HEALTH TIPS

ಯುರೋಪ್ ಕೊರೊನಾ ವೈರಸ್ ಹಿಡಿತದಲ್ಲಿದೆ - ವಿಶ್ವ ಆರೋಗ್ಯ ಸಂಸ್ಥೆ

       ಜಿನೇವಾ: ಜಾಗತಿಕ ಮಟ್ಟದ ಪ್ರಕರಣಗಳಲ್ಲಿ ಶೇ 63ರಷ್ಟು ಸಾವುಗಳುಂಟಾಗಿವೆ. ಯುರೋಪಿಯನ್ ಪ್ರಾಂತ್ಯದಲ್ಲಿ ಶೇ 45ರಷ್ಟು ಪ್ರಕರಣಗಳು ವರದಿಯಾಗಿವೆ. ಯುರೋಪ್ ಇನ್ನೂ ವೈರಸ್‍ನ ನಿಯಂತ್ರಣದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪಿಯನ್ ಕಚೇರಿಯ ಮುಖ್ಯಸ್ಥ ಡಾ.ಹ್ಯಾನ್ಸ್ ಕ್ಲುಗೆ ಎಚ್ಚರಿಕೆ ನೀಡಿದ್ದಾರೆ.
      ನಿಬರ್ಂಧಿತ ಕ್ರಮಗಳನ್ನು ಅನೇಕ ದೇಶಗಳು ಸಡಿಲಗೊಳಿಸುತ್ತಿವೆ. ಆದರೆ, ಯುರೋಪ್ ಇನ್ನೂ ಕೊರೊನಾ ವೈರಸ್ ಹಿಡಿತದಲ್ಲಿದೆ ಎಂದು ತಿಳಿಸಿದೆ. ಕೊರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿರುವ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಕ್ಕೆ ಧನ್ಯವಾದ ಸಲ್ಲಿಸಿರುವ ಡಾ.ಹ್ಯಾನ್ಸ್ ಅವರು, ಈ ಸಕಾರಾತ್ಮಕ ಅಭಿವೃದ್ದಿಯನ್ನು ನಾವು ತುಂಬಾ ಸೂಕ್ಷ್ಮವಾಗಿ ಗಮನಿಸಬೇಕು ಎಂದಿದ್ದಾರೆ. ಸ್ಪೇನ್, ಜರ್ಮನಿ, ಫ್ರಾನ್ಸ್, ಇಟಲಿ ಹಾಗೂ ಬ್ರಿಟನ್ ದೇಶಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರಕರಣಗಳಿವೆ. ಅಲ್ಲದೇ, ಕಜಗಿಸ್ತಾನ, ಉಕ್ರೇನ್, ಬೆಲರಸ್ ಹಾಗೂ ರಷ್ಯಾ ದೇಶಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಯುರೋಪಿಯನ್ ಪ್ರಾದೇಶಿಕ ಘಟಕ ಲಾಕ್‍ಡೌನ್ ಹೇರಿದ್ದ 44 ದೇಶಗಳಲ್ಲಿ ಇದೀಗ 21 ದೇಶಗಳು ನಿಬರ್ಂಧ ಸಡಿಲ ಮಾಡಿವೆ. ಇನ್ನೂ 11 ರಾಷ್ಟ್ರಗಳು ಮುಂದಿನ ದಿನಗಳಲ್ಲಿ ನಿಬರ್ಂಧ ಸಡಿಲಿಕೆ ಮಾಡುವ ಉದ್ದೇಶ ಹೊಂದಿವೆ ಎಂದು ಅವರು ತಿಳಿಸಿದರು.
       ಈ ವೈರಸ್‍ಗೆ ಕ್ಷಮಾಗುಣವಿಲ್ಲ. ನಾವು ಎಚ್ಚರಿಕೆ ವಹಿಸಬೇಕು. ಇದಕ್ಕಾಗಿ ನಾವು ತಾಳ್ಮೆಯಿಂದ ಇರಲು ಪ್ರಯತ್ನಿಸಬೇಕು. ಅಗತ್ಯ ಕಂಡುಬಂದಲ್ಲಿ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ದವಾಗಬೇಕು. ಸದ್ಯಕ್ಕೆ ಕೊರೊನಾ ಸೋಂಕು ಹೋಗುವ ಲಕ್ಷಣವಿಲ್ಲ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries