ಕುಂಬಳೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು ಕುಡಿತದಿಂದ ಮುಕ್ತರಾದವರ ನವಜೀವನ ಸಮಿತಿಯೊಂದರ ಮಾದರಿ ಸೇವೆ ಗಮನ ಸೆಳೆದಿದೆ.
ಕಳತ್ತೂರು ಶ್ರೀನಗರ ನವಜೀವನ ಸಮಿತಿಯ ಸದಸ್ಯರು ಕೋವಿಡ್ 19 ಲಾಕ್ ಡೌನ್ ಸಂದರ್ಭ ಸಂಕಷ್ಟದಲ್ಲಿರುವ ನವಜೀವನ ಸಮಿತಿ ಸದಸ್ಯರಿಗೆ ಅಕ್ಕಿ ಸಹಿತ ವಿವಿಧ ಧವಸ ಧಾನ್ಯಗಳು, ತರಕಾರಿ ಕಿಟ್ ಗಳನ್ನು ವಿತರಿಸಿ ನೆರವಾಗುವ ಮೂಲಕ ಪ್ರತಿಕೂಲ ಸ್ಥಿತಿಯಲ್ಲಿ ನೆರವಾಗಿ ಮಾದರಿಯಾಗಿರುವರು.