ನವದೆಹಲಿ: ಸಿಆರ್ ಪಿಎಫ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಚಾಲಕನಿಗೆ ಕೊರೋನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೆಹಲಿಯ ಸಿಆರ್ ಪಿಎಫ್ ಕಚೇರಿಯನ್ನು ಸೀಲ್ ಮಾಡಲಾಗಿದೆ.
ಭಾರತದಲ್ಲಿ ಸೋಂಕಿತರ ಸಂಖ್ಯೆ 39 ಸಾವಿರಕ್ಕೇರಿದ್ದು, ಸ್ಯಾನಿಟೈಸರ್ ಮಾಡುವ ಸಲುವಾಗಿ ಕಚೇರಿಗೆ ಬೀಗ ಹಾಕಲಾಗಿದೆ. ಮುಂದಿನ ಆದೇಶ ಹೊರಬೀಳುವವರೆಗೂ ಯಾರೋಬ್ಬರು ಕಟ್ಟಡ ಪ್ರವೇಶಿಸುವಂತಿಲ್ಲ ಎಂದು ಸೂಚಿಸಲಾಗಿದೆ.