ನವದೆಹಲಿ: ಮಾರಕ ಕೊರೋನಾ ವೈರಸ್ ಆರ್ಭಟದ ನಡುವೆಯೇ ವಲಸೆ ಕಾರ್ಮಿಕರ ರವಾನೆ ವಿಚಾರ ಭಾರಿ ಸುದ್ದಿಗೆ ಗ್ರಾಸವಾಗುತ್ತಿದ್ದು, ಇದೇ ವಿಚಾರವಾಗಿ ಬಿಜೆಪಿ ನಾಯಕ ಹಾಗೂ ಬಿಜೆಪಿ ರಾಜ್ಯಸಭಾ ಸದಸ್ಯ ತಮ್ಮದೇ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ವಲಸೆ ಕಾರ್ಮಿಕರ ರವಾನೆ ವಿಚಾರವಾಗಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಟ್ವಿಟರ್ ನಲ್ಲಿ ಟೀಕೆ ಮಾಡಿದ್ದು, ವಿದೇಶದಲ್ಲಿರುವ ಭಾರತೀಯರನ್ನು ಕರೆತರಲು ಉಚಿತ ವಿಮಾನ ಸೇವೆ ನೀಡುವ ಸರ್ಕಾರ ದೇಶದಲ್ಲಿರುವ ವಲಸೆ ಕಾರ್ಮಿಕರ ರವಾನೆಗೆ ಟಿಕೆಟ್ ದರ ಪಡೆಯುತ್ತಿದೆ. ಎಂತಹ ಮೂರ್ಖ ಸರ್ಕಾರ ಎಂದು ಟೀಕಿಸಿದ್ದಾರೆ.
ಜೊತೆಗೆ ಕಾರ್ಮಿಕರ ಸಂಚಾರಿ ವೆಚ್ಚವನ್ನು ರೈಲ್ವೇ ಇಲಾಖೆ ಭರಿಸದಿದ್ದರೆ, ಪಿಎಂ ಕೇರ್ಸ್ ಫಂಡ್ ಏಕೆ ಭರಿಸಬಾರದು ಎಂದು ಕೇಳಿದ್ದಾರೆ. ಇದೇ ವಿಚಾರವಾಗಿ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಚರ್ಚೆ ಮಾಡಿದ್ದು, ಅವರು ಕಾರ್ಮಿಕರ ಸಂಚಾರಿ ವೆಚ್ಚದ ಶೇ.85ರಷ್ಟು ಹಣವನ್ನು ಕೇಂದ್ರ ಸರ್ಕಾರ ಮತ್ತು ಶೇ.15ರಷ್ಟು ಹಣವನ್ನು ರಾಜ್ಯ ಸರ್ಕಾರಗಳು ಭರಿಸಲಿವೆ ಎಂದು ಭರವಸೆ ನೀಡಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ಟೀಕೆ:
ಇದೇ ವೇಳೆ ಕೇಂದ್ರ ಸರ್ಕಾರದ ಈ ನಡೆಗೆ ಕಾಂಗ್ರೆಸ್ ಕಾರಣ ಎಂದು ನೇರ ಟೀಕೆ ಮಾಡಿರುವ ಸ್ವಾಮಿ, ಇಂದಿಗೂ ಸರ್ಕಾರದ ಹಲವು ಇಲಾಖೆಗಳಲ್ಲಿ ಕಾಂಗ್ರೆಸ್ ಪರ ಒಲವಿರುವ ಹಲವು ಅಧಿಕಾರಿಗಳು ಇದ್ದಾರೆ. ಅವರೇ ಇಲಾಖೆಗಳನ್ನು ನಿಯಂತ್ರಿಸುತ್ತಿದ್ದಾರೆ. ಇಂತಹ ಅಧಿಕಾರಿಗಳನ್ನು ಮೊದಲು ಎತ್ತಂಗಡಿ ಮಾಡಬೇಕು ಈ ಬಗ್ಗೆ ಮೊದಲೇ ನಾನು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದೆ ಎಂದು ಹೇಳಿದ್ದಾರೆ.
How moronic of the Government of India to charge steep rail fares from the half starved migrant labourers! Indians stranded abroad were brought back free by Air India. If Railways refuse to budge then why not make PM CARES pay instead?
15.6K people are talking about this
Talked Piyush Goel office. Govt will pay 85% and State Govt 15% . Migrant labour will go free. Ministry will clarify with an official statement
17.5K people are talking about this
I have warned many times that Congi rogues still control our bureaucracy and MSMs. Otherwise would the officer who diligently prosecuted PC be sent Show Cause Notice at the behest of an Officer who has since been twice promoted? Gobar for Hindutva & laddoo for chors
5,605 people are talking about this
When C’shekhar govt took office, the first thing I said to him: “Sack your PMO. They are all hostile to us.” He to me : “Tum karo. Mey khoon kharaba nai kar sakta hoon merey dost ka (Cab Sec was Prayagraj buddy). I did. I later took back as my Secy Montek as MMS requested me.
1,412 people are talking about this