ತಿರುವನಂತಪುರ: ರಾಜ್ಯದಲ್ಲಿ ಮತ್ತೊಮ್ಮೆ ನೆಮ್ಮದಿಯ ದಿನವಾಗಿದೆ. ನಿನ್ನೆ ಯಾರಿಗೂ ಕೂಡ ಕೋವಿಡ್ -19 ದೃಢಿಕರಿಸಲ್ಪಟ್ಟಿಲ್ಲ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದರು.
ಕಣ್ಣೂರು ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಸರಗೋಡು ನಿವಾಸಿಯೊಬ್ಬರ ತಪಾಸಣಾ ಫಲಿತಾಂಶ ನಕಾರಾತ್ಮಕವಾಗಿ ಗುಣಮುಖರಾದರು. ಇದರೊಂದಿಗೆ ಈವರೆಗೆ 401 ಜನರು ಕೋವಿಡ್‍ನಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ 95 ಜನರು ರಾಜ್ಯದಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 21,720 ಜನರು ಕ್ವಾರೆಂಟೈನ್‍ನಲ್ಲಿದ್ದಾರೆ. ಈ ಪೈಕಿ 21,332 ಜನರು ಮನೆಗಳಲ್ಲಿ ಮತ್ತು 388 ಜನರು ಆಸ್ಪತ್ರೆಗಳಲ್ಲಿ ಕ್ವಾರೆಂಟೈನ್‍ನಲ್ಲಿರುವವರು. 63 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯವರೆಗೆ, 32,217 ವ್ಯಕ್ತಿಗಳ (ಓಗ್ಮೆಂಟ್ಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಲಭ್ಯವಾದ 31,611 ಮಾದರಿಗಳ ಪರಿಶೋಧನೆ ಫಲಿತಾಂಶ ಋಣಾತ್ಮಕವಾಗಿದೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ಭಾಗವಾಗಿ ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು ಮತ್ತು ಸಾಮಾಜಿಕ ಸಂಪರ್ಕಗಳಲ್ಲಿ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 2391 ಮಾದರಿಗಳನ್ನು ಸಂಗ್ರಹಿಸಿದರಲ್ಲಿ ಲಭ್ಯವಾದ 1683 ಮಾದರಿಗಳು ನಕಾರಾತ್ಮಕವಾಗಿವೆ. ರಾಜ್ಯದಲ್ಲಿ ಇಂದು 4 ಹೊಸ ಹಾಟ್ ಸ್ಪಾಟ್‍ಗಳನ್ನು ಕೂಡ ಸೇರಿಸಲಾಗಿದೆ. ವಯನಾಡ್ ಜಿಲ್ಲೆಯ ಮನಂತವಾಡಿ, ಎರ್ನಾಕುಲಂ ಜಿಲ್ಲೆಯ ಎಡಕ್ಕಟ್ಟುವಾಯಲ್ ಪಂಚಾಯತ್, ಮಂಜಲ್ಲೂರು ಪಂಚಾಯತ್ ಮತ್ತು ಇಡುಕ್ಕಿ ಜಿಲ್ಲೆಯ ಸಂತನಪಾರ ಪಂಚಾಯತ್ ಮುಂತಾದುಗಳು ಹೊಸ ಹಾಟ್ ಸ್ಪಾಟ್‍ಗಳು. ಇದರೊಂದಿಗೆ ಹಾಟ್ ಸ್ಪಾಟ್‍ಗಳ ಸಂಖ್ಯೆ 84 ಕ್ಕೆ ಏರಿತು.