುದು. ಕನ್ಸ್ಯೂ ಮರ್ ನಂಬ್ರ 3ರಲ್ಲಿ ಕೊನೆಗೊಳ್ಳುವ ಮಂದಿ ಮೇ 7ರಂದು, 4ರಲ್ಲಿ ಕೊನೆಗೊಳ್ಳುವ ಮಂದಿ ಮೇ 8ರಂದು, 5ರಲ್ಲಿ ಕೊನೆಗೊಳ್ಳುವ ಮಂದಿ ಮೇ 11ರಂದು, ಕನ್ಸ್ಯೂ ಮರ್ ನಂಬ್ರ 6ರಲ್ಲಿ ಕೊನೆಗೊಳ್ಳುವ ಮಂದಿ ಮೇ 12ರಂದು, 7ರಂದು ಕೊನೆಗೊಳ್ಳುವ ಮಂದಿ ಮೇ 13ರಂದು, 8ರಲ್ಲಿ ಕೊನೆಗೊಳ್ಳುವ ಕನ್ಸ್ಯೂ ಮರ್ ನಂಬ್ರದವರು ಮೇ 14ರಂದು, 9ರಲ್ಲಿ ಕೊನೆಗೊಳ್ಳುವ
ಕನ್ಸ್ಯೂ ಮರ್ ನಂಬ್ರ ಹೊಂದಿರುವವರು ಮೇ 15ರಂದು ಹಣ ಪಾವತಿಸಬಹುದಾಗಿದೆ.