ಕಾಸರಗೋಡು: ಕೋವಿಡ್ 19 ಸೋಂಕು ಪ್ರತಿರೋಧ ಚಟುವಟಿಕೆಗಳಲ್ಲಿ ಮಹಿಳಾ ಶಿಶು ಅಭಿವೃದ್ಧಿ ಇಲಾಖೆಯ ಎಲ್ಲ ಸಿಬ್ಬಂದಿ ಲಾಕ್ ಡೌನ್ ಜಾರಿಯಲ್ಲಿರುವ ವೇಳೆಯೂ ಪೂರ್ಣರೂಪದಲ್ಲಿ ಕರ್ತವ್ಯದಲ್ಲಿದ್ದಾರೆ.
ನ್ಯಾಷನಲ್ ನ್ಯೂಟ್ರೀಷಿಯನ್ ಮಿಷನ್ ಅಂಗವಾಗಿ ಐ.ಸಿ.ಡಿ.ಎಸ್. ಜಿಲ್ಲಾ ಮಟ್ಟದಲ್ಲಿ, ವಿವಿಧ ಐ.ಸಿ.ಡಿ.ಎಸ್. ಯೋಜನೆಗಳಲ್ಲಿ ನೇಮಕಗೊಂಡಿರುವ ಸಂಚಾಲಕರ ಮತ್ತು ಯೋಜನೆ ಸಹಾಯಕರ ಚಟುವಟಿಕೆಗಳು ಈಗಾಗಲೇ ನಾಡಿನ ಗಮನಸೆಳೆದಿದೆ. ಸಾಮಾಜಿಕ ಜಾಲ ತಾಣಗಳ ಮೂಲಕ ಆನ್ ಲೈ ಸರ್ವೆಯ ಮೂಲಕ ಇವರು ಪ್ರಧಾನ ಚಟುವಟಿಕೆ ನಡೆಸುತ್ತಿದ್ದಾರೆ. ಜಿಲ್ಲೆಯ ಮಹಿಳೆಯರ, ಮಕ್ಕಳ ಪೆÇೀಷಕಾಂಶ ಕೊರತೆ ಪರಿಹರಿಸುವ ನಿಟ್ಟಿನಲ್ಲಿ ನ್ಯಾಷನಲ್ ನ್ಯಟ್ರೀಷಿಯನ್ ಮಿಷನ್ ಪೆÇೀಷನ್ ಅಭಿಯಾನ್ ಅಂಗವಾಗಿ ರಾಜ್ಯ ಸರಕಾರವು ಶಿಶು ಅಭಿವೃದ್ಧಿ ಇಲಾಖೆ ಮೂಲಕ ರಚಿಸಿರುವ ಸಂಪುಷ್ಟ ಕೇರಳಂ ಯೋಜನೆಯ ಅಂಗವಾಗಿ ಜಿಲ್ಲಾ ಮತ್ತು ಬ್ಲೋಕ್ ಮಟ್ಟಗಳಲ್ಲಿ ಸಂಚಾಲಕರನ್ನು ಮತ್ತು ಯೋಜನೆ ಸಹಾಯಕರನ್ನು ನೇಮಿಸಲಾಗಿದೆ. ಸ್ಮಾರ್ಟ್ ಫೆÇೀನ್ ಗಳ ಮೂಲಕ ಪ್ರತಿ ಅಂಗನವಾಡಿ ಪ್ರದೇಶಗಳ ಮಂದಿಗೆ ಮಾಹಿತಿಗಳನ್ನು ಕೇಂದ್ರೀಕೃತ ಸರ್ವೆ ಗೆ ಅಪ್ ಲೋಡ್ ನಡೆಸಲಾಗುತ್ತಿದೆ. ಜೊತೆಗೆ ವಯವೃದ್ಧರ ಆರೈಕೆ ಸಹಿತ ವಿವಿಧ ಚಟುವಟಿಕೆಗಳು ಜಾರಿಯಲ್ಲಿವೆ.