ಕಾಸರಗೋಡು: ಲಾಕ್ ಡೌನ್ ಆದೇಶ ಜಾರಿಗೊಂಡಿರುವ ಹಿನ್ನೆಲೆಯಲ್ಲಿ ಜೀವರಕ್ಷಣೆ ಔಷಧಗಳನ್ನು ಖರೀದಿಸಲು ಸಾಧ್ಯವಾಗದೇ ಸಂಕಷ್ಟ ಅನುಭವಿಸುತ್ತಿರುವ ಬಡ ರೋಗಿಗಳಿಗೆ ಈ ಔಷಧಗಳನ್ನು ಉಚಿತವಾಗಿ ವಿತರಣೆ ನಡೆಸಲು ನೀಲೇಶ್ವರ ನಗರಸಭೆ ನಿರ್ಧರಿಸಿದೆ.
ಡಯಾಲಿಸಿಸ್ ಗೆ ಒಳಗಾಗುವವರು, ಅವಯವ ಬದಲಿಸಲಾದವರು, ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರು ಸಹಿತ ಜೀವರಕ್ಷಣೆ ಔಷಧ ವನ್ನು ನೀಲೇಶ್ವರ ತಾಲೂಕು ಆಸ್ಪತ್ರೆ ಮೂಲಕ ಉಚಿತವಾಗಿ ವಿತರಿಸಲು ನಗರಸಭೆ ತೀರ್ಮಾನಿಸಿದೆ. ವೈದ್ಯರ ಚೀಟಿ ಸಹಿತ ತಾಲೂಕು ಆಸ್ಪತ್ರೆಯ ವರಿಷ್ಠಾಧಿಕಾರಿ ಅವರನ್ನು ಭೇಟಿ ಮಾಡಿ ಔಷಧ ಪಡೆದುಕೊಳ್ಳುವಂತೆ ವ್ಯವಸ್ಥೆ ನಡೆಸಲು ನಿರ್ಧರಿಸಲಾಗಿದೆ.
ಈ ಸಂಬಂಧ ನಡೆದ ಸಭೆಯಲ್ಲಿ ಅಧ್ಯಕ್ಷ ಪೆÇ್ರ. ಕೆ.ಪಿ.ಜಯರಾಜನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವಿ.ಗೌರಿ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಕುಂuಟಿಜeಜಿiಟಿeಜಕಣ್ಣನ್, ಪಿ.ರಾಧಾ, ಪಿ.ಎಂ.ಸಂಧ್ಯಾ, ಪಿ.ಪಿ.ಮಹಮ್ಮದ್ ರಫಿ, ಸದಸ್ಯರಾದ ಎರುವಾಟ್ ಮೋಹನನ್, ಪಿ.ಭಾರ್ಗವಿ, ಎ.ವಿ.ಸುರೇಂದ್ರನ್, ಕೆ.ವಿ.ಸುಧಾಕರನ್ ಮೊದಲಾದವರು ಉಪಸ್ಥಿತರಿದ್ದರು.