ಮಂಜೇಶ್ವರ: ಇತರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರನ್ನು ಕಡ್ಡಾಯ ನಿಗಾದಲ್ಲಿ ಇರಿಸಲಾಗುವುದು ಎಂದು ಐ.ಜಿ.ವಿಜಯ್ ಸಖಾರೆ ತಿಳಿಸಿದ್ದಾರೆ.
ತಲಪ್ಪಾಡಿಯ ಗಡಿ ಚೆಕ್‍ಪೆÇೀಸ್ಟ್‍ಗೆ ಆಗಮಿಸುವ ಜಿಲ್ಲೆಯ ಮೂಲನಿವಾಸಿಗಳನ್ನು ಪೆÇಲೀಸರ ಎಸ್ಕಾರ್ಟ್ ನೊಂದಿಗೆ ಮನೆಗಳಿಗೆ ತಲಪಿಸಲಾಗುವುದು. ಈ ನಿಟ್ಟಿನಲ್ಲಿ ಅವರ ಪ್ರತಿ ವಾಹನದೊಂದಿಗೆ ಪೆÇಲೀಸ್ ವಾಹನವೂ ಇರುವುದು. ರೋಗ ಲಕ್ಷಣ ಹೊಂದಿದವರನ್ನು ಸರ್ಕಾರ ಸಿದ್ಧಪಡಿಸಿರುವ ನಿಗಾ ಕೇಂದ್ರಗಳಲ್ಲಿ ದಾಖಲಿಸಲಾಗುವುದು. ರೋಗ ಲಕ್ಷಣ ಹೊಂದದೇ ಇರುವ ಮಂದಿಯನ್ನು ಅವರ ನಿವಾಸದಲ್ಲಿ ನಿಗಾದಲ್ಲಿ ಇರಿಸಲಾಗುವುದು. ಯಾವ ಕಾರಣಕ್ಕೂ ಅವರು 14 ದಿನಗಳ ಕಾಲ ಹೊರಗಿಳಿಯದಂತೆ, ಮನೆಯ ಇತರ ಸದಸ್ಯರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಇತರ ಸುರಕ್ಷಾ ಕ್ರಮಗಳನ್ನು ಪಾಲಿಸುವಂತೆ ಮುಂಜಾಗರೂಕ ಕ್ರಮಗಳನ್ನು ಕಡ್ಡಾಯಗೊಳಿಸಲಾಗುವುದು. ಈ ಮನೆ ಮತ್ತು ಆಸುಪಾಸಿನ ಪ್ರದೇಶಗಳು ಟ್ರಿಪ್ಪಲ್ ಲಾಕ್ ಡೌನ್ ವ್ಯಾಪ್ತಿಯಲ್ಲಿರುವುದು. ಒಬ್ಬ ಪೆÇಲೀಸ್ ಸಿಬ್ಬಂದಿ ಮತ್ತು ಗಸ್ತು ತಂಡ ಇಲ್ಲಿ ನಿಗಾ ಇರಿಸುವರು. ನಿಗಾದಲ್ಲಿರುವ ವ್ಯಕ್ತಿ ಯಾವ ಕಾರಣಕ್ಕೂ ಮನೆಯಿಂದ ಹೊರಗಿಳಿಯುತ್ತಿಲ್ಲ ಎಂದು ಖಚಿತಪಡಿಸುವರು.
ಇತರ ಜಿಲ್ಲೆಗಳಿಗೆ ತೆರಳಬೇಕಾದವರು ತಮ್ಮ ಮಾಹಿತಿಯನ್ನು ಸ್ಥಳೀಯ ಪೆÇಲೀಸರಿಗೆ ಸಲ್ಲಿಸಬೇಕು. ಕಟ್ಟುನಿಟ್ಟು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೋವಿಡ್ 19 ಸೋಂಕು ಪ್ರತಿರೊಧ ಚಟುವಟಿಕೆಗಳಿಗೆ ಜನತೆಯ ಪೂರ್ಣ ಬೆಂಬಲಬೇಕು ಎಂದು ಐ.ಜಿ. ತಲಪ್ಪಾಡಿಯ ಅಂತರ್ ರಾಜ್ಯ ಗಡಿ ಚೆಕ್‍ಪೋಸ್ಟ್ ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಈ ಮಾಹಿತಿ ನೀಡಿದರು.